ಜನ ಮನದ ನಾಡಿ ಮಿಡಿತ

Advertisement

ಕೋಲಾರ : ₹10 ಸಾವಿರ ಬೆಟ್ಟಿಂಗ್ ಕಟ್ಟಿ ಮದ್ಯ ಸೇವಿಸಿದ ಭೂಪ.. ದುಡ್ಡಿನ ಆಸೆಗೆ ಜೀವ ಬಿಟ್ಟ ಯುವಕ

ಈ ಯುವಕನ ಹೆಸರು ಕಾರ್ತಿಕ್ ಅಂತ. ಮುಳಬಾಗಿಲು ತಾಲೂಕಿನ ಪೂಜಾರಹಳ್ಳಿಯ ನಿವಾಸಿ. ಇವನಿಗೆ ಇನ್ನೂ 21 ವರ್ಷ ವಯಸ್ಸು. ಕಾರ್ತಿಕ್‌ಗೆ ಮದುವೆಯಾಗಿ ಒಂದು ವರ್ಷ ಆಗಿತ್ತು. ಕಳೆದ 8 ದಿನಗಳ ಹಿಂದಷ್ಟೇ ಕಾರ್ತಿಕ್ ಪತ್ನಿ ಮಗುವಿಗೆ ಜನ್ಮ ನೀಡಿದ್ದರು.

ಕಾರ್ತಿಕ್‌ ಸ್ನೇಹಿತರು ಮದ್ಯ ಸೇವನೆಗೆ ಬೆಟ್ಟಿಂಗ್ ಕಟ್ಟಿದ್ದಾರೆ. ನೀರು ಬೆರಸದೆ ಮದ್ಯ ಸೇವನೆ ಮಾಡಿದ್ರೆ 10 ರೂಪಾಯಿ ಕೊಡುವ ಸವಾಲು ಹಾಕಿದ್ದಾರೆ. ದುಡ್ಡಿನ ಆಸೆಗೆ ಚಾಲೆಂಜ್ ಒಪ್ಪಿಕೊಂಡ ಕಾರ್ತಿಕ್, 5 ಬಾಟಲಿ ಮದ್ಯವನ್ನು ನೀರು ಬೆರಸದೆ ಕುಡಿದಿದ್ದಾನೆ.

ನೀರು ಬೆರಸದೇ 5 ಬಾಟಲ್ ಕುಡಿದ ಮೇಲೆ ಕಾರ್ತಿಕ್ ತೀವ್ರ ಅಸ್ವಸ್ಥನಾಗಿದ್ದಾನೆ. ಸ್ನೇಹಿತರು ಈತನನ್ನು ಮುಳಬಾಗಿಲು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗಿಲ್ಲ. 10 ಸಾವಿರ ರೂಪಾಯಿ ಆಸೆಗೆ ಎಣ್ಣೆ ಕುಡಿದ ಕಾರ್ತಿಕ್ ಕೊನೆಗೆ ಉಸಿರೇ ಬಿಟ್ಟಿದ್ದಾನೆ.

 

ಕಾರ್ತಿಕ್ ಜೊತೆಗಿದ್ದ ವೆಂಕಟರೆಡ್ಡಿ, ಸುಬ್ರಮಣಿ ಮತ್ತು ಇತರೆ ಮೂವರು ಬೆಟ್ ಕಟ್ಟಿದ್ದಾರೆ. ವೆಂಕಟರೆಡ್ಡಿ 5 ಬಾಟಲ್‌ ಮದ್ಯ ಸೇವಿಸಿದರೆ 10 ಸಾವಿರ ರೂಪಾಯಿ ಕೊಡುವುದಾಗಿ ಹೇಳಿದ್ದರಂತೆ. ನಂಗಲಿ ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿದ್ದು, ವೆಂಕಟರೆಡ್ಡಿ, ಸುಬ್ರಮಣಿ ಅನ್ನು ಬಂಧಿಸಿ, ಇತರೆ ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ.

Leave a Reply

Your email address will not be published. Required fields are marked *

ಪಟ್ಲ ಸತೀಶ್ ಶೆಟ್ಟಿ ಅವರಿಗೆ ಡಾ. ಶಿವರಾಮ ಕಾರಂತ ಪ್ರಶಸ್ತಿ..!

ವ್ಯಕ್ತಿಯೊಬ್ಬ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ…!

ವಿ ಡಿ ಸತೀಶನ್ ಅವರನ್ನು ಕಾಸರಗೋಡಿನಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಲಾಯಿತು…!

ಜಿಲ್ಲೆಯ ಹಿರಿಯ ರಾಜಕಾರಣಿ, ಬೈಂದೂರಿನ ಮಾಜಿ ಶಾಸಕ ಬಸ್ರೂರು ಅಪ್ಪಣ್ಣ ಹೆಗ್ಡೆ ನಿಧನ…!

ಬಂಟ್ವಾಳ: ನಿವೃತ್ತ ಕೃಷಿ ಅಧಿಕಾರಿ ನಾರಾಯಣ ನಾಯ್ಕ್ (65) ಹೃದಯಾಘಾತದಿಂದ ನಿಧನ!

ಮಂಗಳೂರು: ಪಟ್ಲ ಸತೀಶ್ ಶೆಟ್ಟಿಯವರಿಗೆ ಅತ್ಯುನ್ನತ ಡಾ. ಶಿವರಾಮ ಕಾರಂತ ಪ್ರಶಸ್ತಿ ಘೋಷಣೆ!

ಮಂಗಳೂರು: ಪಚ್ಚನಾಡಿ ರೈಲ್ವೇ ಹಳಿಯಲ್ಲಿ ಯುವಕನ ಮೃ*ತದೇಹ ಪತ್ತೆ; ಸಂಶಯಾಸ್ಪದ ಸಾ*ವು..!

ಬಂಟ್ವಾಳ: ಪಾಣೆಮಂಗಳೂರು ಸಮೀಪ ನೇತ್ರಾವತಿ ನದಿಯಲ್ಲಿ ಮೃ*ತದೇಹ ಪ*ತ್ತೆ….!

ಮಂಗಳೂರು: ಸಂಹಿತೆಗಳ ಜಾರಿಯಿಂದ ಯೂನಿಯನ್ ಮುಕ್ತ ಭಾರತವಾಗುವ ಅಪಾಯವಿದೆ- ಫಣೀಂದ್ರ ಕೆ ಎಚ್ಚರ!

error: Content is protected !!