ಜನ ಮನದ ನಾಡಿ ಮಿಡಿತ

Advertisement

ಸುಹಾಸ್ ಶೆಟ್ಟಿ ಹತ್ಯೆ ; ಪೊಲೀಸರ ನೇರ ಕೈವಾಡ – ಶಾಸಕ ಕೋಟ್ಯಾನ್ ಆರೋಪ

ಮಂಗಳೂರು: ಹಿಂದು ಸಂಘಟನೆ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದಲ್ಲಿ ಪೊಲೀಸರ ನೇರ ಕೈವಾಡವಿದೆ. ಮಂಗಳೂರು ನಗರ ಪೊಲೀಸ್ ಆಯುಕ್ತರ ಜತೆಗೆ ಬಜ್ಪೆ ಪೊಲೀಸ್ ಠಾಣೆಯ ಪೊಲೀಸರ ಸಹಕಾರದಿಂದ ಈ ಹತ್ಯೆ ನಡೆಸಲಾಗಿದೆ ಎಂದು ಗಂಭೀರ ಆರೋಪ ಮಾಡಿರುವ ಶಾಸಕ ಉಮಾನಾಥ ಕೋಟ್ಯಾನ್, ಸಮಗ್ರ ತನಿಖೆಗಾಗಿ ಪ್ರಕರಣವನ್ನು ಎನ್‌ಐಎಗೆ ವಹಿಸಬೇಕು ಎಂದು ಆಗ್ರಹಿಸಿದ್ದಾರೆ.

ಸುಹಾಸ್ ಹತ್ಯೆ ನಡೆದ ಸ್ಥಳದಲ್ಲಿ ೨೫ ಮಂದಿ ಇದ್ದು, ಆರೋಪಿಗಳಿಗೆ ರಕ್ಷಣೆ ನೀಡಿದ್ದಾರೆ. ಸುತ್ತಲೂ ಕೋಟೆ ನಿರ್ಮಾಣ ಮಾಡಿ ಸುಹಾಸ್ ಹತ್ಯೆ ನಡೆಸಲು ಬಿಟ್ಟಿದ್ದಾರೆ. ಸ್ಥಳೀಯರ ಸಹಕಾರದೊಂದಿಗೆ ಈ ಹತ್ಯೆ ನಡೆದಿದೆ. ಬುರ್ಖಾಧಾರಿ ಮಹಿಳೆಯರೂ ಆರೋಪಿಗಳನ್ನು ಪಾರು ಮಾಡಿದ್ದಾರೆ. ಹತ್ಯೆಗೂ ಮುನ್ನವೇ ಪೊಲೀಸರು ಹಾಗೂ ಆರೋಪಿಗಳ ನಡುವೆ ಒಡಂಬಡಿಕೆ ಆಗಿತ್ತು. ಆದ್ದರಿಂದಲೇ ಸ್ಥಳಕ್ಕೆ ಪೊಲೀಸರು ಆಗಮಿಸಿದ್ದರೂ, ರಕ್ತದ ಮಡುವಿನಲ್ಲಿ ಬಿದ್ದಿದ್ದ ಸುಹಾಸ್ ಶೆಟ್ಟಿ ಅವರ ರಕ್ಷಣೆಗೆ ಮುಂದಾಗಿಲ್ಲ. ಒಡಂಬಡಿಕೆಯ ಭಾಗವಾಗಿ ಪೊಲೀಸರು ನಡೆದುಕೊಂಡಿದ್ದಾರೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು ಆರೋಪಿಸಿದರು.
ಜಿಲ್ಲೆಗೆ ಆಗಮಿಸಿದ ಗೃಹ ಸಚಿವರು, ಉಸ್ತುವಾರಿ ಸಚಿವರು ಸ್ಥಳೀಯ ಶಾಸಕರನ್ನು ಸಭೆಗೆ ಆಹ್ವಾನಿಸಿಲ್ಲ. ಆದರೆ, ಮುಸ್ಲಿಂ ಮುಖಂಡರ ಜತೆ ಸಭೆ ನಡೆಸಿದ್ದಾರೆ. ಹತ್ಯೆಯಾದ ಸುಹಾಸ್ ಶೆಟ್ಟಿ ಮನೆಗೂ ತೆರಳಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಜ್ಪೆಯಲ್ಲಿ ಹಿಂದುವಿನ ಕೊಲೆ ಆಗಿದೆ. ಆದರೆ, ಪೊಲೀಸರು ರಾತ್ರಿ ವೇಳೆ ಮಹಿಳೆಯರು ಇರುವ ಹಿಂದುಗಳ ಮನೆ ಮೇಲೆಯೇ ದಾಳಿ ನಡೆಸಿ ಬೆದರಿಸುತ್ತಿದ್ದಾರೆ. ಮೂಡುಶೆಡ್ಡೆಯಲ್ಲಿ ಪ್ರದೀಪ್ ಎಂಬವರ ಮನೆಗೆ , ಕಳವಾರಿನ ಮನೆಯೊಂದಕ್ಕೆ ರಾತ್ರಿ ಪೊಲೀಸರು ತೆರಳಿದ್ದಾರೆ. ಯಾವ ಮುಸಲ್ಮಾನರ ಮನೆಗೂ ಪೊಲೀಸರು ರಾತ್ರಿ ಹೋಗಿಲ್ಲ ಎಂದರು.
ಹಿಂದು ಕಾರ್ಯಕರ್ತ ಸುಹಾಸ್ ಶೆಟ್ಟಿ ರೌಡಿಶೀಟರ್ ಎಂದು ಆರೋಪಿಸಲಾಗುತ್ತಿದೆ. ಒಂದು ಪ್ರಕರಣವಿದ್ದರೂ ಪೊಲೀಸರು ರೌಡಿಶೀಟರ್ ಹಾಕುತ್ತಾರೆ. ಹಾಗಿದ್ದಲ್ಲಿ ರೌಡಿಶೀಟರ್‌ನನ್ನು ಕೊಲ್ಲಲು ಪೊಲೀಸರು ರೌಡಿಗಳನ್ನು ಕಳುಹಿಸಬಹುದೇ ಎಂದು ಪ್ರಶ್ನಿಸಿದರು.

ಸ್ಪೀಕರ್ ಸ್ಥಾನದಲ್ಲಿದ್ದವರು ರಾಜಕೀಯ ಮಾಡಬಾರದು. ಆದರೆ, ಯು.ಟಿ. ಖಾದರ್ ಅವರು ಸದಾ ಸುದ್ದಿಗೋಷ್ಠಿ ನಡೆಸುತ್ತಿರುತ್ತಾರೆ. -ಝಿಲ್ ಕುಟುಂಬದ ಪರವಾಗಿ ಮಾತನಾಡಿದ ಖಾದರ್, -ಝಿಲ್ ಸಹೋದರ ಆರೋಪಿಯಾದ ಬಳಿಕ ಏನು ಹೇಳುತ್ತಾರೆ? ಎಂದರು.ಶಾಸಕ ಹರೀಶ್ ಪೂಂಜ ಅವರ ಶಾಸಕ ಸ್ಥಾನ ಅನರ್ಹತೆಗೆ ಕಾಂಗ್ರೆಸ್ ಪ್ರಯತ್ನಿಸುತ್ತಿದೆ. ಅವರ ಮೇಲೆ ವಿನಾಕಾರಣ ಪ್ರಕರಣ ದಾಖಲಿಸಲಾಗುತ್ತಿದೆ. ಪೂಂಜ ಅವರನ್ನು ಅನರ್ಹಗೊಳಿಸಿ ನೋಡಲಿ ಎಂದರು.

ಬಜ್ಪೆ ಬಳಿಯ -ಪ್ಲ್ಯಾಟ್‌ವೊಂದರಲ್ಲಿ ಹತ್ಯೆ ಪ್ರಕರಣದ ಆರೋಪಿಗಳು ವಾಸಿಸುತ್ತಿದ್ದಾರೆ. ಪ್ರಶಾಂತ್, ಸುಖಾನಂದ ಶೆಟ್ಟಿ ಹತ್ಯೆ ಆರೋಪಿಗಳು ಇದೇ -ಟ್‌ನಲ್ಲಿ ಇದ್ದರು. ಸುಹಾಸ್ ಕೊಲೆ ಆರೋಪಿಗಳು ಕೊಲೆಗೂ ಮುನ್ನ ವ್ಯವಸ್ಥಿತ ಯೋಜನೆ ರೂಪಿಸಿ ಇದೇ -ಟ್‌ನಿಂದ ತೆರಳಿದ್ದಾರೆ. ಪೊಲೀಸರು ಇದುವರೆಗೆ ಈ -ಟ್‌ಗೆ ತೆರಳಿ ಪರಿಶೀಲನೆ ನಡೆಸಿಲ್ಲ ಎಂದು ಆರೋಪಿಸಿದ ಅವರು, ಮಂಗಳೂರು ನಗರ ಪೊಲೀಸ್ ಆಯುಕ್ತರಂತಹ ಅಽಕಾರಿಯನ್ನು ನಾನು ಇದುವರೆಗೆ ನೋಡಿಲ್ಲ. ಎಲ್ಲದರಲ್ಲೂ ಅವರು ಡೀಲಿಂಗ್ ನಡೆಸುತ್ತಿದ್ದಾರೆ. ಮರಳುಗಾರಿಕೆ, ಇಸ್ಪೀಟ್, ಸಿಂಗಲ್ ನಂಬರ್ ಗೇಮ್ ಅವ್ಯಾಹತವಾಗಿ ನಡೆಯುತ್ತಿದೆ. ಕಮಿಷನರ್‌ಗೆ ಹಣ ನೀಡಬೇಕು ಎಂದು ಸಾಮಾನ್ಯ ಪೇದೆಯೂ ಹೇಳುತ್ತಿದ್ದಾರೆ ಎಂದರು.

ಸುಹಾಸ್ ಶೆಟ್ಟಿ ಅವರು ಆತ್ಮರಕ್ಷಣೆಗಾಗಿ ತನ್ನ ವಾಹನದಲ್ಲಿ ಇರಿಸಿಕೊಂಡಿದ್ದ ಆಯುಧಗಳನ್ನು ಪೊಲೀಸರು ಒತ್ತಾಯಪೂರ್ವಕವಾಗಿ ತೆಗೆಸಿದ್ದರು. ಪೊಲೀಸರ ಸಹಕಾರದಿಂದಲೇ ಈ ಕೊಲೆ ಆಗಿದೆ. ಆರೋಪಿಗಳನ್ನು ಪೊಲೀಸರು ಹಿಡಿದಿಲ್ಲ. ಒಡಂಬಡಿಕೆಯ ಭಾಗವಾಗಿ ಆರೋಪಿಗಳು ಪೊಲೀಸರಿಗೆ ಶರಣಾಗಿದ್ದಾರೆ. ಬಂಧನವಾದ ಬಳಿಕ ಪೊಲೀಸರು ಆರೋಪಿಗಳ ಮೈಮುಟ್ಟಿಲ್ಲ. ಸುಹಾಸ್ ಹತ್ಯೆಗೆ -ಝಿಲ್ ಸಹೋದರ ಐದು ಲಕ್ಷ ರೂ. ನೀಡಿದ್ದ ಎಂದು ಹೇಳಲಾಗಿದೆ. ಆದರೆ, ದುಬೈನಿಂದ ೫೦ ಲಕ್ಷ ರೂ. ಹಣ ನೀಡಲಾಗಿದೆ ಎಂದು ಉಮಾನಾಥ ಕೋಟ್ಯಾನ್ ಆಪಾದಿಸಿದರು.

ಬಜ್ಪೆ, ಸುರತ್ಕಲ್, ಪಣಂಬೂರು ಪೊಲೀಸ್ ಠಾಣೆಯ ಕೆಲ ಪೊಲೀಸರ ಮೊಬೈಲ್ ಕರೆಗಳನ್ನು ಪರಿಶೀಲಿಸಿದರೆ ಈ ಕೊಲೆಗೆ ಪೊಲೀಸರ ಸಹಕಾರ ಹಾಗೂ ಕೊಲೆ ಹಿಂದೆ ಯಾರಿದ್ದಾರೆ ಎಂಬುದು ಬಹಿರಂಗವಾಗಲಿದೆ ಎಂದು ಹೇಳಿದರು.ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು, ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ಜಯಂತ್ ಕೋಟ್ಯಾನ್, ಶಾಂತಿಪ್ರಸಾದ್ ಹೆಗ್ಡೆ, ಮುಖಂಡರಾದ ಈಶ್ವರ ಕಟೀಲ್, ದಿನೇಶ್, ರಂಜಿತ್, ರಾಜೇಶ್, ವಿಜಯ್, ಅರುಣ್ ಶೇಟ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

ಮಂಗಳೂರು: ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ’ ಕೃತಿ ಬಿಡುಗಡೆ..!

ಬಂಟ್ವಾಳ: ಜೋರಾದ ಮಳೆಗೆ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದಲ್ಲಿ ಮನೆಯೊಂದಕ್ಕೆ ಹಾನಿ..!

ಉಡುಪಿ: ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿ ಮೋಸ ಮಾಡಿದ ಮಹಿಳೆ..!

ದುಬೈ: ಅಕ್ಟೋಬರ್ 25 ರಂದು ದುಬೈನಲ್ಲಿ ದುಬೈ ಗಡಿನಾಡ ಉತ್ಸವ

ಮಂಗಳೂರು: ಅಶೋಕ ಜನಮನ ಕಾರ್ಯಕ್ರಮ ಆಯೋಜನೆ; ನೂಕು ನುಗ್ಗಲು ಉಂಟಾಗಿ ಅಸ್ವಸ್ಥರಾದ 11ಕ್ಕೂ ಹೆಚ್ಚು ಜನ…!

ಬಂಟ್ವಾಳ: ದ.ಕ.ಜಿಲ್ಲಾ ತುಳು ನಾಟಕ ಕಲಾವಿದರ ಒಕ್ಕೂಟ ವಾರ್ಷಿಕ ಮಹಾಸಭೆ; ನೂತನ ಅಧ್ಯಕ್ಷರಾಗಿ ಕಿಶೋರ್ ಡಿ.ಶೆಟ್ಟಿ ಪುನರಾಯ್ಕೆ….!

ಬಂಟ್ವಾಳ: ಮೊಡಂಕಾಪು ಆಯ್ಯಪ್ಪ ಮಂದಿರದಲ್ಲಿ ನಡೆದ ಸಭೆಯಲ್ಲಿ ಮೂರನೇ ಅವಧಿಯ ಅಧ್ಯಕ್ಷರಾಗಿ ಆಯ್ಕೆಯಾದ ಸುನಿಲ್ ಎನ್

ಬಂಟ್ವಾಳ: ಸುರಿದ ಮಳೆಗೆ ಅವರಣಗೋಡೆ ಕುಸಿದು ಬಿದ್ದು ಹಾನಿ…!

ಪುತ್ತೂರಿನ ಪ್ರಕರಣ, ಕಾರ್ಕಳದ ಅಭಿಷೇಕ್ ಆತ್ಮಹತ್ಯೆಗೆ ಸಂಬಂಧಿಸಿ ಗ್ರಹಸಚಿವರಿಗೆ ಐವನ್ ಡಿಸೋಜಾ ಅವರಿಂದ ಮನವಿ

error: Content is protected !!