ದಕ್ಷಿಣ ಕನ್ನಡ : ದಕ್ಷಿಣ ಕನ್ನಡ ಕೃಷಿ ವಿಜ್ಞಾನ ಕೇಂದ್ರ ಹಾಗೂ ಕೃಷಿ ಇಲಾಖೆ ಮೂಡಬಿದಿರೆ ಸಹಯೋಗದಲ್ಲಿ ರೈತ ಸಂಪರ್ಕ ಕೇಂದ್ರ ಮೂಡುಬಿದರೆ ಇಲ್ಲಿ ಭಾರತೀಯ ಕೃಷಿ ಅನುಸಂಧಾನ ಪರಿಷತ್ ನವದೆಹಲಿ ಯ 95 ನೇ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ರೈತರಿಗೆ ಕೃಷಿ ತಂತ್ರಜ್ಞಾನಗಳ ಮಾಹಿತಿ ಹಾಗೂ ಪ್ರಧಾನ ಮಂತ್ರಿ ಬೆಳೆ ಯೋಜನೆ ಕುರಿತು ತರಬೇತಿ ಕಾರ್ಯಕ್ರಮ ವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಕೃಷಿ ವಿಜ್ಞಾನ ಕೇಂದ್ರ ಮಂಗಳೂರಿನ ಹಿರಿಯ ವಿಜ್ಞಾನಿಗಳು ಹಾಗೂ ಮುಖ್ಯಸ್ಥರಾದ ಡಾ. ಟಿ. ಜೆ. ರಮೇಶ ರವರು ಸ್ಥಳ ನಿರ್ದಿಷ್ಟ ತಂತ್ರಜ್ಞಾನ ಗಳ ಅಳವಡಿಕೆಗೆ ಹಾಗೂ ಕೃಷಿ ಸಂಭದಿತ ತಂತ್ರಜ್ಞಾನ ಬಳಕೆ, ಮೊಬೈಲ್ ಆಪ್ ಬಳಕೆ ಮಾಡುವಂತೆ ರೈತರಿಗೆ ತಿಳಿಸಿದರು. ಡಾ.ಕೇದಾರನಾಥ ವಿಜ್ಞಾನಿಗಳು (ಸಸ್ಯ ಸಂರಕ್ಷಣೆ) ಭಾಗವಹಿಸಿ ಭತ್ತ ಹಾಗೂ ತೋಟಗಾರಿಕೆ ಬೆಳೆಗಳಲ್ಲಿ ಕಂಡು ಬರುವ ರೋಗ ಮತ್ತು ಕೀಟಗಳ ಸಮಗ್ರ ನಿರ್ವಹಣೆ ಕುರಿತು ಮಾಹಿತಿ ನೀಡಿದರು. ಡಾ.ಮಲ್ಲಿಕಾರ್ಜುನ್ ವಿಜ್ಞಾನಿಗಳು ಹುಳಿ ಮಣ್ಣು ನಿರ್ವಹಣೆ ಮತ್ತು ಸಮರ್ಪಕ ರಸಗೊಬ್ಬರಗಳ ಸೂಕ್ತ ಮತ್ತು ಸಮರ್ಪಕ ಬಳಕೆ ಮಾಹಿತಿ ನೀಡಿದರು.ಡಾ.ಹರೀಶ್ ಶಣೈ ಬತ್ತದ ಬೆಳೆಯ ಸುಧಾರಿತ ಬೇಸಾಯ ಕ್ರಮಗಳ ಮತ್ತು ಹೊಸ ಬತ್ತದ ತಳಿಗಳ ಕುರಿತು ಮಾಹಿತಿ ನೀಡಿದರು. ಕರಾವಳಿ ಭಾಗದಲ್ಲಿ ಹೊಸ ಭತ್ತದ ತಳಿಗಳಾದ ಸೈಯಾದ್ರಿ ಪಂಚಮುಖಿ, ಸೈಯಾದ್ರಿ ಬ್ರಹ್ಮ, ಕೆಂಪು ಮುಕ್ತಿ ತಳಿಗಳು ಕರಾವಳಿ ಭಾಗದಲ್ಲಿ ಬೆಳೆಸಬಹುದಾಗಿದೆ ಎಂದರು. ಶ್ರೀ. ವಿ.ಎಸ್.ಕುಲಕರ್ಣಿ ಕೃಷಿ ಅಧಿಕಾರಿಗಳು ಅಧ್ಯಕ್ಷತೆಯನ್ನು ವಹಿಸಿ ಪ್ರಧಾನ್ ಮಂತ್ರಿ ಬೆಳೆ ವಿಮಾ ಯೋಜನೆ ಕುರಿತು ಮಾಹಿತಿ ನೀಡಿದರು. ವಿಮಾ ಅಧಿಕಾರಿಗಳಾದ ಸೋಮನಾಥ್ತ ಮತ್ತು ಪವನ್ ವಿಮೆ ಬಗ್ಗೆ ಮಾಹಿತಿ ಒದಗಿಸಿದರು, ರೈತರು ಇದರ ಸದ್ಬಳಕೆ ಮಾಡಬಹುದಾಗಿದ್ದು ಆಗಸ್ಟ್ 16ರ ಒಳಗಾಗಿ ವಿಮೆ ನೋಂದಣಿಗೆ ಸೂಚಿಸಲಾಯಿತು ಸಂಪರ್ಕ ಕೇಂದ್ರದ ಸಿಬ್ಬಂದಿಗಳಾದ ಯಲ್ಲನ್ ಗೌಡ, ಅನಾ ಲೋಬೊ, ಸುಜಯ, ಹರಿಣಾಕ್ಷಿ, ಜಯಂತಿ,ಹಾಗೂ ಕೃಷಿಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಕೃಷಿ ಅಧಿಕಾರಿ ಕುಲಕರ್ಣಿಯವರು ಸ್ವಾಗತ ಮತ್ತು ವಂದನಾರ್ಪಣೆಗೆದರು.
ಬಾವಿಗೆ ಬಿದ್ದ ಹೆಣ್ಣು ಮಗುವನ್ನು ಸ್ಥಳೀಯ ಯುವಕ ರಕ್ಷಿಸಿದ ಘಟನೆ ವರದಿಯಾಗಿದೆ. ಉಳ್ಳಾಲದಲ್ಲಿ ಆಟವಾಡುತ್ತಾ ಎರಡೂವರೆ ಹರೆಯದ ಮಗುವೊಂದು ದಂಡೆಯಿಲ್ಲದ…
ಸಮಾಜದಲ್ಲಿ ಒಡಕುಂಟು ಮಾಡಿ, ದ್ವೇಷವನ್ನು ಬಿತ್ತುವ ಹಾಗೂ ಶಾಂತಿಯನ್ನು ಕದಡಲು ಪ್ರಚೋದನಾತ್ಮಕ ಭಾಷಣವನ್ನು ಯಾರು ಮಾಡಿದರೂ, ಅವರ ಮೇಲೆ ಪ್ರಕರಣ…
ಕರಾವಳಿಯ ಗಂಡುಕಲೆ ಎಂದೇ ಪ್ರಸಿದ್ಧ ಪಡೆದಿರುವ ಯಕ್ಷಗಾನ ಉತ್ತರ ಪ್ರದೇಶದ ಶ್ರೀರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ ಪ್ರಪ್ರಥಮ ಬಾರಿಗೆ ಪ್ರದರ್ಶನವಾಗಿದೆ.…
ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ' ಕೃತಿಯನ್ನು ಬಿಡುಗಡೆ ಮಾಡಲಾಯಿತು. ಅಮೃತ ಪ್ರಕಾಶನದ 45ನೇ ಸರಣಿ ಕೃತಿ ಕೊಡಗಿನ ಚಿತ್ರ…
ಕಳೆದ ವಾರಗಳಿಂದೀಚೆಗೆ ಸುರಿಯುತ್ತಿರುವ ಮಳೆಗೆ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದಲ್ಲಿ ಮನೆಯೊಂದಕ್ಕೆ ಹಾನಿಯಾಗಿದೆ. ಇಡ್ಕಿದು ಗ್ರಾಮದ ಬಡಜ ಸುಧಾ ಎಂಬವರ…
ಕೇಂದ್ರ ಸರಕಾರದ ಪಿಎಂಇಜಿಪಿ ಯೋಜನೆ ಅಡಿಯಲ್ಲಿ ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿ ಕೋಟ್ಯಂತರ ರೂ. ಹಣ ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿ…