ಮುಲ್ಕಿ: ಶಿವಳ್ಳಿ ಸ್ಪಂದನ ಪಾವಂಜೆ ವಲಯದ ಮಹಾಸಭೆಯು ದಿನಾಂಕ 16/07/23 ನೇ ಭಾನುವಾರ ಹೊಯ್ಗೆಗುಡ್ಡೆ ಶ್ರೀ ಉಮಾ ಮಹೇಶ್ವರ ದೇವಸ್ಥಾನ ಆವರಣದಲ್ಲಿ ನಡೆಯಿತು.
ಸಂಘದ ಅಧ್ಯಕ್ಷ ಶ್ರೀ ಸತೀಶ್ ಭಟ್ ಅವರು ದಿನಾಂಕ 13/08/23 ನೇ ಭಾನುವಾರ ಪಾವಂಜೆ ವಲಯದ ಸಹಯೋಗದಲ್ಲಿ ನಡೆಯಲಿರುವ ತಾಲೂಕು ಮಟ್ಟದ ಕ್ಯಾರಂ, ಚೆಸ್ ಕ್ರೀಡೆ ಗಳ ಅಂತಿಮ ಚರಣದ ಪಂದ್ಯಾಟ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭಗಳ ಮಾಹಿತಿ ನೀಡಿದರು.
ತಾಲೂಕು ವಲಯ ಕಾರ್ಯದರ್ಶಿ ಶ್ರೀ ಗಣೇಶ್ ಹೆಬ್ಬಾರ್ ಅವರು ಈ ಕಾರ್ಯಕ್ರಮ ಗಳ ರೂಪುರೇಷೆ ವಿವರ ನೀಡಿ ಹಾಗೂ ಎಲ್ಲಾ ಸದಸ್ಯರ ತನು ಮನ ಧನ ಸಹಾಯದ ಮೂಲಕ ಸಹಕಾರ ಕೋರಿದರು.
ಖಜಾಂಜಿ ವೆಂಕಟೇಶ್ ಭಟ್ ಅವರು ಲೆಕ್ಕ ಪತ್ರ ವಿವರ ನೀಡಿದರು.
ಕಾರ್ಯದರ್ಶಿ ಪ್ರಸನ್ನಕುಮಾರ್ ಅವರು ಸಂಘದ ಈ ವರೆಗಿನ ಕಾರ್ಯಕ್ರಮ ಗಳ ವಿವರಣೆ ನೀಡಿದರು.
ಗಣೇಶ್ ತಂತ್ರಿ ಧನ್ಯವಾದ ಸಮರ್ಪಿಸಿದರು. ಶ್ರೀಮತಿ ಆಶಾ ಶ್ರೀನಿವಾಸ್ ಅವರು ಕಾರ್ಯಕ್ರಮ ನಿರೂಪಿಸಿದರು.
ಹಲವು ಹೊಸ ಸದಸ್ಯರ ಸೇರ್ಪಡೆ ಹಾಗೂ ಸದಸ್ಯತ್ವ ನವೀಕರಣ ನಡೆಯಿತು. ಮಾಧ್ಯಮ ಪ್ರತಿನಿಧಿ ಮೋಹನ್ ರಾವ್ ಉಪಸಿದ್ಧರಿದ್ದರು



