ರಾಯಲ್ ಚಾಲೆಂಜರ್ಸ್ ಬೆಂಗಳೂರು ಟೀಮ್ ಅಂದ್ರೆನೇ ಫ್ಯಾಷನ್, ಸ್ಟೈಲ್, ಕ್ರೇಜ್, ಲುಕ್ಗೆ ಹೆಸರುವಾಸಿ. ಸದ್ಯ ಈ ಬಾರಿಯ ಪಾಯಿಂಟ್ ಪಟ್ಟಿಯಲ್ಲಿ ಟಾಪ್ ಸ್ಥಾನ ಪಡೆದು ಟ್ರೋಫಿ ಗೆಲ್ಲುವ ಕಡೆಗೆ ಮುನ್ನುಗ್ಗುತ್ತಿದೆ. ಸೋಶಿಯಲ್ ಮೀಡಿಯಾದಲ್ಲೂ ಭರ್ಜರಿ ಅಭಿಮಾನಿಗಳನ್ನು ಸಂಪಾದಿಸಿರುವ ಆರ್ಸಿಬಿ, ಚೆನ್ನೈಯನ್ನು ಹಿಂದಿಕ್ಕಿರುವುದು ಫ್ಯಾನ್ಸ್ಗೆ ಖುಷಿ ಸಂಗತಿ ಆಗಿದೆ.

ಚೆನ್ನೈನಲ್ಲಿ ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಸೋಲಿಸಿರುವ ಆರ್ಸಿಬಿ, ಇನ್ಸ್ಟಾಗ್ರಾಮ್ ಫಾಲೋವರ್ಸ್ನಲ್ಲೂ ಅಗ್ರಸ್ಥಾನ ಪಡೆದುಕೊಂಡಿದೆ. ಇನ್ಸ್ಟಾದಲ್ಲಿ ಕೇವಲ ಚೆನ್ನೈ ತಂಡವನ್ನು ಮಾತ್ರವಲ್ಲ, ಉಳಿದ 8 ಟೀಮ್ಗಳನ್ನುನ ಆರ್ಸಿಬಿ ಹಿಂದಿಕ್ಕಿ ಟಾಪ್ನಲ್ಲಿದೆ. ಐಪಿಎಲ್ನ 10 ತಂಡಗಳಿಗಿಂತ ಅತಿ ಹೆಚ್ಚು ಫಾಲೋವರ್ಸ್ ಅನ್ನು ಆರ್ಸಿಬಿ ಹೊಂದಿದೆ.



