ರೌಡಿಶೀಟರ್ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ತನಿಖೆಯನ್ನು ಕೈಗೆತ್ತಿಕೊಂಡಿದ್ದು, ಇದೀಗ ಕೊಲೆ ಆರೋಪಿಗಳನ್ನು ಸ್ಥಳ ಮಹಜರಿಗಾಗಿ ಬಜ್ಪೆಯ ಕಿನ್ನಿಪದವಿನ ಘಟನಾ ಸ್ಥಳಕ್ಕೆ ಕರೆ ತರಲಾಯಿತು.

8 ಮಂದಿ ಆರೋಪಿಗಳನ್ನು ವಾಹನದಲ್ಲಿ ಬಿಗಿ ಪೊಲೀಸ್ ಬಂದೋಬಸ್ತಿನೊಂದಿಗೆ ಕರೆದುಕೊಂಡು ಬಂದು ಕೊಲೆ ಕೃತ್ಯ ನಡೆದ ದಿನದ ಘಟನಾವಳಿಗಳನ್ನು ಮರುಸೃಷ್ಟಿ ಮಾಡಿ ಮಾಹಿತಿಗಳನ್ನು ಪಡೆದುಕೊಂಡಿದ್ದಾರೆ.



