ಮಂಗಳೂರು – ಸುಬ್ರಹ್ಮಣ್ಯ ನಡುವಿನ ಪ್ಯಾಸೆಂಜರ್ ರೈಲಿಗೆ ಶನಿವಾರ ಮಂಗಳೂರಿನಲ್ಲಿ ಚಾಲನೆ ನೀಡಲಾಗಿದ್ದು, ನೆಟ್ಟದ ಸುಬ್ರಹ್ಮಣ್ಯ ರೋಡ್ ರೈಲು ನಿಲ್ದಾಣಕ್ಕೆ ಆಗಮಿಸಿದ ಪ್ಯಾಸೆಂಜರ್ ರೈಲನ್ನು ಸಾರ್ವಜನಿಕರು ಸಂಭ್ರಮದಿಂದ ಸ್ವಾಗತಿಸಿ, ಬರಮಾಡಿಕೊಂಡರು.

ಸುಬ್ರಹ್ಮಣ್ಯ ರೋಡ್ ನಿಲ್ದಾಣಕ್ಕೆ ಆಗಮಿಸಿದ ಸಂಸದ ಬ್ರಿಜೇಶ್ ಚೌಟ, ಶಾಸಕಿ ಭಾಗೀರಥಿ ಮುರುಳ್ಯ ಅವರನ್ನು ಅಭಿನಂದಿಸಲಾಯಿತು. ಸಂಸದ ಬ್ರಿಜೇಶ್ ಚೌಟ ಮಾತನಾಡಿ, ಈ ಭಾಗದ ಹಲವು ವರ್ಷಗಳ ಬೇಡಿಕೆ ಈಡೇರಿಸಲಾಗಿದೆ. ಮುಂದೆ ಇಲ್ಲಿನ ರೈಲ್ವೇ ಹಾಗೂ ಇತರೆ ಅಭಿವೃದ್ಧಿ ಬೇಡಿಕೆಗಳನ್ನು ಹಂತ ಹಂತವಾಗಿ ಈಡೇರಿಸುವುದಾಗಿ ಸಂಸದರು ಭರವಸೆ ನೀಡಿದರು.
ಹಲವು ವರ್ಷಗಳ ಬೇಡಿಕೆ ಈಡೇರಿದ ಖುಷಿ:
ಮಂಗಳೂರು – ಸುಬ್ರಹ್ಮಣ್ಯ ನಡುವೆ ಬೆಳಗ್ಗೆ, ಸಂಜೆ ಪ್ಯಾಸೆಂಜರ್ ರೈಲು ಓಡಾಟ ನಡೆಸಬೇಕೆಂಬ ಬೇಡಿಕೆ ಹಲವು ವರ್ಷಗಳಾದ್ದಾಗಿತ್ತು. ಹಲವು ಹೋರಾಟ, ಮನವಿಗಳ, ಒತ್ತಾಯದ ಪ್ರಯತ್ನದ ಫಲವಾಗಿ ಬೇಡಿಕೆ ಈಡೇರಿದಂತಾಗಿದ್ದು, ಸುಬ್ರಹ್ಮಣ್ಯ ವರೆಗೆ ಆಗಮಿಸಿದ ಪ್ಯಾಸೆಂಜರ್ ರೈಲು ಹೋರಾಟದ ಜಯದ ಖುಷಿ ಜನರಲ್ಲಿತ್ತು.

ಪ್ರಮುಖರಾದ ಸಯ್ಯದ್ ಮೀರಾ ಸಾಹೇಬ್, ವೆಂಕಟ್ ವಳಲಂಬೆ, ವೆಂಕಟ್ ದಂಬೆಕೋಡಿ, ವಿನಯಕುಮಾರ್ ಕಂದಡ್ಕ, ಪುಲಸ್ತ್ಯಾ ರೈ, ವಾಡಿಯಪ್ಪ ಗೌಡ ಎರ್ಮಾಯಿಲ್, ವೆಂಕಟರಮಣ ಗೌಡ ಕೊಲ್ಪೆ, ಸರೋಜಿನಿ ಜಯಪ್ರಕಾಶ್, ಸತೀಶ್ ಎರ್ಕ, ಉಮೇಶ್ ಕೊಂಬಾರುಗದ್ದೆ, ಕಿರಣ್ ಮದೆಪರ್ಲ, ಚಂದ್ರಶೇಖರ್ ನೂಜಿ, ನಾರಾಯಣ ಸಿರಿಬಾಗಿಲು, ಕೃಷ್ಣ ಶೆಟ್ಟಿ ಕಡಬ, ಕಿಶೋರ್ ಶಿರಾಡಿ, ಧಾಮೋದರ ಗುಂಡ್ಯ, ಮುರಳೀಧರ ಎರ್ಮಾಯಿಲ್, ಪ್ರಕಾಶ್ ಗುಂಡ್ಯ, ತುಕಾರಾಮ ಗೌಡ ಸೂಡ್ಲು, ಸುರೇಶ್ ಬಿಳಿನೆಲೆ, ಸಂತೋಷ್, ವಿನಯಚಂದ್ರ ಬಳಕ್ಕ, ರಮೇಶ್ ವಾಲ್ತಾಜೆ, ದುರ್ಗಾಪ್ರಸಾದ್ ಕಲ್ಲುಗುಡ್ಡೆ, ಕೃಷ್ಣಪ್ಪ ಗೌಡ, ಮನುದೇವ್ ಏನೆಕಲ್ಲು, ಪ್ರಸಾದ್ ನೆಟ್ಟಣ, ಅನಿತಾ ವಿಜಯಕುಮಾರ್ ಬಿಳಿನೆಲೆ ಸೇರಿದಂತೆ ಹಲವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.



