ಸಮಾಜದ ಎಲ್ಲಾ ವರ್ಗದವರನ್ನು ಸಮಾನವಾಗಿ ಕಾಣುತ್ತಾ ಯಾವುದೇ ಪ್ರತಿಫಲವನ್ನು ನಿರೀಕ್ಷಿಸದೇ ಡಾ.ಕನ್ಯಾನ ಸದಾಶಿವ ಶೆಟ್ಟರ ಸಮಾಜ ಸ್ಪಂದನೆಯ ಕಲ್ಯಾಣ ಕಾರ್ಯ ಅನುಕರಣೀಯವಾಗಿದೆ.
ಅವರಿಗೆ ಅರ್ಹವಾಗಿಯೇ ಮಂಗಳೂರು ವಿಶ್ವವಿದ್ಯಾನಿಲಯವು ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. ಇಂತಹ ಮಾನವೀಯ ಸಂಬAಧದ ವ್ಯಕ್ತಿತ್ವದವರು ಸಮಾಜದಲ್ಲಿ ಹೆಚ್ಚಾಗಬೇಕು ಎಂದು ಆಧ್ಯಾತ್ಮಿಕ ವಿಶ್ವ ಗುರು ಅಂತಾರಾಷ್ಟ್ರೀಯ ವಾಸ್ತುತಜ್ಞರಾದ ಶ್ರೀ ಚಂದ್ರಶೇಖರ ಸ್ವಾಮೀಜಿ ಹೇಳಿದ್ದಾರೆ. ಬೆಂಗಳೂರಿನ ಆಶ್ರಮಕ್ಕೆ ಭೇಟಿ ನೀಡಿದ ಸಮಾಜ ಸೇವಕ ಡಾ.ಕನ್ಯಾನ ಸದಾಶಿವ ಶೆಟ್ಟಿ ಅವರಿಗೆ ಆಶೀರ್ವಾದ ನೀಡಿ ಮಾತನಾಡಿದ್ರು. ಸದಾಶಿವ ಶೆಟ್ಟರಿಗೆ ಪದ್ಮವಿಭೂಷಣ ಗೌರವ ಸಿಗಲಿ. ಸಮಾಜದಲ್ಲಿ ಸಿರಿವಂತರು ತುಂಬ ಮಂದಿ ಇದ್ದಾರೆ. ಅನೇಕ ಮಂದಿ ಸಮಾಜದ ಸ್ಪಂದನೆಯಿAದ ದೂರವಿದ್ದಾರೆ. ಆದರೆ ಸದಾಶಿವ ಶೆಟ್ಟಿ ಅವರು ತಮ್ಮ ಗಳಿಕೆಯಲ್ಲಿ ಒಂದAಶವನ್ನು ಸಾಂಸ್ಕೃತಿಕ, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರಕ್ಕೆ ಮುಕ್ತ ನೆರವು ನೀಡುತ್ತಿರುವುದು ಶ್ಲಾಘನೀಯ. ತಾವು ಬೆಳೆದು ಸಮಾಜವು ಸಹ ಬೆಳೆಯಬೇಕೆಂಬ ಹಂಬಲದ ಕನ್ಯಾನ ಸದಾಶಿವ ಶೆಟ್ಟರ ಸಾಧನೆಗೆ ಕೇಂದ್ರ ಸರ್ಕಾರವು ಪದ್ಮವಿಭೂಷಣ ಪ್ರಶಸ್ತಿಯ ಗೌರವ ಸಿಗುವಂತಾಗಬೇಕು ಎಂದು ಶ್ರೀ ಚಂದ್ರಶೇಖರಸ್ವಾಮೀಜಿ ಆಶಯ ವ್ಯಕ್ತಪಡಿಸಿದ್ದಾರೆ.
ಈ ಸಂದರ್ಭದಲ್ಲಿ ಪೂಜ್ಯ ಸ್ವಾಮೀಜಿಯವರು ಮಂಗಳೂರು ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್‌ನಿಂದ ಗೌರವಿಸಲ್ಪಟ್ಟಿರುವ ಕನ್ಯಾನ ಸದಾಶಿವ ಶೆಟ್ಟಿಯವರನ್ನು ಆಶ್ರಮದಿಂದ ವಿಶೇಷವಾಗಿ ಶಾಲು
ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಈ ವೇಳೆ ಚಿತ್ರ ನಟ ಹಾಗೂ ನಿರ್ಮಾಪಕ ಪಡುಬಿದ್ರಿ ಗುರುರಾಜ್ ಹೆಗ್ಡೆ, ಆಶ್ರಮದ ನಿರ್ದೇಶಕರಾದ ರಜನಿ ಸಿ. ಭಟ್, ರಾಘವ್ ಸೂರ್ಯ, ರಾಹುಲ್ ಸಿ ಭಟ್ ,ಆಶ್ರಮದ ಸಂಚಾಲಕ ಪುನೀತ್ ಕೃಷ್ಣ ಹಾಗೂ ಮತ್ತಿತರರು ಉಪಸ್ಥಿತರಿದ್ರು.
ಮಾಧ್ಯಮ ಲೋಕದಲ್ಲಿ ಸುದೀರ್ಘ ದುಡಿಮೆ ಮತ್ತು ತನ್ನ ಕಲಾತ್ಮಕ ಕ್ಯಾಮರಾ ಕೌಶಲ್ಯದಿಂದ ಜನಮನ ಸೆಳೆದಿದ್ದ ನಾಗರಾಜ್ ಇಂದು ನಿಧನರಾಗಿದ್ದಾರೆ. ಆರ್ಥಿಕ…
ಆಂಬ್ಯುಲೆನ್ಸ್ ವಾಹನವೊಂದಕ್ಕೆ ಸೈಡ್ ಬಿಡದೆ ಸಂಚಾರಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಸ್ಕೂಟರ್ ಸವಾರನೋರ್ವನನ್ನು ಪೋಲೀಸರು ಬಂಧಿಸಿದ್ದಾರೆ. ಪುತ್ತೂರು ಬೆಟ್ಟಂಪಾಡಿ ನಿವಾಸಿ…
ಅನಿವಾಸಿ ಭಾರತೀಯ ಉದ್ಯಮಿ, ಸಮಾಜ ಸೇವಕ ಝಕರಿಯಾ ಜೋಕಟ್ಟೆ ಅವರಿಗೆ ಹೊರನಾಡ ಕನ್ನಡಿಗ ವಿಭಾಗದಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ…
ಪಾಣೆಮಂಗಳೂರು ಹಳೆ ಸೇತುವೆ ಬಳಿ ನಾಪತ್ತೆಯಾದ ಆಟೋ ಚಾಲಕನ ಶವ ಪತ್ತೆಯಾಗಿದೆ. ಪಾಣೆಮಂಗಳೂರು ಹಳೆ ಸೇತುವೆಯ ಬಳಿ ಇಲೆಕ್ಟಿಕ್ ಆಟೋ…
ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ಹಲವಾರು ಮಂದಿಯಿಂದ ಕೋಟ್ಯಾಂತರ ಹಣ ಪಡೆದು ವಂಚನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ದಂಪತಿಯನ್ನು ಕಾವೂರು…
ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಡೆಯುತ್ತಿದ್ದ ಮದುವೆ ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದ ಮದುವೆಯ ವಾಹನವೊಂದು ಬಿಸಿಲೆ ಘಾಟ್ ರಸ್ತೆಯ ತಿರುವಿನಲ್ಲಿ ಪಲ್ಟಿಯಾಗಿ ವಾಹನದಲ್ಲಿದ್ದ 20ಕ್ಕೂ…