ನೀಲಾಂಬಿಕೆ ಹೀರೇಮಠರವರು ಗುಲ್ಬರ್ಗ ಜಿಲ್ಲೆಯ ಸೇಡಂ ತಾಲೂಕಿನ ನಿಡಗುಂದ ಗ್ರಾಮದ ಬಾಲಪ್ರತಿಭೆಯಾಗಿದ್ದು, ತಂದೆ ರೇವಣ ಸಿದ್ದಯ್ಯ ಹಿರೇಮಠ, ತಾಯಿ ಸೌಭಾಗ್ಯ ನೀಲಾಂಬಿಕೆಯವರ ಸುಪುತ್ರಿ. ನಂದೀಶ್ವರ ಹಿರಿಯ ಪ್ರಾಥಮಿಕ ಶಾಲೆ ನಿಡಗುಂದದಲ್ಲಿ 9 ನೇ ತರಗತಿಯಲ್ಲಿ ಕಲಿಯುತ್ತಿದ್ದಾರೆ.

ವಾಯ್ಸ್ ಆಫ್ ಆರಾಧನ ತಂಡದಲ್ಲಿ ಹಲವಾರು ಕಾರ್ಯಕ್ರಮ ನೀಡಿದ್ದಾರೆ. ಹಲವಾರು ಬಹುಮಾನಗಳನ್ನೂ ಸಹ ಪಡೆದಿದ್ದಾರೆ. ಓದುವುದು, ಕಥೆ, ಹಾಡು, ನೃತ್ಯ ಮಾತ್ರವಲ್ಲದೆ ಡ್ರಾಯಿಂಗ್ ನಲ್ಲೂ ಮುಂದು ನಮ್ಮ ನೀಲಾಂಬಿಕೆ. ಚಿತ್ರ ಬಿಡಿಸುವುದು ಇವರ ಹವ್ಯಾಸ. ಜನಸ್ಪಂದನದಲ್ಲಿ ಪ್ರಶಸ್ತಿ ಕೂಡ ತನ್ನದಾಗಿಸಿಕೊಂಡಿದ್ದಾರೆ. ಇನ್ನು ಹಲವಾರು ಕಾರ್ಯಕ್ರಮದಲ್ಲಿ ಭಾಗವಹಿಸಿ ತನ್ನ ಪ್ರತಿಭೆ ಪ್ರದರ್ಶಿಸುತ್ತಾ ಮುನ್ನಡೆಯುತ್ತಿದ್ದಾರೆ.



