ಟಿಪ್ಪರ್ ಹಾಗೂ ದ್ವಿಚಕ್ರ ವಾಹನ ನಡುವೆ ಅಪಘಾತ ನಡೆದು ದ್ವಿಚಕ್ರ ಸವಾರ ಸಾವನ್ನಪ್ಪಿದ ಘಟನೆ ಬೆಳ್ತಂಗಡಿ ತಾಲೂಕಿನ ಕುವೆಟ್ಟುವಿನ ರತ್ನಗಿರಿಯಲ್ಲಿ ನಡೆದಿದೆ.

ಮೃತನನ್ನು ಉಪೇಂದ್ರ ಎಂದು ಗುರ್ತಿಸಲಾಗಿದ್ದು, ತೀರ್ಥಹಳ್ಳಿ ನಿವಾಸಿ ಉಪೇಂದ್ರ (29) ಎಂದು ತಿಳಿದು ಬಂದಿದೆ. ಹಿಂಬದಿ ಸವಾರ ಪುತ್ತೂರಿನ ಕಾಣಿಯೂರಿನ ಮೋಹನ್ ಎಂದು ಗುರ್ತಿಸಲಾಗಿದ್ದು, ಇವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬೆಳ್ತಂಗಡಿ ಸಂಚಾರ ಸಬ್ ಇನ್ ಸ್ಪೆಕ್ಟರ್ ಘಟನೆಯ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.



