ಶಿಮ್ಲಾ: ಭಾರೀ ಮಳೆ ಮತ್ತು ಭೂಕುಸಿತದಿಂದ ತತ್ತರಿಸಿರುವ ಹಿಮಾಚಲ ಪ್ರದೇಶದಲ್ಲಿ ಭೂಕುಸಿತದ ಮತ್ತೊಂದು ಭಯಾನಕ ವಿಡಿಯೋ ವೈರಲ್ ಆಗಿದೆ.
ಹಿಮಾಚಲ ಪ್ರದೇಶದ ಹೆದ್ದಾರಿಯಲ್ಲಿ ಭೂಕುಸಿತದಿಂದ ಅವಶೇಷಗಳನ್ನು ತೆರವುಗೊಳಿಸುವ ವೇಳೆ ಭೂಕುಸಿತ ಸಂಭವಿಸಿದ್ದು, ಬೃಹತ್ ಬಂಡೆಯೊಂದು ಜೆಸಿಬಿ ಮೇಲೆ ಬಿದ್ದಿದ್ದು, ಜೆಸಿಬಿ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಆರಂಭದಲ್ಲಿ ಮಣ್ಣು ಕುಸಿಯಿತಾದರೂ ನೋಡ ನೋಡುತ್ತಲೇ ಬೃಹತ್ ಬಂಡೆಗಲ್ಲುಗಳು ರಸ್ತೆ ಅಪ್ಪಳಿಸಲಾರಂಭಿಸಿದವು.
ಈ ವೇಳೆ ಭಾರಿ ಗಾತ್ರದ ಬಂಡೆಯೊಂದು ಜೆಸಿಬಿ ಮೇಲೆ ಬಿದ್ದಿದ್ದು, ಈ ವೇಳೆ ಅಪಾಯನ್ನು ಅರಿತ ಜೆಸಿಬಿ ಚಾಲಕ ಕ್ಷಣ ಮಾತ್ರದಲ್ಲಿ ಜೆಸಿಬಿಯಿಂದ ಕೆಳಗಿಳಿದು ಓಡಿ ಪ್ರಾಣ ಉಳಿಸಿಕೊಂಡಿದ್ದಾನೆ.



