ಜನ ಮನದ ನಾಡಿ ಮಿಡಿತ

Advertisement

ಮಂಗಳೂರು: ಶಿಸ್ತಿನ ಕಾರ್ಯದಿಂದ ಬಲಿಷ್ಠ ಸಮಾಜ ಕಟ್ಟಬಹುದು – ಸಿ.ಎ. ಉದಯಾನಂದ

ಸಮುದಾಯದ ಯಾವುದೇ ವ್ಯಕ್ತಿ ಶಿಕ್ಷಕ ಎಂಬ ಪದಕ್ಕೆ ಸೆಳೆಯಾಗುತ್ತಾನೆ, ಶಿಕ್ಷಕರು ಶಿಸ್ತಿನಿಂದ ಕಾರ್ಯಪ್ರವರ್ತರಾದರೆ ಬಲಿಷ್ಠ ಸಮಾಜ ಕಟ್ಟಬಹುದು. ಶಿಕ್ಷಣ, ಶಿಕ್ಷಕ, ಶಿಸ್ತು, ಇವು ಮೂರು ಪರಸ್ಪರ ಹೊಂದಿಕೊಂಡು ಕಾರ್ಯಪ್ರವರ್ತರಾದಾಗ ಸಮುದಾಯ ಬಲಿಷ್ಠ ಗೊಳ್ಳುತ್ತದೆ ಎಂದು ಶ್ರೀ ಮಂಜುನಾಥೇಶ್ವರ ಕಾನೂನು ಕಾಲೇಜಿನ ಪ್ರಾಧ್ಯಾಪಕ ಸಿ.ಎ. ಉದಯಾನಂದ ತಿಳಿಸಿದರು.

ಮಂಗಳೂರು ಶಿಕ್ಷಕರ ಸಹಕಾರಿ ಪತ್ತಿನ ಸಂಘದ ನಿರ್ದೇಶಕರು ಮತ್ತು ಸಿಬ್ಬಂದಿಗಳಿಗೆ‌ ಮಂಗಳೂರು ದಕ್ಷಿಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿನಡೆದ ಆಡಳಿತಾತ್ಮಕ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದರು. ಮಂಗಳೂರು ಶಿಕ್ಷಕರ ಸಹಕಾರಿ ಸಂಘದ ಬಗ್ಗೆ ಎಲ್ಲರಿಗೂ ಅಭಿಮಾನವಿದೆ ಗೌರವವಿದೆ. ಗತವೈಭವ ಮರಳಿ ತರಲು ನಿರ್ದೇಶಕರು, ಸಿಬ್ಬಂದಿಗಳು ಒಗ್ಗಟ್ಟಿನಿಂದ ಕಾರ್ಯ ನಿರ್ವಹಿಸಬೇಕು ಎಂದರು.

ಸಹಕಾರಿ ಸಂಘಗಳ ಉಪನಿಬಂಧಕರ ಕಚೇರಿಯ ಅಧೀಕ್ಷಕ ಎಂ.ಜೆ.ಗೋಪಾಲ್ ಸಂಪನ್ಮೂಲ ವ್ಯಕ್ತಿಯಾಗಿದ್ದರು.‌ ಸಂಘದ ಅಧ್ಯಕ್ಷ ಕೆಎಂಕೆ ಮಂಜನಾಡಿ ಅಧ್ಯಕ್ಷತೆ‌ ವಹಿಸಿದ್ದರು.

ಕರ್ನಾಟಕ ರಾಜ್ಯ ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಹಮ್ಮದ್ ರಿಯಾಜ್, ಅಲೋ ಸಿಯಸ್ ಡಿಸೋಜಾ , ಪ್ರಮೀಳಾ, ಜಾಯ್ಸ್ ಡಿಸೋಜಾ, ಜಗದೀಶ್ ಶೆಟ್ಟಿ, ಲ್ಯಾನ್ಸಿ ಸಿ. ತಾವ್ರೋ, ತ್ಯಾಗಮ್ ಹರೇಕಳ, ರಾಧಾಕೃಷ್ಣ ರಾವ್, ನಿರ್ದೇಶಕರಾದ ಉಸ್ಮಾನ್, ಹಿಲ್ಡಾ ಕ್ಲೆಮನ್ಸಿಯಾ ಪಿಂಟೋ, ರೀಟಾ ಕಾಟಿಪಳ್ಳ, ವಾಣಿ, ವನಿತಾ ಸುರೇಶ್, ತಿಪ್ಪೋಜಿ, ವಾಸುದೇವ ರಾವ್, ಅಂಬರೀಶ್, ಚಂದ್ರಶೇಖರ್, ರೂಪಾಕ್ಷ, ವಾಸುದೇವ ರಾವ್, ರಘುನಾಥ್ ರಾವ್, ಕಾರ್ಯನಿರ್ವಹಣಾಧಿಕಾರಿ ಶರ್ಮಿಳಾ, ವಿನಯ ಮೊದಲಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

ಬಂಟ್ವಾಳ: ಪಾಣೆಮಂಗಳೂರು ಹಳೆಯ ಸೇತುವೆ ಮೇಲೆ ರಿಕ್ಷಾ ನಿಲ್ಲಿಸಿ ಚಾಲಕ ಕಾಣೆ..!

ಬಂಟ್ವಾಳ: ಬಂಟ್ವಾಳ ತಾಲೂಕಿನ ತುಂಬೆ ಗ್ರಾಮದ ಚೆನ್ನಕೇಶವ ನಾಪತ್ತೆ

ಬಂಟ್ವಾಳ: ಕಾಮಗಾರಿಯ ಪ್ರಗತಿಯ ಕುರಿತು ಪುರಸಭಾ ಜನಪ್ರತಿನಿಧಿಗಳ ಸಭೆ….!

ಬಂಟ್ವಾಳ: ಬಂಟ್ವಾಳ ತಾಲೂಕಿನ ಕೇಪು ಗ್ರಾಮ ಪಂಚಾಯಿತಿಗೆ ಕಿಶೋರ್ ಕುಮಾರ್ ಭೇಟಿ…!

ಬಂಟ್ವಾಳ: ಕಾರು ಮೇಲ್ಸೇತುವೆಗೆ ಡಿ*ಕ್ಕಿ; ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಚಾಲಕ…!

ಮಂಗಳೂರು: ಆಟವಾಡುತ್ತಾ 15 ಅಡಿ ಆಳದ ನೀರಿದ್ದ ಬಾವಿಗೆ ಬಿದ್ದ ಹೆಣ್ಣು ಮಗು….!

ಮಂಗಳೂರು: ಕಲ್ಲಡ್ಕ ಪ್ರಭಾಕರ್ ಭಟ್ ಅವರ ಭಾಷಣದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ..!

ಬಂಟ್ವಾಳ: ಶ್ರೀರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ “ಶ್ರೀರಾಮನ ಚರಿತ್ರೆಯ” ಯಕ್ಷಗಾನ….!

ಮಂಗಳೂರು: ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ’ ಕೃತಿ ಬಿಡುಗಡೆ..!

error: Content is protected !!