ಪಹಲ್ಗಾಮ್ ದಾಳಿ ಬೆನ್ನಲ್ಲೇ ಬಿಎಸ್ಎಫ್ ಪಡೆ ಉಗ್ರರ ವಿರುದ್ಧದ ಕೂಂಬಿಂಗ್ ತೀವ್ರಗೊಳಿಸಿದ್ದಾರೆ. ಪಹಲ್ಗಾಮ್ ದಾಳಿ ನಡೆದು ಎರಡು ದಿನದ ನಂತರ ಕಾಶ್ಮೀರದ ಉಧಮ್ಪುರದಲ್ಲಿ ಗುಂಡಿನ ಚಕಮಕಿ ನಡೆದಿದೆ.

ದುರಾದೃಷ್ಟವಶಾತ್ ಭಾರತೀಯ ಸೇನೆ ಓರ್ವ ಸೈನಿಕನನ್ನು ಕಳೆದುಕೊಂಡಿದೆ. ಉಗ್ರರು ಅಡಗಿರೋದು ಖಚಿತವಾಗಿತ್ತು. ಜಮ್ಮು ಮತ್ತು ಕಾಶ್ಮೀರ ಪೊಲೀಸರು ಹಾಗೂ ಬಿಎಸ್ಎಫ್ ಪಡೆ ಜಂಟಿ ಕಾರ್ಯಾಚರಣೆಗೆ ಇಳಿದಿತ್ತು. ಈ ವೇಳೆ ಎರಡೂ ಕಡೆಯಿಂದ ಗುಂಡಿನ ಚಕಮಕಿ ಆಗಿದೆ.
ಈ ಘಟನೆಯಲ್ಲಿ ಓರ್ವ ಸೈನಿಕ ಗಂಭೀರವಾಗಿ ಗಾಯಗೊಂಡಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸುವ ಪ್ರಯತ್ನ ನಡೆದಿತ್ತಾದರೂ, ಅವರು ಬದುಕುಳಿಯಲಿಲ್ಲ. ಭದ್ರತಾ ಸಿಬ್ಬಂದಿ ಇಂದು ಬೆಳಗ್ಗೆಯೇ ಉಧಮ್ಪರ ಜಿಲ್ಲೆಯ ದುದು ಬಸಂತ್ಗರ್ ಪ್ರದೇಶದಲ್ಲಿ ಆಪರೇಷನ್ ಶುರುಮಾಡಿತ್ತು. ಉಗ್ರರು ಅಡಗಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಲಾಗಿತ್ತು. ಯೋಧರತ್ತ ಫೈರಿಂಗ್ ಮಾಡಿರುವ ಉಗ್ರರು ಮತ್ತೆ ನಾಪತ್ತೆ ಆಗಿದ್ದಾರೆ. ಶೋಧಕಾರ್ಯ ಮುಂದುವರೆದಿದೆ ಎಂದು ಸೇನೆ ತಿಳಿಸಿದೆ.



