ಜನ ಮನದ ನಾಡಿ ಮಿಡಿತ

Advertisement

ಪುತ್ತೂರು :ಸ್ವಚ್ಛತೆ, ಆಹಾರದ ಸುರಕ್ಷತೆಯ ಕುರಿತು ದೇವಸ್ಥಾನದಿಂದ ನಿಗಾ ಇಡುವಂತೆ ಶಾಸಕ, ದೇವಳದ ಅಧ್ಯಕ್ಷರಿಗೆ ಮನವಿ

ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೆಯ ಸಂದರ್ಭ ತಾತ್ಕಾಲಿಕ ಎಲಂಗೆ ಸ್ಟಾಲ್ ಪಡೆದವರು ಸ್ವಚ್ಛತೆ, ಆಹಾರದ ಸುರಕ್ಷತೆಯ ಕುರಿತು ದೇವಸ್ಥಾನದಿಂದ ನಿಗಾ ಇಡುವಂತೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಸಂರಕ್ಷಣಾ ಸಮಿತಿಯಿಂದ ಶಾಸಕರಿಗೆ ಮತ್ತು ದೇವಳದ ಅಧ್ಯಕ್ಷರು, ಕಾರ್ಯನಿರ್ವಹಣಾಧಿಕಾರಿಗೆ ಮನವಿ ನೀಡಲಾಗಿದೆ ಎಂದು ಸಂರಕ್ಷಣಾ ಸಮಿತಿಯ ಪ್ರಮುಖರು ತಿಳಿಸಿದ್ದಾರೆ.

ಜಾತ್ರೆಯ ಸಮಯದಲ್ಲಿ ಅಂಗಡಿಯ ಸ್ವಚ್ಚತೆಗೆ ಆದ್ಯತೆ ನೀಡಬೇಕು. ಸ್ವಚ್ಚತೆಯ ಜಾಗೃತಿಗಾಗಿ ನಮ್ಮ ಸಮಿತಿಯಿಂದ ಅಭಿಯಾನ ಮಾಡಲಿದ್ದೇವೆ. ಎಲಂಗೆ ಪಡೆದ ಅಂಗಡಿಯವರಿಂದ ಸ್ವಚ್ಚತೆಗೆ ಮತ್ತೆ ಹಣ ವಸೂಲಿ ಮಾಡುವುದು ಸಮಂಜಸವಲ್ಲ. ಮದ್ಯಪಾನ/ದೂಮಪಾನಕ್ಕೆ ಅವಕಾಶ ನೀಡಬಾರದು. ಕಳೆದ ಬಾರಿ ಬಿಯರ್ ಬಾಟಲಿ ಒಂದು ಅಂಗಡಿಯ ಹಿಂಬದಿ ಕಂಡು ಬಂದಿದ್ದು, ಈ ಬಗ್ಗೆ ಪರವಾನಿಗೆ ನೀಡುವಾಗಲೇ ಈ ಎಲ್ಲಾ ವಿಚಾರಗಳ ಬಗ್ಗೆ ಅಫಿಡವಿಟ್ ಮಾಡಿ ಪಡಕೊಂಡರೆ ಒಳ್ಳೆಯದು. ಮೊಬೈಲ್ ಶೌಚಾಲಯದ ಸ್ವಚ್ಛತೆಗೆ ಸಿಬ್ಬಂದಿ ನೇಮಕ ಮಾಡಬೇಕು. ಮಕ್ಕಳು ವ್ಯಾಪಾರ ಮಾಡದಂತೆ ಮಕ್ಕಳ ಆಯೋಗವು ಗಮನಹರಿಸುವಂತೆ ವ್ಯವಸ್ಥೆ ಕಲ್ಪಿಸಬೇಕು. ಅಂಗಡಿ ಏಲಂ ಪಡೆದ ವ್ಯಕ್ತಿ ಅನ್ಯರಿಗೆ ಒಳಬಾಡಿಗೆಗೆ ಅಂಗಡಿ ನೀಡಿದ್ದಲ್ಲಿ ಮತ್ತೆ ಏಲಂ ಪ್ರಕ್ರಿಯೆ ನಡೆಸತಕ್ಕದ್ದು. ಅಲ್ಲದೇ ಎಲ್ಲಾ ಸ್ಟಾಲ್‌ಗಳು ಏಲಂ ಪ್ರಕ್ರಿಯೆಯಲ್ಲಿ ಭಾಗಿಯಾಗಿದೆಯೇ ಪರೀಕ್ಷಿಸಬೇಕು ಎಂದು ಮನವಿಯಲ್ಲಿ ತಿಳಿಸಿರುವುದಾಗಿ ಹೇಳಿದ್ದಾರೆ.

 

Leave a Reply

Your email address will not be published. Required fields are marked *

ಬಂಟ್ವಾಳ: ಪಾಣೆಮಂಗಳೂರು ಹಳೆಯ ಸೇತುವೆ ಮೇಲೆ ರಿಕ್ಷಾ ನಿಲ್ಲಿಸಿ ಚಾಲಕ ಕಾಣೆ..!

ಬಂಟ್ವಾಳ: ಬಂಟ್ವಾಳ ತಾಲೂಕಿನ ತುಂಬೆ ಗ್ರಾಮದ ಚೆನ್ನಕೇಶವ ನಾಪತ್ತೆ

ಬಂಟ್ವಾಳ: ಕಾಮಗಾರಿಯ ಪ್ರಗತಿಯ ಕುರಿತು ಪುರಸಭಾ ಜನಪ್ರತಿನಿಧಿಗಳ ಸಭೆ….!

ಬಂಟ್ವಾಳ: ಬಂಟ್ವಾಳ ತಾಲೂಕಿನ ಕೇಪು ಗ್ರಾಮ ಪಂಚಾಯಿತಿಗೆ ಕಿಶೋರ್ ಕುಮಾರ್ ಭೇಟಿ…!

ಬಂಟ್ವಾಳ: ಕಾರು ಮೇಲ್ಸೇತುವೆಗೆ ಡಿ*ಕ್ಕಿ; ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಚಾಲಕ…!

ಮಂಗಳೂರು: ಆಟವಾಡುತ್ತಾ 15 ಅಡಿ ಆಳದ ನೀರಿದ್ದ ಬಾವಿಗೆ ಬಿದ್ದ ಹೆಣ್ಣು ಮಗು….!

ಮಂಗಳೂರು: ಕಲ್ಲಡ್ಕ ಪ್ರಭಾಕರ್ ಭಟ್ ಅವರ ಭಾಷಣದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ..!

ಬಂಟ್ವಾಳ: ಶ್ರೀರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ “ಶ್ರೀರಾಮನ ಚರಿತ್ರೆಯ” ಯಕ್ಷಗಾನ….!

ಮಂಗಳೂರು: ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ’ ಕೃತಿ ಬಿಡುಗಡೆ..!

error: Content is protected !!