ಬಂಟ್ವಾಳ: ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಎಂ.ಪಿ ಅವರು ಬಂಟ್ವಾಳ ತಾಲೂಕು ಕಚೇರಿಗೆ ಹಠಾತ್ ಭೇಟಿ ನೀಡಿ ಜಮೀನು ದಾಖಲೆಗಳ 1-5 ಪ್ರಕರಣಗಳ ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡುವಂತೆ ಬಂಟ್ಚಾಳ ತಹಶೀಲ್ದಾರ್ ಅವರಿಗೆ ಸೂಚಿಸಿದ್ದಾರೆ.
ಭೂ ಮಂಜೂರಾತಿ ನಂತರ ಸಾರ್ವಜನಿಕರು 1-5 ಮಾಡಲು ಸಲ್ಲಿಸಿರುವ ಸಾಕಷ್ಟು ಅರ್ಜಿಗಳು ಬಾಕಿ ಇದೆ. ಇದರಿಂದ ಸಾರ್ವಜನಿಕರಿಗೆ ಬಹಳಷ್ಟು ತೊಂದರೆಗಳಾಗುತ್ತಿರುವ ಬಗ್ಗೆ ಮಾಹಿತಿ ಇದ್ದು,ತಾಲೂಕು ಕಚೇರಿಗಳಲ್ಲಿ 1-5 ಪ್ರಕರಣಗಳ ಅರ್ಜಿಗಳನ್ನು ಆದ್ಯತೆಯಲ್ಲಿ ವಿಲೇವಾರಿ ಮಾಡುವಂತೆ ಜಿಲ್ಲಾಧಿಕಾರಿಯಚರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಇದೇ ವೇಳೆ ತಾಲೂಕು ಕಚೇರಿಯ ರೆಕಾರ್ಡ್ ರೂಮನ್ನು ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಎಂ.ಪಿಅವರು ದಾಖಲೆಗಳ ಡಿಜಿಟಲೈಝೇಶನ್ ಪ್ರಕ್ರಿಯೆಯನ್ನು ವೀಕ್ಷಿಸಿದರು.
ಇದೇ ವೇಳೆ ಸರ್ವೆ ಇಲಾಖಾ ಕಚೇರಿಗೂ ಭೇಟಿ ನೀಡಿದ ಅವರು ಕಡತಗಳ ಸಂಗ್ರಹವನ್ನು ಪರಿಶೀಲಿಸಿದರು . ಸರ್ವೆ ಅರ್ಜಿ ವಿಲೇವಾರಿಯ ಮಾಹಿತಿ ಪಡೆದ ಅವರು ಯಾವುದೇ ಕಾರಣಕ್ಕೂ ಸರ್ವೆ ಕಾರ್ಯವನ್ನು ವಿಳಂಬಿಸಬಾರದೆಂದು ಅಧಿಕಾರಿಗಳಿಗೆ ಸೂಚಿಸಿದರು.
ಬಂಟ್ವಾಳ ತಾಲೂಕು ತಹಶೀಲ್ದಾರ್ ಅರ್ಚನಾ ಭಟ್ ಅವರು ದಾಖಲೆಗಳ ಡಿಜಿಟಲೈಝೇಶನ್ ಪ್ರಕ್ರಿಯೆ, 1-5 ಪ್ರಕರಣಗಳ ವಿಲೇವಾರಿ ಮಾಹಿತಿಯನ್ನು ಜಿಲ್ಲಾಧಿಕಾರಿಗೆ ನೀಡಿದರು.
ಈ ಸಂದರ್ಭದಲ್ಲಿ ಭೂ ದಾಖಲೆಗಳ ಉಪನಿರ್ದೇಶಕಿ ಪ್ರಸಾದಿನಿ, ಸಹಾಯಕ ನಿರ್ದೇಶಕ ನಿಸಾರ್ ಅಹಮದ್, ಉಪತಹಶಿಲ್ದಾರ್ ನರೇಂದ್ರನಾಥ್ ಭಟ್ ಮತ್ತಿತರರು ಉಪಸ್ಥಿತರಿದ್ದರು.
ದರ್ಖಾಸು ಜಮೀನು ಸೇರಿದಂತೆ ಪ್ಲೋಟಿಂಗ್ ಆಗದ ಜಮೀನಿಗೆ ಸಂಬಂಧಿಸಿದಂತೆ ಸಾರ್ವಜನಿಕರು 1-5 ಗೆ ಅರ್ಜಿ ಕೊಟ್ಟು 5-6 ವರ್ಷಗಳೂ ಕಳೆದರೂ ಕಡತಗಳಿಗೆ ಇನ್ನು ಮುಕ್ತಿ ಸಿಗುತ್ತಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದರು.
1-5 ಪ್ಲೋಟಿಂಗ್ ಸಂಬಂಧಿಸಿದಂತೆ ಕಡತಗಳು ಬಂಟ್ವಾಳ ತಾಲೂಕು ತಹಸೀಲ್ದಾರರಿಂದ ಮಂಗಳೂರು ಸಹಾಯಕ ಆಯುಕ್ತರ ಕಛೇರಿಗೆ 10-20 ಬಾರಿ ಅಲೆದಾಡುತ್ತಿದ್ದು,ಅಧಿಕಾರಿಗಳು ಮಾತ್ರ ಕಡತಗಳಿಗೆ ಮುಕ್ತಿ ನೀಡದಿರುವುದು ಸಾರ್ವಜನಿಕ ವಲಯದಲ್ಲಿ ಅಧಿಕಾರಿಗಳ ಕಾರ್ಯವೈಖರಿಗೆ ಆಕ್ರೋಶ ವ್ಯಕ್ತವಾಗಿದ್ದು,ಜಿಲ್ಲಾಧಿಕಾರಿಯವರಿಗೂ ಈ ಬಗ್ಗೆ ದೂರುಗಳು ಹೋಗಿತ್ತು ಎಂಬುದು ಇಲ್ಲಿ ಗಮನಾರ್ಹ ಅಂಶವಾಗಿದೆ
ಮಂಗಳೂರು: ಇತ್ತೀಚೆಗೆ ನಿಧನ ಹೊಂದಿದ ಬಂಟರ ಯಾನೆ ನಾಡವರ ಮಾತೃ ಸಂಘದ ಮಾಜಿ ಕೋಶಾಧಿಕಾರಿ ಹಾಗೂ ಯೂನಿಯನ್ ಬ್ಯಾಂಕಿನ ನಿವೃತ್ತ…
ಮಂಗಳೂರು: ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಸಂಪೂರ್ಣವಾಗಿ ಡಿಜಿಟಲ್ ಮಾದರಿಯಲ್ಲಿ ಜನಗಣತಿ ನಡೆಯಲಿದ್ದು, ಅದರ ಭಾಗವಾಗಿ ಕರ್ನಾಟಕದಲ್ಲಿ 2027ರ ಜನಗಣತಿಯ…
ಮಂಗಳೂರು: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಇದರ ಮಂಗಳೂರು ನಗರ ಘಟಕದ ಅಷ್ಟಮ ಸಂಭ್ರಮ ಕಾರ್ಯಕ್ರಮವು ಮಂಗಳೂರು ನಗರ ಘಟಕದ…
ಬಂಟ್ವಾಳ: ತಾಲೂಕಿನ ವಗ್ಗದ ನಿವಾಸಿ ಅಟೋ ಚಾಲಕನೋರ್ವ ಕಾಣೆಯಾದ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. …
ಕಾಸರಗೋಡು: ಬಿಜೆಪಿ ರಾಷ್ಟ್ರೀಯ ಪ್ರಧಾನ ಕರ‍್ಯರ‍್ಶಿ ಹಾಗೂ ಕೇರಳದ ಚುನಾವಣಾ ಪ್ರಭಾರಿ ವಿನೋದ್ ಥಾವ್ಡೆ ಅವರು ನಿನ್ನೆ ಕಾಸರಗೋಡಿಗೆ…
ಮಾಣಿ ಸಮೀಪದ ಸೂರಿಕುಮೇರು ಜಂಕ್ಷನ್‌ನಲ್ಲಿ ಖಾಸಗಿ ಬಸ್‌ಗೆ ಹಿಂಬದಿಯಿಂದ ಪಿಕಪ್ ವಾಹನ ಡಿಕ್ಕಿ ಹೊಡೆದಿದ್ದು, ಪಿಕಪ್ ವಾಹನದ ಮುಂಭಾಗವು ಸಂಪೂರ್ಣ…