ಹುಣಸೂರು: ರಾಜ್ಯಕ್ಕೆ ನಾಲ್ಕನೇ ರ‍್ಯಾಂಕ್ ಪಡೆದ ವಿದ್ಯಾರ್ಥಿನಿ ಕ್ಷಣ ಆರ್ ರವರಿಗೆ ಸತ್ಯ ಎಂ.ಎ.ಎಸ್ ಫೌಂಡೇಶನ್ ವತಿಯಿಂದ ಅಭಿನಂದನೆ ಸಲ್ಲಿಸಲಾಯಿತು.

ಹುಣಸೂರು ತಾಲ್ಲೂಕಿನ ಹರವೆ ಸರ್ಕಾರಿ ಪ್ರೌಢಶಾಲೆಯಲ್ಲಿ ಸಹ ಶಿಕ್ಷಕರಾಗಿರುವ ರಾಕೇಶ್. ಬಿ.ಪಿ ಹಾಗೂ ರತ್ನಪುರಿ ಕಸ್ತೂರಬಾ ಬಾಲಿಕ ವಿದ್ಯಾಲಯ ರತ್ನಪುರಿಯಲ್ಲಿ ಸಹ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಹಿತೈಷಿಣಿ ಡಿ ರವರ ಸುಪುತ್ರಿ ಕ್ಷಣ ಆರ್ ಹುಣಸೂರು ನಗರದ ರೋಟರಿ ವಿದ್ಯಾಸಂಸ್ಥೆಯ ವಿದ್ಯಾರ್ಥಿನಿಯಾಗಿದ್ದು, ಈ ಬಾರಿಯ ಎಸ್. ಎಸ್ ಎಲ್.ಸಿ ಫಲಿತಾಂಶದಲ್ಲಿ ರಾಜ್ಯಕ್ಕೆ 4ನೇ ರ್‍ಯಾಂಕ್ ತಾಲ್ಲೂಕಿಗೆ ಪ್ರಥಮ ರ‍್ಯಾಂಕ್ ಪಡೆದಿರುವ ಈ ಪ್ರತಿಭಾವಂತ ವಿದ್ಯಾರ್ಥಿನಿಯನ್ನು ರತ್ನಪುರಿಯಲ್ಲಿರುವ ಅವರ ಮನೆಗೆ ತೆರಳಿ ಸನ್ಮಾನಿಸಲಾಯಿತು.
ವಿದ್ಯಾರ್ಥಿನಿಯ ಮುಂದಿನ ಭವಿಷ್ಯ ಉಜ್ವಲವಾಗಿರಲಿ, ಎಲ್ಲಾ ಕ್ಷೇತ್ರಗಳನ್ನು ಉತ್ತಮ ಸಾಧನೆ ಮಾಡಲಿ ಎಂದು ಸತ್ಯಪ್ಪರವರು ಶುಭ ಹಾರೈಸಿದರು.
ಕ್ಷಣ ಆರ್ ಕನ್ನಡದಲ್ಲಿ 123, ಇಂಗ್ಲಿಷ್ ನಲ್ಲಿ 99, ಹಿಂದಿ 100, ಗಣಿತ 100, ವಿಜ್ಞಾನ 100, ಸಮಾಜ ವಿಜ್ಞಾನ 100 ಒಟ್ಟು 625ಕ್ಕೆ 622 ಅಂಕಗಳನ್ನು ಪಡೆದು ತಾಲೂಕಿಗೆ ಕೀರ್ತಿ ತಂದಿರುತ್ತಾರೆ.



