ಹುಣಸೂರು: ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಹಾಗೂ ಭಗೀರಥ ಸಂಸ್ಥೆಯ ಸಹಯೋಗದೊಂದಿಗೆ ಜಲಜೀವನ್ ಮಿಷನ್ ಯೋಜನೆ ಅಡಿಯಲ್ಲಿ ಹುಣಸೂರು ತಾಲೂಕಿನ ಉಯ್ಯಿಗೊಂಡನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಡಿನೀರು ಮುದ್ದನಹಳ್ಳಿ ಗ್ರಾಮದಲ್ಲಿರುವ ಪಟ್ಟಲದಮ್ಮನ ದೇವಸ್ಥಾನದ ಕಲ್ಯಾಣಿಯನ್ನು ಪುನಶ್ಚೇತನ ಮಾಡಲು ಶ್ರಮದಾನದ ಮೂಲಕ ನೆರವೇರಿಸಲಾಯಿತು.

ಈ ಸಂದರ್ಭದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ತೇಜೇಂದ್ರನಾಥ ವರಪ್ರಸಾದ ರವರು ಕಲ್ಯಾಣಿ ಸಾಕಷ್ಟು ವರ್ಷಗಳಿಂದ ಜನರಿಗೆ ಉಪಯೋಗವಾಗುತ್ತಿದ್ದು ಮತ್ತಷ್ಟು ಜನರಿಗೆ ಅನುಕೂಲವಾಗುವಂತೆ ಭಗಿರಥ ಸಂಸ್ಥೆಯು ಪುನಶ್ಚೇತನ ಮಾಡಿಕೊಡುತ್ತಿರುವುದು ತುಂಬಾ ಬಹಳ ಸಂತೋಷವಾದ ವಿಚಾರ ಎಂದು ತಿಳಿಸಿದರು ಹಾಗೂ ಜಿಲ್ಲಾ ತಂಡದ ನಾಯಕರಾದ ಮಹೇಶ್ ರವರು ಜಲಮೂಲಗಳು ಕುಂಠಿತಗೊಳ್ಳುತ್ತಿದ್ದು ಮತ್ತಷ್ಟು ಅಭಿವೃದ್ಧಿಪಡಿಸುವ ಸಲುವಾಗಿ ಈ ಕಲ್ಯಾಣಿಯನ್ನು ಪುನಶ್ಚೇತನ ಮಾಡುತ್ತಿರುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾದ ತೇಜೇಂದ್ರ ವರಪ್ರಸಾದ್, ಪಂಚಾಯಿತಿಯ ಅಧ್ಯಕ್ಷರಾದ ದೇವರಾಜು, ಸದಸ್ಯರಾದ ರಾಧಾ ಮಂಜುಳಾ, ಆಯುಬ್ ಪಾಷಾ, ವ ಕ್ಬಾಲ್ ಪಾಷಾ, ಜಿಲ್ಲಾ ತಂಡದ ನಾಯಕರಾದ ಮಹೇಶ್, ತಾಲೂಕು ಸಂಯೋಜಕರಾದ ಆನಂದ್ ಪ್ರಕಾಶ್ ಹಾಗೂ ಗ್ರಾಮ ಪಂಚಾಯಿತಿಯ ನೌಕರರು ಹಾಗೂ ನೀರು ಗಂಟೆಗಳು ಮಹಿಳಾ ಸಂಘದ ಸದಸ್ಯರುಗಳು ಭಾಗವಹಿಸಿದ್ದರು.



