ಜನ ಮನದ ನಾಡಿ ಮಿಡಿತ

Advertisement

ಜೈಪುರ : ವೈಭವ್ ಸೂರ್ಯವಂಶಿ ಬ್ಯಾಟಿಂಗ್ ಪ್ರದರ್ಶನಕ್ಕೆ ಮನಸೋತ ತೆಂಡೂಲ್ಕರ್

ಜೈಪುರ: ಬಿಹಾರದ 14 ವರ್ಷದ ಯುವ ಬ್ಯಾಟರ್ ವೈಭವ್ ಸೂರ್ಯವಂಶಿ ಅವರ ನಿರ್ಭೀತ ಬ್ಯಾಟಿಂಗ್‌ಗೆ ಇಡೀ ಕ್ರೀಡಾ ಜಗತ್ತೇ ಮನ ಸೋತಿದೆ. ಕ್ರಿಕೆಟ್ ದೇವರು ಎಂದೇ ಕರೆಸಿಕೊಳ್ಳುವ ದಿಗ್ಗಜ ಆಟಗಾರ ಸಚಿನ್ ತೆಂಡೂಲ್ಕರ್‌ ಕೂಡ ಸೂರ್ಯವಂಶಿ ಬ್ಯಾಟಿಂಗ್‌ಗೆ ಮನಸೋತಿದ್ದಾರೆ. ‘ವೈಭವ್ ನಿರ್ಭಿತ ಬ್ಯಾಟಿಂಗ್ ಶೈಲಿ, ಬ್ಯಾಟ್ ಸ್ಪೀಡ್, ಲೆಂಗ್ತ್‌ ಆರಿಸಿಕೊಳ್ಳುವ ರೀತಿ ನೋಡುವುದೇ ಕಣ್ಣಿಗೆ ಹಬ್ಬ’ ಎಂದು ಮೆಚ್ಚುಗೆ ಸೂಚಿಸಿದ್ದಾರೆ.

ಕಳೆದ ವರ್ಷ ನಡೆದಿದ್ದ ಐಪಿಎಲ್ ಮೆಗಾ ಹರಾಜಿನಲ್ಲಿ ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿಯು ಬರೋಬ್ಬರಿ 1.1 ಕೋಟಿ ರೂ. ನೀಡಿ ವೈಭವ್ ಸೂರ್ಯವಂಶಿ ಅವರನ್ನು ಖರೀದಿಸಿತ್ತು. ಆಗ ಅವರಿಗೆ 13 ವರ್ಷ ವಯಸ್ಸಾಗಿತ್ತು. ಹರಾಜಿನಲ್ಲೇ ಕ್ರಿಕೆಟ್‌ ಪ್ರೇಮಿಗಳ ಹುಬ್ಬೇರಿಸುವಂತೆ ಮಾಡಿದ್ದ ಈ ಪೋರ ಅತಿ ವೇಗದ ಶತಕ ಬಾರಿಸುವ ಮೂಲಕ ಸಂಚಲನ ಮೂಡಿಸಿದ್ದಾನೆ.

ಐಪಿಎಲ್‌ಗೆ ಪದಾರ್ಪಣೆ ಮಾಡಿದ್ದ ವೈಭವ್, ತಾವಾಡಿದ ಮೊದಲ ಎಸೆತದಲ್ಲೇ ಸಿಕ್ಸರ್‌ ಬಾರಿಸಿ ತಾವೊಬ್ಬ ಅಪಾಯಕಾರಿ ಬ್ಯಾಟರ್‌ ಎನ್ನುವ ಸೂಚನೆ ನೀಡಿದ್ದರು. ಇದನ್ನೂ ಸಾಧಿಸಿಯೂ ತೋರಿಸಿದ್ದಾರೆ. ತಮ್ಮ ಆಕ್ರಮಣಕಾರಿ ಬ್ಯಾಟಿಂಗ್‌ ಮೂಲಕ ವಿಶ್ವದರ್ಜೆಯ ಬೌಲರ್‌ಗಳಿಗೂ ಚಳಿ ಬಿಡಿಸಿದ್ದಾರೆ. ಅದರಲ್ಲೂ ಸಿಕ್ಸರ್‌ ಮೂಲಕವೇ ಶತಕ ಬಾರಿಸಿದ್ದು ಅವರ ರನ್‌ ದಾಹ ಎಷ್ಟರ ಮಟ್ಟಿಗೆ ಇದೆ ಎನ್ನುವುದು ಸಾಭೀತಾಗಿದೆ.

Leave a Reply

Your email address will not be published. Required fields are marked *

ಪಟ್ಲ ಸತೀಶ್ ಶೆಟ್ಟಿ ಅವರಿಗೆ ಡಾ. ಶಿವರಾಮ ಕಾರಂತ ಪ್ರಶಸ್ತಿ..!

ವ್ಯಕ್ತಿಯೊಬ್ಬ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ…!

ವಿ ಡಿ ಸತೀಶನ್ ಅವರನ್ನು ಕಾಸರಗೋಡಿನಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಲಾಯಿತು…!

ಜಿಲ್ಲೆಯ ಹಿರಿಯ ರಾಜಕಾರಣಿ, ಬೈಂದೂರಿನ ಮಾಜಿ ಶಾಸಕ ಬಸ್ರೂರು ಅಪ್ಪಣ್ಣ ಹೆಗ್ಡೆ ನಿಧನ…!

ಬಂಟ್ವಾಳ: ನಿವೃತ್ತ ಕೃಷಿ ಅಧಿಕಾರಿ ನಾರಾಯಣ ನಾಯ್ಕ್ (65) ಹೃದಯಾಘಾತದಿಂದ ನಿಧನ!

ಮಂಗಳೂರು: ಪಟ್ಲ ಸತೀಶ್ ಶೆಟ್ಟಿಯವರಿಗೆ ಅತ್ಯುನ್ನತ ಡಾ. ಶಿವರಾಮ ಕಾರಂತ ಪ್ರಶಸ್ತಿ ಘೋಷಣೆ!

ಮಂಗಳೂರು: ಪಚ್ಚನಾಡಿ ರೈಲ್ವೇ ಹಳಿಯಲ್ಲಿ ಯುವಕನ ಮೃ*ತದೇಹ ಪತ್ತೆ; ಸಂಶಯಾಸ್ಪದ ಸಾ*ವು..!

ಬಂಟ್ವಾಳ: ಪಾಣೆಮಂಗಳೂರು ಸಮೀಪ ನೇತ್ರಾವತಿ ನದಿಯಲ್ಲಿ ಮೃ*ತದೇಹ ಪ*ತ್ತೆ….!

ಮಂಗಳೂರು: ಸಂಹಿತೆಗಳ ಜಾರಿಯಿಂದ ಯೂನಿಯನ್ ಮುಕ್ತ ಭಾರತವಾಗುವ ಅಪಾಯವಿದೆ- ಫಣೀಂದ್ರ ಕೆ ಎಚ್ಚರ!

error: Content is protected !!