ಮಂಗಳೂರು: ಅಂತರಾಷ್ಟ್ರೀಯ ಲಯನ್ಸ್ ಜಿಲ್ಲೆ 317 ಡಿ ಇದರ 2025-26ನೇ ಸಾಲಿನ ಜಿಲ್ಲಾ ಉಪ ರಾಜ್ಯಪಾಲರಾಗಿ ಮಂಗಳೂರು ಲಯನ್ಸ್ ಕ್ಲಬ್ ಇದರ ಮಾಜಿ ಅಧ್ಯಕ್ಷರು ಲಯನ್ಸ್ ಜಿಲ್ಲೆಯಲ್ಲಿ ವಿವಿಧ ಹುದ್ದೆಗಳನ್ನು ನಿರ್ವಹಿಸಿದ ಗೋವರ್ಧನ್ ಕೆ. ಶೆಟ್ಟಿ ಇವರು ಆಯ್ಕೆ ಯಾಗಿದ್ದಾರೆ. ಏಪ್ರಿಲ್. 6 ರಂದು ಅಡ್ಯಾರ್ ಗಾರ್ಡನ್ ನಲ್ಲಿ ನಡೆದ ಜಿಲ್ಲಾ ಸಮ್ಮೇಳನದಲ್ಲಿ ಅವರು ಚುನಾಯಿತರಾದರು. ಇಂಜನಿಯರಿಂಗ್ ಪದವೀಧರರಾಗಿರುವ ಶ್ರೀಯುತರು ಗಣೇಶ ಟೈಲ್ ಫ್ಯಾಕ್ಟರಿಯ ಮಾಲೀಕರಾಗಿರುತ್ತಾರೆ.
ದಕ್ಷಿಣ ಕನ್ನಡ , ಹಾಸನ, ಚಿಕ್ಕಮಗಳೂರು, ಕೊಡಗು ಈ ನಾಲ್ಕು ಕಂದಾಯ ಜಿಲ್ಲೆಗಳನ್ನು ಹೊಂದಿರುವ ಲಯನ್ ಜಿಲ್ಲೆ 317 ಡಿ ಯಲ್ಲಿ 120 ಕ್ಲಬ್ ಗಳಲ್ಲಿ ಸುಮಾರು 4000ಕ್ಕೂ ಮಿಕ್ಕಿ ಲಯನ್ಸ್ ಸದಸ್ಯರು ಇದ್ದಾರೆ. ವಿಜೇತರಿಗೆ ಲಯನ್ಸ್ ಕ್ಲಬ್ ಮಂಗಳೂರು ವತಿಯಿಂದ ಅಧ್ಯಕ್ಷ ಜಯರಾಜ್ ಪ್ರಕಾಶ್, ಕಾರ್ಯದರ್ಶಿ ರವಿಶಂಕರ್ ರೈ, ಖಜಾಂಚಿ ನಾರಾಯಣ್ ಕೋಟಿಯಾನ್ ಹಾಗೂ ಇತರ ಸದಸ್ಯರು ಅಭಿನಂದನೆ ಸಲ್ಲಿಸಿದ್ದಾರೆ.



