ಕೊಂಕಣಿ ಬರಹಗಾರರಿಗೆ, ಲೇಖಕರಿಗೆ ಪ್ರೋತ್ಸಾಹ ನೀಡಿ, ಸಾಹಿತ್ಯಕ್ಕೆ ಆದ್ಯತೆ ಕೊಡುವ ಉದ್ದೇಶದಿಂದ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಪುಸ್ತಕಗಳ ಸಗಟು ಖರೀದಿ ಯೋಜನೆಯನ್ನು ಹಮ್ಮಿಕೊಂಡಿದೆ.

ಈ ಯೋಜನೆಯಲ್ಲಿ 2025-26 ರ ಕ್ಯಾಲೆಂಡರ್ ವರ್ಷದಲ್ಲಿ ಪ್ರಕಟಗೊಂಡ ಯಾವುದೇ ಪ್ರಕಾರ ಕೊಂಕಣಿ ಪುಸ್ತಕಗಳನ್ನು 20% ರಿಯಾಯಿತಿ ನೀಡಿ ರೂ 2000/- ಮೌಲ್ಯದ ಪುಸ್ತಕಗಳನ್ನು ಖರೀದಿಸಬಹುದಾಗಿದೆ. ಅಕಾಡೆಮಿಯ ವಾಚನಾಲಯದ ಉಪಯೋಗಕ್ಕಾಗಿ ಕೊಂಕಣಿ ಭಾಷೆ, ಸಾಹಿತ್ಯ ಸಂಸ್ಕೃತಿಗೆ ಸಂಬಂಧಿಸಿದ ಯಾವುದೇ ಭಾಷೆಯ ಪುಸ್ತಕಗಳ ಗರಿಷ್ಠ 1000/- ಮೌಲ್ಯದ ಪ್ರತಿಗಳನ್ನು ಖರೀದಿಸಬಹುದಾಗಿದೆ. ಆಸಕ್ತರು ಈ ಯೋಜನೆಯ ಪ್ರಯೋಜನವನ್ನು ಪಡೆಯಬಹುದಾಗಿದೆ ಎಂದು ಅಕಾಡೆಮಿಯ ರಿಜಿಸ್ಟ್ರಾರ್ ಪ್ರಕಟಣೆಯಲ್ಲಿ ತಿಳಿಸಿದೆ.



