ಚೋಲ್ಪಾಡಿ ಶ್ರೀ ವೇಣುಗೋಪಾಲಕೃಷ್ಣ ದೇವಸ್ಥಾನ ಇದರ ಎದುರು ಭಾಗದ ನೂತನ ಸುತ್ತು ಪೌಳಿಯ ಶಿಲಾನ್ಯಾಸ ಕಾರ್ಯಕ್ರಮ ಹಾಗೂ MRPL ಸಹಯೋಗದಿಂದ ನಿರ್ಮಿಸಲಾದ ಸಾರ್ವಜನಿಕ ಶೌಚಾಲಯ ಲೋಕಾರ್ಪಣೆ ಕಾರ್ಯಕ್ರಮವು 26-04-2025 ರಂದು ನಡೆಯಿತು.


ಶಿಲಾನ್ಯಾಸದ ಶಿಲೆಗಳನ್ನು ಕಾರ್ಕಳ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರಾದ ಸನ್ಮಾನ್ಯ ಶ್ರೀ ವಿ. ಸುನೀಲ್ ಕುಮಾರ್ ಹಾಗೂ ಶ್ರೀ ಮುನಿಯಾಲು ಉದಯ ಕುಮಾರ್ ಶೆಟ್ಟಿ, ಕಾರ್ಕಳ ನ್ಯಾಯವಾದಿ ಶ್ರೀ ಎಂ.ಕೆ ವಿಜಯ್‌ಕುಮಾರ್, ಶ್ರೀ ಸುಂದರ ಹೆಗ್ಡೆ ಎಳ್ನಾಡುಗುತ್ತು, ಕಾಬೆಟ್ಟು ಹೊಟೇಲ್ ಶೀತಲ್ ಮಾಲಕರಾದ ಶ್ರೀ ನವೀನ್ ಚಂದ್ರ ಶೆಟ್ಟಿ , MRPL ಮಂಗಳೂರು ಇದರ ಹಿರಿಯ ಅಧಿಕಾರಿ ಶ್ರೀ ಪ್ರದೀಪ್ ಕುಮಾರ್ ಇವರ ಸಮ್ಮುಖದಲ್ಲಿ ಭೂಮಿ ಪೂಜೆ ನಡೆಸಿ ನೆಲದಲ್ಲಿ ಇರಿಸಲಾಯಿತು.

ತದನಂತರ MRPL ಮಂಗಳೂರು ಇವರ ಸಹಯೋಗದಿಂದ ಸಾರ್ವಜನಿಕ ಭಕ್ತಾದಿಗಳ ಉಪಯೋಗಕ್ಕಾಗಿ ನಿರ್ಮಿಸಲಾದ “ಸಾರ್ವಜನಿಕ ಶೌಚಾಲಯ” ಇದನ್ನು ಲೋಕಾರ್ಪಣೆಗೊಳಿಸಲಾಯಿತು. ನಂತರ ನಡೆದ ಸಭಾಕಾರ್ಯಕ್ರಮ ಉದ್ಘಾಟಿಸಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶಾಸಕ ಸುನೀಲ್ ಕುಮಾರ್, ‘ನಾಡಿನ ಏಳಿಗೆಗಾಗಿ ನಾಡಿನ ಸುಭಿಕ್ಷೆಗಾಗಿ ಭಕ್ತಾದಿಗಳ ಅನುಕೂಲತೆಗಾಗಿ ಊರ ದೇವರ ಗುಡಿಗೋಪುರಗಳ ಪೂರ್ಣ ಕಟ್ಟಡ ಹಾಗೂ ಸೌಲಭ್ಯ ಅತ್ಯಗತ್ಯ. ಸನಾತನ ಭಾರತದ ಪರಂಪರೆಯಲ್ಲಿ ದೇವರನ್ನು ಭಕ್ತಿ ಭಾವದಿಂದ ನಮಿಸಿ ಭಕ್ತರು ಕೃತಾರ್ಥರಾಗುತ್ತಾರೆ. ಮುಂದಿನ ದಿನದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯವು ಸುಗುಮವಾಗಿ ಸಾಗಲಿ ಎಂದು ಶುಭ ಹಾರೈಸಿದರು.

ಶ್ರೀಯುತ ರಾಘವೇಂದ್ರ ಉಪಾಧ್ಯಾಯ ಗೌರವ ಸಲಹೆಗಾರರಾಗಿ ದೇವಸ್ಥಾನದ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡ೦ತಹ ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನದ ಅರ್ಚಕರು, ದೇವಸ್ಥಾನದ ಜೀರ್ಣೋದ್ಧಾರ ಹಾಗೂ ವರುಷದೊಳಗೆ ಬ್ರಹ್ಮಕಲಶೋತ್ಸವವನ್ನು ನೆರವೇರಿಸುವ ಬಗ್ಗೆ ವಿವರಣೆ ನೀಡಿದರು.

ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಮುನಿಯಾಲು ಉದಯ ಕುಮಾರ್ ಶೆಟ್ಟಿ, ಕಾರ್ಕಳ ನ್ಯಾಯವಾದಿ ಎಂ.ಕೆ ವಿಜಯಕುಮಾರ್ , ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಮಾಧವ್ ಭಟ್, ಸ್ಥಳೀಯ ಪುರಸಭಾ ಸದಸ್ಯರಾದ ಶ್ರೀಮತಿ ರೆಯಹಮತ್ ಕಾಬೆಟ್ಟು, ಸುಂದರ ಹೆಗ್ಡೆ ಎಳ್ನಾಡುಗುತ್ತು, ಶೀತಲ್ ಬಾರ್ ಮಾಲಕರಾದ ನವೀನ್‌ಚಂದ್ರ ಶೆಟ್ಟಿ ಕಾಬೆಟ್ಟು, MRPL ಮಂಗಳೂರು ಇಲ್ಲಿಯ ಅಧಿಕಾರಿ ಪ್ರದೀಪ್ ಕುಮಾರ್, ಸಂಕೇತ್ ಉಪಾಧ್ಯಾಯ, ಅನುವಂಶಿಕ ಮೊಕ್ತೇಸರರು, ಸಂದೇಶ್ ಉಪಾಧ್ಯಾಯ,ಶಾರೀರಿಕ ಶಿಕ್ಷಣ ಶಿಕ್ಷಕ ಸಂಜಯ್ ಕುಮಾರ್, ಸುಧೀರ್ ಶೆಟ್ಟಿಗಾರ್, ವೇಣುಗೋಪಾಲಕೃಷ್ಣ ದೇವಸ್ಥಾನ ಕಾಬೆಟ್ಟು ಉಪಸ್ಥಿತರಿದ್ದರು.



