ಜನ ಮನದ ನಾಡಿ ಮಿಡಿತ

Advertisement

ಸಕಲ ಕಲೆಗಳಿಗೂ ಸೈ ‌ ಬ್ರಿಶಾ.ಬಿ.ಇರಾ

ಬ್ರಿಶಾ.ಬಿ.ಇರಾ ಮೂಲತಃ ಮಂಗಳೂರಿನ ಇರಾ ಗ್ರಾಮದವರಾದ ಇವರು ಭಾಸ್ಕರ್ ಇರಾ ಮತ್ತು ಸಂಜನಾ ಬಿ ಇರಾ ಇವರ ಸುಪುತ್ರಿ. ಪ್ರಸ್ತುತ ವಿಜಯಪುರದ ವಿದ್ಯಾ ವಿಕಾಸ್ ಮಂದಿರ ಸ್ಕೂಲ್ ನಲ್ಲಿ ಯುಕೆಜಿ ವ್ಯಾಸಂಗ ಮಾಡುತ್ತಿದ್ದಾರೆ.

ಇವರು ಭರತನಾಟ್ಯ ವೆಸ್ಟರ್ನ್ ಡ್ಯಾನ್ಸ್ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಭರವಸೆ ಮೂಡಿಸುವ ಪ್ರತಿಭೆಯಾಗಿದ್ದು, ಇವರು ತನ್ನ ನಾಲ್ಕನೇ ವಯಸ್ಸಿನಿಂದಲೇ ಭರತನಾಟ್ಯ ಅಭ್ಯಾಸವನ್ನು ಕುಮಾರಿ ಪೂರ್ವಿ ಎನ್ ತಳ್ವಾರ್ ಇವರಲ್ಲಿ ಅಭ್ಯಾಸ ಮಾಡುತ್ತಿದ್ದಾರೆ. ಭರತನಾಟ್ಯದಲ್ಲಿ 2024ರಲ್ಲಿ ಮೈಸೂರಿನಲ್ಲಿ ನಡೆದಿರುವ ಲಾಸ್ಯ ನವರಸೋ ಉತ್ಸವದಲ್ಲಿ ಲಾಸ್ಯಸಂಗಮ ಪ್ರಶಸ್ತಿ ಬೆಂಗಳೂರಿನಲ್ಲಿ ನಡೆದ ಡ್ಯಾನ್ಸ್ ರಿದಂ 2025 ಭಾಗವಹಿಸಿ ಪ್ರಶಸ್ತಿಯನ್ನು ಪಡೆದು ಕೀರ್ತಿ ತಂದಿದ್ದಾರೆ.

ಅಲ್ಲದೆ ಮಂಗಳೂರು ಬೆಳಗಾವಿ, ಅಥಣಿ ,ಮುಧೋಳ್, ವಿಜಯಪುರ ಮುಂತಾದ ಕಡೆ 30ಕ್ಕೂ ಹೆಚ್ಚು ಕಾರ್ಯಕ್ರಮದಲ್ಲಿ ಭರತನಾಟ್ಯ ಪ್ರದರ್ಶನ ಮಾಡಿ ಅಭಿನಂದನ ಪತ್ರ ಪಡೆದುಕೊಂಡಿದ್ದು, ಅನ್ ಲೈನ್ ಸ್ಪರ್ಧೆಯಲ್ಲಿಯೂ ಪ್ರಥಮ ಸ್ಥಾನವನ್ನು ಪಡೆದಿದ್ದಾರೆ. ‌ಬ್ರಿಶಾ ನಾಟ್ಯದಲ್ಲಿ ಮಾತ್ರವಲ್ಲದೇ ಚಿನ್ನರ ಚಿತ್ತಾರ ಡ್ರಾಯಿಂಗ್ ಸ್ಪರ್ಧೆಯಲ್ಲಿ ಪ್ರಶಸ್ತಿ ಪಡೆದಿದ್ದಾರೆ. ವಾಯ್ಸ್ ಆಫ್ ಆರಾಧನಾ ತಂಡದಲ್ಲಿ ಭಾಗವಹಿಸಿ ಮಾರ್ಚ್ ತಿಂಗಳ ವಿಜೇತರಾಗಿ ಹೊರ ಹೊಮ್ಮಿರುವುದು ವಿಶೇಷ.

ಇವರಿಗೆ ಹಲವಾರು ಪ್ರಶಸ್ತಿಗಳು ದೊರಕಿದ್ದು, ಕರ್ನಾಟಕ ರಾಜ್ಯ ಕಲಾವಿದರ ರಕ್ಷಣಾ ವೇದಿಕೆ ಬೆಂಗಳೂರು ಹಾಗೂ ಗಡಿನಾಡು ನುಡಿ ರಾಷ್ಟ್ರೀಯ ವಾರ್ತ ಪತ್ರಿಕೆ, ಇವರ ಸಂಯುಕ್ತ ಆಶ್ರಯದಲ್ಲಿ ಗಡಿನಾಡು ಸಾಂಸ್ಕೃತಿಕ ಉತ್ಸವ 2025 ಕರ್ನಾಟಕ ಬಾಲ್ಯ ನಾಟ್ಯ ರಾಣಿ ಪ್ರಶಸ್ತಿ ಅಲ್ಲದೆ ಸಮಾಜ ಕಲ್ಯಾಣ ಸಂಸ್ಥೆ ಬೆಂಗಳೂರು ಹಾಗೂ ವಿಶ್ವ ಕನ್ನಡ ಜಾನಪದ ಪರಿಷತ್ ಬೆಂಗಳೂರು ಇವರ ಆಶ್ರಯದಲ್ಲಿ ಸುವರ್ಣ ಕರ್ನಾಟಕ ನಾಟ್ಯ ಮಯೂರಿ ಪ್ರತಿಭಾ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ.

 

Leave a Reply

Your email address will not be published. Required fields are marked *

ಬಂಟ್ವಾಳ: ಶ್ರೀರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ “ಶ್ರೀರಾಮನ ಚರಿತ್ರೆಯ” ಯಕ್ಷಗಾನ….!

ಮಂಗಳೂರು: ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ’ ಕೃತಿ ಬಿಡುಗಡೆ..!

ಬಂಟ್ವಾಳ: ಜೋರಾದ ಮಳೆಗೆ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದಲ್ಲಿ ಮನೆಯೊಂದಕ್ಕೆ ಹಾನಿ..!

ಉಡುಪಿ: ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿ ಮೋಸ ಮಾಡಿದ ಮಹಿಳೆ..!

ದುಬೈ: ಅಕ್ಟೋಬರ್ 25 ರಂದು ದುಬೈನಲ್ಲಿ ದುಬೈ ಗಡಿನಾಡ ಉತ್ಸವ

ಮಂಗಳೂರು: ಅಶೋಕ ಜನಮನ ಕಾರ್ಯಕ್ರಮ ಆಯೋಜನೆ; ನೂಕು ನುಗ್ಗಲು ಉಂಟಾಗಿ ಅಸ್ವಸ್ಥರಾದ 11ಕ್ಕೂ ಹೆಚ್ಚು ಜನ…!

ಬಂಟ್ವಾಳ: ದ.ಕ.ಜಿಲ್ಲಾ ತುಳು ನಾಟಕ ಕಲಾವಿದರ ಒಕ್ಕೂಟ ವಾರ್ಷಿಕ ಮಹಾಸಭೆ; ನೂತನ ಅಧ್ಯಕ್ಷರಾಗಿ ಕಿಶೋರ್ ಡಿ.ಶೆಟ್ಟಿ ಪುನರಾಯ್ಕೆ….!

ಬಂಟ್ವಾಳ: ಮೊಡಂಕಾಪು ಆಯ್ಯಪ್ಪ ಮಂದಿರದಲ್ಲಿ ನಡೆದ ಸಭೆಯಲ್ಲಿ ಮೂರನೇ ಅವಧಿಯ ಅಧ್ಯಕ್ಷರಾಗಿ ಆಯ್ಕೆಯಾದ ಸುನಿಲ್ ಎನ್

ಬಂಟ್ವಾಳ: ಸುರಿದ ಮಳೆಗೆ ಅವರಣಗೋಡೆ ಕುಸಿದು ಬಿದ್ದು ಹಾನಿ…!

error: Content is protected !!