ಮಲೆನಾಡಿನಲ್ಲಿ ನಿಗದಿಯಾಗಿದ್ದ ಮೊದಲ ಕಂಬಳ ರದ್ದಾಗಿದೆ. ಪ್ರಾಣಿ ದಯ ಸಂಘಟನೆ ಕೋರ್ಟ್ ಮೊರೆ ಹೋಗಿರುವ ಹಿನ್ನೆಲೆ ಶಿವಮೊಗ್ಗ ಕಂಬಳ ರದ್ದುಗೊಳಿಸಲಾಗಿದೆ. ಕೋರ್ಟ್ ತೀರ್ಪಿನ ನಂತರ ತೀರ್ಮಾನ ಕೈಗೊಳ್ಳಲು ಕಂಬಳ ಸಮಿತಿ ನಿರ್ಧರಿಸಿದೆ. ಶಿವಮೊಗ್ಗದ ಮಾಚೇನಹಳ್ಳಿಯಲ್ಲಿ ಏಪ್ರಿಲ್ 19 ಮತ್ತು 20ರಂದು ಕಂಬಳ ನಡೆಸಲು ನಿರ್ಧರಿಸಲಾಗಿತ್ತು.

ಮೂಡುಬಿದಿರೆಯ ಸೃಷ್ಟಿ ಗಾರ್ಡನ್ನಲ್ಲಿ ಕಂಬಳ ಸಮಿತಿ ಸಭೆ ನಡೆಯಿತು. ಇಲ್ಲಿ ಶಿವಮೊಗ್ಗ ಕಂಬಳ ರದ್ದುಗೊಳಿಸುವ ನಿರ್ಧಾರ ಕೈಗೊಳ್ಳಲಾಯಿತು. ಏ.19ರಂದು ಶಿವಮೊಗ್ಗ ಬದಲು ಬೈಂದೂರಿನಲ್ಲಿ ಕಂಬಳ ನಡೆಸುವ ತೀರ್ಮಾನ ಪ್ರಕಟಿಸಲಾಯಿತು. ಕಂಬಳ ಸಮಿತಿ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ, ಕಂಬಳ ಸಮಿತಿಯ ಪ್ರಧಾನ ಕಾರ್ಯದರ್ಶಿ ಲೋಕೇಶ್ ಶೆಟ್ಟಿ ಸೇರಿ ಹಲವರು ಸಭೆಯಲ್ಲಿ ಭಾಗವಹಿಸಿದ್ದರು.



