ದಿನಾಂಕ 14-04-2025 ರಂದು ಮುಂಬೈಯಲ್ಲಿ ಬಂಟರ ಸಂಘ ಮುಂಬೈ ಇದರ ವತಿಯಿಂದ ಜರಗಿದ “ಸ್ನೇಹ ಸಮ್ಮಿಲನ-2025” ರ ಕಾರ್ಯಕ್ರಮದಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಶ್ರೀ ಐಕಳ ಹರೀಶ್ ಶೆಟ್ಟಿಯವರು ಭಾಗಿಯಾಗಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಶ್ರೀ ರಘುರಾಮ್ ಶೆಟ್ಟಿ ಅವೆನ್ಯು ಇವರನ್ನು ಅತ್ಯುತ್ತಮ ಹೊಟೇಲ್ ಉದ್ಯಮಿ ಎಂದು, ಶ್ರೀ ತೋನ್ಸೆ ಆನಂದ್ ಎಂ. ಶೆಟ್ಟಿಯವರನ್ನು ಅತ್ಯುತ್ತಮ ಕೈಗಾರಿಕಾ ಉದ್ಯಮಿ ಎಂದು ಹಾಗೂ ನಟಿ ಪೂಜಾ ಹೆಗ್ಡೆಯವರ ಸಿನಿರಂಗದ ಸಾಧನೆಯನ್ನು ಗುರುತಿಸಿ ವಿಶೇಷವಾಗಿ ಸನ್ಮಾನಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಪ್ರವೀಣ್ ಭೋಜ ಶೆಟ್ಟಿಯವರು ವಹಿಸಿದ್ದರು. ಮುಖ್ಯ ಅತಿಥಿಯಾಗಿ ಡಾ. ಕೆ. ಪ್ರಕಾಶ್ ಶೆಟ್ಟಿಯವರು, ಗೌರವಾನ್ವಿತ ಅತಿಥಿಯಾಗಿ ಸಿ ಎ ಶಂಕರ್ ಶೆಟ್ಟಿ, ಶ್ರೀ ರವಿನಾಥ್ ಶೆಟ್ಟಿ ಅಂಕಲೇಶ್ವರ್, ಶ್ರೀ ಜಯರಾಮ್ ಎನ್ ಶೆಟ್ಟಿಯವರು ಆಗಮಿಸಿದ್ದರು. ಅಲ್ಲದೆ ನಟಿ ಪೂಜಾ ಹೆಗ್ಡೆಯವರ ಆಗಮನ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿತ್ತು.

ಈ ಸಂದರ್ಭದಲ್ಲಿ ಮಹೇಶ್ ಎಸ್.ಶೆಟ್ಟಿ ಬಾಬಾ’ಸ್ ಗ್ರೂಪ್ , ಡಾ. ಆರ್ ಕೆ ಶೆಟ್ಟಿ, ಗಿರೀಶ್ ಶೆಟ್ಟಿ ತೆಳ್ಳಾರ್, ಚಿತ್ರ ಆರ್. ಶೆಟ್ಟಿ, ರಮೇಶ್ ಶೆಟ್ಟಿ ಸವಿನ್ ಶೆಟ್ಟಿ ಯೂತ್ ಬಂಟ್ಸ್, ನವೀನ್ ಶೆಟ್ಟಿ ಇನ್ನಾ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ನಳದಮಯಂತಿ ನಾಟಕ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಅಶೋಕ್ ಪಕ್ಕಳ, ಕರ್ನೂರು ಮೋಹನ್ ರೈ ಮತ್ತು ಬಾಬಾ ಅರಸ ಕಾರ್ಯಕ್ರಮ ನಿರ್ವಹಿಸಿದರು.



