ಕಾಶ್ಮೀರದ ಪಹಲ್ಗಾಮ್ನಲ್ಲಿ ಉಗ್ರರರು ನಡೆಸಿದ ದಾಳಿಯನ್ನು ಖಂಡಿಸಿ ದೇಶ ವಿದೇಶಗಳಿಂದಲೂ ಕೂಗು ಕೇಳಿ ಬಂದಿದ್ದು, ಈ ಕೃತ್ಯದಲ್ಲಿ ಉಗ್ರರಿಗೆ ಪಾಕ್ ಬೆಂಬಲ ಖಚಿತವಾಗುತ್ತಿದ್ದಂತೆ ಭಾರತ ಸರ್ಕಾರ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಸಭೆ ನಡೆಸಿ ಹಲವು ಮಹತ್ವದ ನಿರ್ಣಯಗಳನ್ನು ಕೈಗೊಂಡಿದೆ.

ಸಿಂಧೂ ನದಿ ನೀರಿನ ಒಪ್ಪಂದ ರದ್ದು ಮಾಡುವ ಮೂಲಕ ಪಾಕಿಸ್ತಾನದ ಕೃಷಿ ಕ್ಷೇತ್ರಕ್ಕೆ ಭಾರಿ ಹೊಡೆತ ನೀಡಿದೆ. ಭಾರತ ಪಾಕಿಸ್ತಾನದ ವಿನಿಮಯ ಬಿಂದುವಾದ ವಾಘಾ – ಅಠಾರಿ ಬಾರ್ಡರ್ ಬಂದ್ ಮಾಡಿ ಸರ್ಕಾರ ಆದೇಶಿಸಿದ್ದು,ಇದರಿಂದಾಗಿ ಪಾಕ್ ಗೆ ಸರಕು ಸಾಗಾಟ ನಿಂತಿದ್ದು, ಅಗತ್ಯ ವಸ್ತುಗಳಿಗೆ ಕೊರತೆ ಉಂಟಾಗುವ ಭೀತಿಯಲ್ಲಿ ಪಾಕಿಸ್ತಾನ ನಡುಗುತ್ತಿದೆ. ಭಾರತದಲ್ಲಿನ ಪಾಕ್ ಪ್ರಜೆಗಳು 48 ಗಂಟೆಗಳಲ್ಲಿ ಭಾರತ ತೊರೆಯುವಂತೆ ಸೂಚನೆಯನ್ನು ನೀಡಿದೆ. ಭಾರತದಲ್ಲಿನ 25 ಪಾಕ್ ರಾಜತಾಂತ್ರಿಕರ ಉಚ್ಛಾಟನೆ ಮಾಡಿ ಭಾರತ ತೊರೆಯಲು ವಾರದ ಗಡುವು ನೀಡಿದೆ. ಈಗಾಗಲೇ ಪಾಕ್ ಪ್ರಜೆಗಳಿಗೆ ನೀಡಿರುವ ವೀಸಾ ರದ್ದು ಮಾಡಿದ್ದು, ಇನ್ಮುಂದೆ ಪಾಕ್ ಪ್ರಜೆಗಳಿಗೆ ಭಾರತದ ವೀಸಾ ಅವಕಾಶ ಇಲ್ಲ ಎಂದು ಘೋಷಿಸಿದೆ.
ಈ ಮೂಲಕ ಭಾರತ ಸರ್ಕಾರ ಪಾಕಿಸ್ತಾನಕ್ಕೆ ಮೊದಲ ಹಂತದ ಪ್ರತಿಕ್ರಿಯೆಯನ್ನು ನೀಡಿದೆ.



