ಪೊಳಲಿ ಫ್ರೆಂಡ್ಸ್ ಮಳಲಿ ಮಟ್ಟಿ ಇದರ ಆಶ್ರಯದಲ್ಲಿ ಮಟ್ಟಿ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟ ನಡೆಯಿತು. ಈ ಸಂದರ್ಭದಲ್ಲಿ ಛತ್ತೀಸ್ಗಢ ಬಿಲೈನಲ್ಲಿ ನಡೆದ ರಾಷ್ಟ್ರಮಟ್ಟದ ಥ್ರೋಬಾಲ್ ಪಂದ್ಯಾಟದ ಸಬ್ ಜೂನಿಯರ್ ಬಾಲಕಿಯರ ವಿಭಾಗದಲ್ಲಿ ಪ್ರಥಮ ಮತ್ತು ಬಾಲಕರ ವಿಭಾಗದಲ್ಲಿ ತೃತೀಯ ಸ್ಥಾನ ಹಾಗೂ ಸೀನಿಯರ್ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದು ನಮ್ಮ ರಾಜ್ಯಕ್ಕೆ ಕೀರ್ತಿ ತಂದ ಮಕ್ಕಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಕ್ರೀಡಾ ಪ್ರತಿಭೆಗಳಾದ ಕೆನರಾ ಸಿಬಿಎಸ್ಇ ಶಾಲೆಯ ವಿದ್ಯಾರ್ಥಿಗಳಾದ ನಿಷ್ಕ ರೈ, ಅಮೃತ ಎನ್ ರಾವ್, ವೈಷ್ಣವಿ ಆರ್ ಗುಜರನ್, ಸಾಕ್ಷಿ ಶೆಟ್ಟಿ, ಈಶನ್ ನಾವಡ, ಶ್ರೇಯ್ ರವಿಕಿರಣ್ ,ಶ್ರೇಷ್ಟ್ ರವಿಕಿರಣ್ ಮತ್ತು ತಂಡದ ತರಬೇತುದಾರರಾದ ಸೂರಜ್ ಮಟ್ಟಿ ಇವರನ್ನು ಪೊಳಲಿ ಫ್ರೆಂಡ್ಸ್ ಸ್ಥಾಪಕರಾದ ಗಣೇಶ್ ಮತ್ತು ಎಂ ಪಿ ಎಲ್ ಆಯೋಜಕರಾದ ಕಿರಣ್ ಮಟ್ಟಿ ಮತ್ತು 6 ತಂಡದ ಮಾಲೀಕರು ಸನ್ಮಾನಿಸಿದರು. ಇವರ ಕ್ರೀಡಾ ಭವಿಷ್ಯ ಇನ್ನಷ್ಟು ಉಜ್ವಲವಾಗಿರಲಿ ಎಂದು ಹಾರೈಸಿದರು.



