ವ್ಯಕ್ತಿಯೊಬ್ಬ ಮಹಿಳೆಗೆ ಮದ್ಯ ಕುಡಿಸಿ, ಕತ್ತು ಹಿಸುಕಿ ಕೊಲೆ ಮಾಡಿ ಬಳಿಕ ಸುಟ್ಟು ಹಾಕಿರುವ ಘಟನೆ ಉತ್ತರ ಪ್ರದೇಶದ ಲಕ್ನೋನಲ್ಲಿ ನಡೆದಿದೆ. ಈ ಘಟನೆಯಲ್ಲಿ ಓರ್ವ ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿಗಳಾದ ಶಿವೇಂದ್ರ ಯಾದವ್ (26) ಮತ್ತು ಆತನ ಸಹಾಯಕ ಗೌರವ್ (19) ಮೊದಲು ಆಸ್ತಿ ದಾಖಲೆಗಳನ್ನು ನೀಡಲು ಸಂತ್ರಸ್ತೆಗೆ ಕರೆ ಮಾಡಿ, ಆಕೆ ಬಂದ ಬಳಿಕ ಆಕೆಗೆ ಮದ್ಯ ಕುಡಿಸಿ, ಉಸಿರುಗಟ್ಟಿಸಿ ಕೊಂದು, ಸುಟ್ಟು ಹಾಕಿ, ಅರೆಬರೆ ಬೆಂದ ಶವವನ್ನು ನದಿಗೆ ಎಸೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಐದು ದಿನಗಳಿಂದ ಕಾಣೆಯಾಗಿದ್ದ ಅಂಜಲಿಯ ಶವ ಶನಿವಾರ ನದಿಯ ಬಳಿ ಛಿದ್ರಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ. ಆರೋಪಿಯು ತನ್ನ ತಂದೆ ಮತ್ತು ಹೆಂಡತಿಗೆ ವೀಡಿಯೊ ಕರೆ ಮಾಡಿ ಸಂತ್ರಸ್ತೆಯ ಶವವನ್ನು ತೋರಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತಳ ಕುಟುಂಬ ಸದಸ್ಯರು ಚರಂಡಿಯ ಬಳಿ ಸುಟ್ಟು ಕರಕಲಾದ ಸ್ಕೂಟರ್ ಅನ್ನು ಕಂಡುಕೊಂಡ ನಂತರ ಆಕೆಯ ವ್ಯವಹಾರ ಪಾರ್ಟ್ನರ್ ಆಗಿದ್ದ ವ್ಯಕ್ತಿ ಮೇಲೆ ಕೊಲೆ ಆರೋಪ ಹೊರಿಸಿದ ನಂತರ ಪೊಲೀಸರು ತನಿಖೆ ಆರಂಭಿಸಿದರು.
ಆಕೆಯ ಸಹೋದರಿ ಕಿರಣ್ ಹೇಳುವಂತೆ ಆರೋಪಿಯು ಅಂಜಲಿಯಿಂದ ಭೂಮಿಗಾಗಿ 6 ಲಕ್ಷ ರೂ.ಗಳನ್ನು ಪಡೆದಿದ್ದ. ನಂತರ ದಾಖಲೆಗಳನ್ನು ನೀಡುವ ನೆಪದಲ್ಲಿ ಅವನು ತನಗೆ ಕರೆ ಮಾಡಿ ಆಕೆಯನ್ನು ಕೊಂದಿದ್ದಾನೆ ಎಂದು ಹೇಳಿದ್ದಾರೆ. ಪೊಲೀಸ್ ವಿಚಾರಣೆಯ ಸಮಯದಲ್ಲಿ ಯಾದವ್ ಮತ್ತು ಅವರ ಪತ್ನಿ ಅಪರಾಧವನ್ನು ಒಪ್ಪಿಕೊಂಡಿದ್ದಾರೆ.
ಭಾರತೀಯ ಕರಾವಳಿ ಕಾವಲು ಪಡೆ ಹಾಗೂ ಗುಜರಾತ್ ಭಯೋತ್ಪಾದನಾ ನಿಗ್ರಹ ದಳ (ATS) ಜಂಟಿ ಕಾರ್ಯಾಚರಣೆ ನಡೆಸಿ ಅರಬ್ಬಿ ಸಮುದ್ರದಲ್ಲಿ…
ಮಂಗಳೂರು ರಿಫೈನರಿ ಆ್ಯಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (MRPL)ನಲ್ಲಿ ಇಂದು ಮಧ್ಯಾಹ್ನ ಕೋಕರ್ ಹೈಡ್ರೋ ಟ್ರೀಟರ್ ಘಟಕದಲ್ಲಿ ಘಟನೆ ಸಂಭವಿಸಿದ್ದು, ಘಟನಾ…
ಪಾಲಕ್ಕಾಡ್ ವಿಭಾಗದ ವ್ಯಾಪ್ತಿಯಲ್ಲಿದ್ದ ಮಂಗಳೂರು ರೈಲು ಪ್ರದೇಶವನ್ನು ಅ.1ರ ಮಧ್ಯರಾತ್ರಿಯಿಂದ ಮೈಸೂರು ವಿಭಾಗಕ್ಕೆ ಸೇರ್ಪಡೆಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಹೊಸ ವಿಭಾಗೀಯ…
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಸಂಚಾರ ದಟ್ಟಣೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಶಾಲೆಗಳ ಆರಂಭದ ಸಮಯದಲ್ಲಿ ಬದಲಾವಣೆ…
ಶ್ರೀ ಕ್ಷೇತ್ರ ಶಂಕರಪುರ ದ್ವಾರಕಾಮಾಯಿ ಮಠ ಏಕ ಜಾತಿ ಧರ್ಮ ಪೀಠದ ಶ್ರೀ ಸಾಯಿ ಈಶ್ವರ್ ಗುರೂಜಿ ಅವರ ಪಂಚಾಶತ್…
ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗೆ ಅವಧಿ ಮೀರಿದ ಮಾತ್ರೆಗಳನ್ನು ವಿತರಿಸಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಈ ಕುರಿತು ಆಸ್ಪತ್ರೆ ಆಡಳಿತ…