ಮಂಗಳೂರು ನಗರದ ಕೂಳೂರಿನಲ್ಲಿರುವ ಯೆನೆಪೋಯ ಇನ್ಸಿಟ್ಯೂಟ್ ಆಫ್ ಆರ್ಟ್ಸ್ ಸೈನ್ಸ್ ಕಾಮರ್ಸ್ ಮತ್ತು ಮನೆಜ್ಮೆಂಟ್ ಕಾಲೇಜಿನಲ್ಲಿ ಯತೀಮ್ ಬ್ಯಾರಿ ಭಾಷಾ ಕಾದಂಬರಿ ಬಿಡುಗಡೆ ಮತ್ತು ಮಾರ್ದನಿ ಕನ್ನಡ ಜರ್ನಲ್ ವೆಬ್ಸೈಟ್ ಲೋಕಾರ್ಪಣೆ ಕಾರ್ಯಕ್ರಮವು ಬುಧವಾರ ಬೆಳಗ್ಗೆ 10 ಗಂಟೆಗೆ ನಡೆಯಲಿದೆ.

ಕಾಲೇಜು ಪ್ರಾಂಶುಪಾಲರಾದ ಡಾ. ಅರುಣ್ ಎ. ಭಾಗವತ್ ರವರ ಅಧ್ಯಕ್ಷತೆಯಲ್ಲಿ ನಡೆಯುವ ಈ ಕಾರ್ಯಕ್ರಮಕ್ಕೆ ಮುಖ್ಯ ಅಥಿತಿಯಾಗಿ ಅಭಿಮತ ಟಿವಿ ವಾಹಿನಿಯ ಆಡಳಿತ ಪಾಲುದಾರರಾದ ಡಾ. ಮಮತಾ ಪಿ. ಶೆಟ್ಟಿ ಆಗಮಿಸಲಿರುವರು. ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಉಮ್ಮರ್ ಯು. ಹೆಚ್. ರವರು ಕೃತಿ ಬಿಡುಗಡೆ ಮಾಡಲಿದ್ದು, ಉಜಿರೆಯ ಎಸ್.ಡಿ.ಎಂ ಕಾಲೇಜಿನ ಸಹಪ್ರಾಧ್ಯಾಪಕರಾದ ಡಾ. ರಾಜಶೇಖರ್ ಹಳೆಮನೆಯವರು ಮಾರ್ದನಿ ಜಾಲತಾಣ ಲೋಕಾರ್ಪಣೆ ನೆರವೇರಿಸಲಿದ್ದಾರೆ. ಯತೀಮ್ ಕನ್ನಡ ಮೂಲ ಕೃತಿಕಾರ ಹಾಗೂ ಕಾಲೇಜಿನ ಸಹ ಪ್ರಾಧ್ಯಾಪಕರೂ ಆಗಿರುವ ನಿಯಾಜ್ ಪಡೀಲ್, ಭಾಷಾಂತರಕಾರರಾಗಿ ಸಾಹಿತಿ ಅಬ್ದುಲ್ ರಹಿಮಾನ್ ಕುತ್ತೆತ್ತೂರು, ಪತ್ರಕರ್ತರಾಗಿರುವ ಹಂಝ ಮಲಾರ್ ಕೃತಿ ಪರಿಚಯಕಾರರಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಉಪನ್ಯಾಸಕಿ ಶಮಿಮಾ ಕುತ್ತಾರ್ ಉಪಸ್ಥಿತರಿರಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.



