ಕೇಂದ್ರಾಡಳಿತ ಪ್ರದೇಶದ ಪೋರ್ಟ್ ಬ್ಲೇರ್ ನಲ್ಲಿ ನೂತನ ವೀರ ಸಾವರ್ಕರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಇಂದು ಚಾಲನೆ ನೀಡಿದರು. ಸುಮಾರು 710 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಈ ವಿಮಾನ ನಿಲ್ದಾಣವನ್ನು ವೀಡಿಯೊ ಕಾನ್ಫರೆನ್ಸ್ ಮೂಲಕ ಪ್ರಧಾನಿ ಮೋದಿ ಉದ್ಘಾಟಿಸಿದರು.
Inaugurating the new integrated terminal building of Veer Savarkar International Airport in Port Blair. It will boost tourism and strengthen the region's economy. https://t.co/Gbey9gseAT
— Narendra Modi (@narendramodi) July 18, 2023
ಇದರಿಂದ ಕೇಂದ್ರಾಡಳಿತ ಪ್ರದೇಶದಲ್ಲಿ ಸಂಪರ್ಕ ವೇಗ ಹೆಚ್ಚಲಿದೆ ಮತ್ತು ಪ್ರದೇಶದ ಆರ್ಥಿಕತೆ ಅಭಿವೃದ್ಧಿಯಾಗಲಿದೆ ಎಂದು ಅವರು ಈ ವೇಳೆ ತಿಳಿಸಿದರು. ಈ ಹಿಂದೆ 4,000 ಮಂದಿ ಪ್ರವಾಸಿಗರಿಗೆ ಮಾತ್ರ ಈ ವಿಮಾನ ನಿಲ್ದಾಣದಿಂದ ಪ್ರಯಾಣಿಸಲು ಸಾಧ್ಯವಾಗುತಿತ್ತು. ಈಗ 10 ವಿಮಾನದಲ್ಲಿ ಏಕಕಾಲದಲ್ಲಿ ನಿಲ್ಲಲು ಸಾಧ್ಯವಾಗಲಿದ್ದು, ದಿನಕ್ಕೆ 11,000 ಪ್ರವಾಸಿಗರ ಪ್ರಯಾಣಕ್ಕೆ ಅನುಕೂಲವಾಗಲಿದೆ. ಉನ್ನತ ತಂತ್ರಜ್ಞಾನದೊಂದಿಗೆ ಸ್ಕೈಲೈಟ್ಸ್ ಅನ್ನು ಅಳವಡಿಸಲಾಗಿದ್ದು, ಇವು ದಿನದ 12 ಗಂಟೆ ವರೆಗೆ ನೈಸರ್ಗಿಕ ಬೆಳಕನ್ನು ನೀಡಲಿದ್ದು, ವಿದ್ಯುತ್ ಬೆಳಕಿನ ಅಗತ್ಯವಿಲ್ಲವಾಗಿದೆ.



