ಕಾಶೀಮಠದ ಹಿರಿಯ ಯತಿವರ್ಯರೂ, ಭಕ್ತರ ಪಾಲಿನ ಮಾತನಾಡುವ ದೇವರೆಂದೇ ಜನಜನಿತರಾಗಿರುವ, ಮಹಾತಪಸ್ವಿಗಳಾಗಿರುವ ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಜನ್ಮಶತಮಾನೋತ್ಸವ ಆಚರಣೆ ಎಪ್ರಿಲ್ 8 ರಿಂದ 14 ರ ತನಕ ಜರುಗಿದ್ದು, ಎಪ್ರಿಲ್ 14 ರಂದು ಶ್ರೀಗಳ ನೂರನೇ ಜನ್ಮನಕ್ಷತ್ರದಂದು ವಿಶೇಷ ಕಾರ್ಯಕ್ರಮಗಳು ಉತ್ತರಾಖಂಡದ ಹರಿದ್ವಾರದಲ್ಲಿರುವ ವ್ಯಾಸಾಶ್ರಮದಲ್ಲಿ ನಡೆಯಿತು.
ಬೆಳಿಗ್ಗೆ 1008 ವಿಶೇಷ ಪವಮಾನಾಭಿಷೇಕ ಸೇವೆ ನಡೆಯಿತು. ಭಾರತದ ವಿವಿಧ ದಿಕ್ಕುಗಳಲ್ಲಿ ಹರಿಯುತ್ತಿರುವ ಪವಿತ್ರ ನದಿಗಳ ತೀರ್ಥವನ್ನು ಸಂಗ್ರಹಿಸಿ ಹರಿದ್ವಾರದ ವ್ಯಾಸಾಶ್ರಮಕ್ಕೆ ತರಲಾಗಿತ್ತು. ಇದು ಚಾರಿತ್ರಿಕವಾಗಿರುವ ದಾಖಲೆಯಾಗಿದೆ. ಎಲ್ಲಾ ಪವಿತ್ರ ನದಿಗಳ ತೀರ್ಥವನ್ನು ಸ್ವಾಮೀಜಿಯವರ ವೃಂದಾವನದಲ್ಲಿ ಅಭಿಷೇಕ ಮಾಡಲಾಯಿತು. ಇನ್ನು 1008 ಬೆಳ್ಳಿ ನಾಣ್ಯಗಳನ್ನು ಸೇವಾದಾರರಿಗೆ ವಿತರಿಸಲಾಯಿತು. ಆ ಬಳಿಕ ಸ್ವರ್ಣ ಪುಷ್ಪಾರ್ಚನಾ ಕಾರ್ಯಕ್ರಮ ನಡೆಯಿತು. ಮೊದಲಿಗೆ ವೃಂದಾವನದಲ್ಲಿರುವ ಹನುಮಂತ ದೇವರ ಪಾದಗಳಿಗೆ ಸ್ವರ್ಣ ಪುಷ್ಪಾಚನೆ ನಡೆಸಲಾಯಿತು. ಬಳಿಕ ಗುರುಪಾದುಕೆಗೆ ಸ್ವರ್ಣ ಪುಷ್ಪಾಚನೆ ನಡೆಯಿತು. ಆ ಸ್ವರ್ಣ ಪುಷ್ಪಗಳನ್ನು ಪ್ರಸಾದ ರೂಪದಲ್ಲಿ ಭಕ್ತರಿಗೆ ವಿತರಿಸಲಾಯಿತು.
ಆಗಮಿಸಿದ ಎಲ್ಲಾ ಭಕ್ತರಿಗೆ ಕಾಶೀಮಠಾಧೀಶರಾದ ಪರಮಪೂಜ್ಯ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರ ದಿವ್ಯ ಹಸ್ತದಿಂದ ಗಂಧ ಪ್ರಸಾದ ನೀಡಲಾಯಿತು. ತಿರುಪತಿ ಲಾಡು, ಫಲವಸ್ತು, ಮಹಿಳೆಯರಿಗೆ ಸೀರೆ, ಗಂಡಸರಿಗೆ ಧೋತಿ, ಹೆಣ್ಣುಮಕ್ಕಳಿಗೆ, ಗಂಡುಮಕ್ಕಳಿಗೆ ವಸ್ತ್ರಗಳನ್ನು ವಿತರಿಸಲಾಯಿತು. ಸುಧೀಂದ್ರ ವೇದಿಕೆಯಲ್ಲಿ ವಿಷ್ಣು ಸಹಸ್ರನಾಮ ಪಠಣ, ಸಾಮೂಹಿಕ ಕುಂಕುಮಾರ್ಚನೆ, ಸಾಮೂಹಿಕ ದುರ್ಗಾ ನಮಸ್ಕಾರ, ಸಹಸ್ರ ಚಂಡಿಕಾಯಾಗ, ಋತ್ಮಿಕಾ ಯಾಗ, ಗುರುಗುಣಗಾನ, ಭಜನಾ ಕಾರ್ಯಕ್ರಮಗಳು ನಡೆಯಿತು. ಸಂಜೆ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರು ಆರ್ಶೀವಚನ ನೀಡಿದರು. ದೇಶ, ವಿದೇಶದಿಂದ ನಾಲ್ಕು ಸಾವಿರಕ್ಕೂ ಮಿಕ್ಕಿ ಭಕ್ತರು ಈ ಪುಣ್ಯಕಾರ್ಯದಲ್ಲಿ ಭಾಗವಹಿಸಿ ಧನ್ಯರಾದರು.
ಮುಂಬೈಯ ಜಿಎಸ್ ಬಿ ಸೇವಾ ಮಂಡಲ, ಸುಕೃತೀಂದ್ರ ಸ್ವಾಮಿ ಸೇವಾ ಪ್ರತಿಷ್ಟಾನ, ದೆಹಲಿ ಸಮಾಜ, ಬೆಂಗಳೂರು ಸಮಾಜ ಸಹಿತ ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ವಿವಿಧ ಸಂಘಟನೆಗಳ ಪ್ರಮುಖರು, ಕಾರ್ಯಕರ್ತರು, ವೈದಿಕ ವೃಂದ ಈ ಕಾರ್ಯಕ್ರಮದ ಯಶಸ್ಸಿಗಾಗಿ ಶ್ರಮಿಸಿದರು.
ಯುಎಇ ಮೂಲದ ಟೋರ್ಟಿಲ್ಲಾ ಮತ್ತು ಫ್ಲಾಟ್‌ಬ್ರೆಡ್ ತಯಾರಕರಾದ ಫ್ಲೋರ್ ಮಾಸ್ಟರ್ಸ್, ಆಂಧ್ರಪ್ರದೇಶದಲ್ಲಿ ವಿಶ್ವ ದರ್ಜೆಯ ಸಂಯೋಜಿತ ಫ್ಲಾಟ್‌ಬ್ರೆಡ್ ಉತ್ಪಾದನಾ ಪರಿಸರ…
ಕಾರಿಗೆ ಖಾಸಗಿ ಬಸ್ ಡಿಕ್ಕಿಯಾಗಿ ಕಾರಿನಲ್ಲಿದ್ದ ಪುಟ್ಟ ಮಕ್ಕಳು ಸಹಿತ ಚಾಲಕ ಅಪಾಯದಿಂದ ಪಾರಾಗಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 66ರ…
ಅಮೆರಿಕ ಮತ್ತು ಇರಾನ್ ನಡುವೆ ಪರ್ಷಿಯನ್ ಕೊಲ್ಲಿಯಲ್ಲಿನ ಮಿಲಿಟರಿ ದಾಳಿಗಳು ತಾತ್ಕಾಲಿಕವಾಗಿ ಸ್ಥಗಿತಗೊಂಡ ಬೆನ್ನಲ್ಲೇ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ…
ದೇಶಾದ್ಯಂತ ವ್ಯಾಪಕ ಸಂಚಲನ ಮೂಡಿಸಿದ್ದ ನೀಟ್-ಯುಜಿ (NEET-UG) ಪರೀಕ್ಷಾ ಅಕ್ರಮ ಹಾಗೂ ದೆಹಲಿಯ ಜಂತರ್ ಮಂತರ್‌ನಲ್ಲಿ ವಿದ್ಯಾರ್ಥಿಗಳು ನಡೆಸುತ್ತಿರುವ ತೀವ್ರ…
ನಗರದ ಲಾಲ್‌ಬಾಗ್ ಸಿಗ್ನಲ್ ಸಮೀಪ ಶನಿವಾರ ಮಧ್ಯಾಹ್ನ ಸಾರ್ವಜನಿಕರ ಕಣ್ಣೆದುರಲ್ಲೇ ಭೀಕರ ಮಾರಕಾಸ್ತ್ರ ದಾಳಿ ನಡೆದಿದ್ದು, ಪ್ರಸಿದ್ಧ ರೌಡಿಶೀಟರ್ ಒಬ್ಬ…
ಲಾವಣ್ಯ ಹತ್ಯೆ ಪ್ರಕರಣದ ಆರೋಪಿ ಚೇತನ್ ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಇದೀಗ ಆತನ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. ವಿಷಸೇವನೆ…