ಜನ ಮನದ ನಾಡಿ ಮಿಡಿತ

Advertisement

ಮಂಗಳೂರು : ರೋಹನ್‌ ಕಾರ್ಪೊರೇಷನ್ ಸಂಸ್ಥೆಯ ರಾಯಭಾರಿಯಾಗಿ ಬಾಲಿವುಡ್‌ ಬಾದ್‌ಶಾ ಶಾರುಖಾನ್

 ಕರ್ನಾಟಕದ ರಿಯಲ್ ಎಸ್ಟೇಟ್ ಕ್ಷೇತ್ರದ ದಿಗ್ಗಜ ಸಂಸ್ಥೆ, ಮಂಗಳೂರಿನ ಹೆಮ್ಮೆಯ ಸಂಸ್ಥೆ ರೋಹನ್‌ ಕಾರ್ಪೊರೇಷನ್ ಸಂಸ್ಥೆಯು ತನ್ನ ಬ್ರ್ಯಾಂಡ್ ಅಂಬಾಸಿಡರ್ ಆಗಿ ಬಾಲಿವುಡ್ ನ ಸೂಪರ್ ಸ್ಟಾರ್ ಬಾಲಿವುಡ್‌ ಬಾದ್‌ಶಾ ಶಾರುಖಾನ್ ಅವರನ್ನು ಘೋಷಿಸಿದೆ. ರೋಹನ್‌ ಕಾರ್ಪೊರೇಷನ್ ಸಂಸ್ಥೆಯ ರಾಯಭಾರಿಯಾಗಿ ಶಾರುಖಾನ್ ಅವರು ಸಹಿ ಮಾಡುವ ಮೂಲಕ ಹೊಸ ಮೈಲಿಗಲ್ಲಿಗೆ ಸಾಕ್ಷಿಯಾಗಿದೆ.

ಪ್ರತಿ ಬಾರಿಯೂ ಹೊಸತನದ ಮತ್ತು ಆಧುನಿಕತೆಯ ಶೈಲಿಯ ಕಟ್ಟಡದ ನಿರ್ಮಾತೃ ಆಗಿರುವ ರೋಹನ್ ಕಾರ್ಪೋರೇಷನ್ ಇದೀಗ ದೇಶದ ಸೂಪರ್ ಸ್ಟಾರ್ ಶಾರುಖಾನ್ ಅವರನ್ನು ರಾಯಭಾರಿಯನ್ನಾಗಿಸುವ ಮೂಲಕ ವಿಶೇಷತೆಗೆ ಕಾರಣವಾಗಿದೆ. ಮಂಗಳೂರಿನಲ್ಲಿ ಸ್ಥಾಪನೆಯಾದ  ಮತ್ತು ಕೇಂದ್ರ ಕಚೇರಿ ಹೊಂದಿರುವ ರೋಹನ್‌ ಕಾರ್ಪೊರೇಷನ್ ಸಂಸ್ಥೆಯು ವಿಶ್ವಾಸ ಮತ್ತು ತನ್ನ ಅತ್ಯುತ್ತಮ ಸೇವೆಗೆ ಹೆಸರುವಾಸಿಯಾಗಿದೆ.

ಕಳೆದ ಮೂರು ದಶಕಗಳಿಂದ ರೋಹನ್ ಸಿಟಿ ಮತ್ತು ರೋಹನ್ ಸ್ಕ್ವೇರ್‌ ನಂತಹ ಪ್ರಮುಖ ಡೆವಲಪ್‌ಮೆಂಟ್‌ಗಳೊಂದಿಗೆ, ಮಂಗಳೂರಿನ ಆಕಾಶದೆತ್ತರದ ಆಕರ್ಷಕ ಕಟ್ಟಡಗಳನ್ನು ನಿರ್ಮಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ.  ಶಾರುಖ್ ಖಾನ್ ಅವರು ರಾಯಭಾರಿಯಾಗಿ ನಮ್ಮ ಸಂಸ್ಥೆಗೆ ಒಪ್ಪಿಗೆ ನೀಡಿರುವುದು ಇದು ಕನಸು ಹಾಗೂ ಬದ್ಧತೆಯ ಸಮ್ಮಿಲನವಾಗಿದೆ. ಶಾರುಖ್ ಖಾನ್ ಅವರು ನಮ್ಮ ಜೊತೆ ಕೈಜೋಡಿಸಿರುವುದ್ದರಿಂದ ಕರ್ನಾಟಕ ಹಾಗೂ ದೇಶಾದ್ಯಂತ ನಮ್ಮ ಸಂಸ್ಥೆ ವಿಸ್ತರಿಸಲು ನಾವು ಬದ್ದರಾಗಿದ್ದೇವೆ ಎಂದು ರೋಹನ್ ಕಾರ್ಪೋರೇಷನ್ ಚೇರ್ ಮ್ಯಾನ್ ರೋಹನ್ ಮೊಂತೇರೊ ತಿಳಿಸಿದ್ದಾರೆ.

ಶಾರುಖ್‌ಖಾನ್ ಮಾತನಾಡಿ, ಪರಿಶ್ರಮ, ನಾವೀನ್ಯತೆ ಮತ್ತು ಹೃದಯಮುಟ್ಟುವ ಬ್ರ್ಯಾಂಡ್ ಆಗಿರುವ ರೋಹನ್‌ ಕಾರ್ಪೊರೇಷನ್‌ನೊಂದಿಗೆ ಕೈಜೋಡಿಸುತ್ತಿರುವುದು ನಿಜಕ್ಕೂ ಸಂತೋಷದ ವಿಷಯ. ವಿಶಾಲ ದೃಷ್ಟಿಕೋನದೊಂದಿಗೆ ನಾಳಿನ ನಗರಗಳನ್ನು ರೂಪಿಸುವ ಅದ್ಭುತ ಪ್ರಯಾಣದ ಭಾಗವಾಗಿರಲು ನಾನು ಎದುರು ನೋಡುತ್ತಿದ್ದೇನೆ. ಪ್ರಕೃತಿಯೊಂದಿಗೆ ನಗರ ಜೀವನವನ್ನು ಸಾಮರಸ್ಯಗೊಳಿಸುವ ದೃಢವಾದ ದೃಷ್ಟಿಕೋನದ ಬೇರನ್ನು ಹೊಂದಿರುವ ರೋಹನ್‌ಕಾರ್ಪೊರೇಷನ್ ಪರಿಸರವನ್ನು ಸಂರಕ್ಷಿಸುವುದರೊಂದಿಗೆ ಜೀವನದ ಗುಣಮಟ್ಟವನ್ನು ವಿಸ್ತರಿಸುವ ಉತ್ಸಾಹಭರಿತ ಸಮುದಾಯಗಳನ್ನು ಪೋಷಿಸಲು ಶ್ರಮಿಸುತ್ತಿದೆ ಎಂದು ಹೇಳಿದರು.

ಸಮಗ್ರತೆ, ಅತ್ಯುತ್ತಮತೆ, ನಾವೀನ್ಯತೆ, ಹಾಗೂ ಸುಸ್ಥಿರತೆಯ ಪ್ರಮುಖ ಮೌಲ್ಯಗಳೊಂದಿಗೆ, ಶಾರುಖ್‌ಖಾನ್‌ರೊಂದಿಗೆ ರೋಹನ್‌ ಕಾರ್ಪೊರೇಷನ್‌ರವರ ಪಾಲುದಾರಿಕೆ ಹೊಸ ಕ್ರಿಯಾತ್ಮಕ ಬೆಳವಣಿಗೆ, ವ್ಯಾಪಕ ತೊಡಗುವಿಕೆ ಮತ್ತು ದೃಢವಾದ ಬ್ರ್ಯಾಂಡ್ ಅಸ್ತಿತ್ವದ ನವಯುಗವನ್ನು ಸಂಕೇತಿಸುತ್ತಿದ್ದು , ಇದು ಕರ್ನಾಟಕದಾದ್ಯಂತ ನಿವಾಸದ ಬಗೆಗಿನ ಕನಸುಗಾರರ ಹೊಸ ತಲೆಮಾರು ಮತ್ತು ಮನೆ ಮಾಲೀಕರಿಗೆ ಸ್ಫೂರ್ತಿಯಾಗಿದೆ.

Leave a Reply

Your email address will not be published. Required fields are marked *

ಮಂಗಳೂರು: ಆಟವಾಡುತ್ತಾ 15 ಅಡಿ ಆಳದ ನೀರಿದ್ದ ಬಾವಿಗೆ ಬಿದ್ದ ಹೆಣ್ಣು ಮಗು….!

ಮಂಗಳೂರು: ಕಲ್ಲಡ್ಕ ಪ್ರಭಾಕರ್ ಭಟ್ ಅವರ ಭಾಷಣದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ..!

ಬಂಟ್ವಾಳ: ಶ್ರೀರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ “ಶ್ರೀರಾಮನ ಚರಿತ್ರೆಯ” ಯಕ್ಷಗಾನ….!

ಮಂಗಳೂರು: ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ’ ಕೃತಿ ಬಿಡುಗಡೆ..!

ಬಂಟ್ವಾಳ: ಜೋರಾದ ಮಳೆಗೆ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದಲ್ಲಿ ಮನೆಯೊಂದಕ್ಕೆ ಹಾನಿ..!

ಉಡುಪಿ: ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿ ಮೋಸ ಮಾಡಿದ ಮಹಿಳೆ..!

ದುಬೈ: ಅಕ್ಟೋಬರ್ 25 ರಂದು ದುಬೈನಲ್ಲಿ ದುಬೈ ಗಡಿನಾಡ ಉತ್ಸವ

ಮಂಗಳೂರು: ಅಶೋಕ ಜನಮನ ಕಾರ್ಯಕ್ರಮ ಆಯೋಜನೆ; ನೂಕು ನುಗ್ಗಲು ಉಂಟಾಗಿ ಅಸ್ವಸ್ಥರಾದ 11ಕ್ಕೂ ಹೆಚ್ಚು ಜನ…!

ಬಂಟ್ವಾಳ: ದ.ಕ.ಜಿಲ್ಲಾ ತುಳು ನಾಟಕ ಕಲಾವಿದರ ಒಕ್ಕೂಟ ವಾರ್ಷಿಕ ಮಹಾಸಭೆ; ನೂತನ ಅಧ್ಯಕ್ಷರಾಗಿ ಕಿಶೋರ್ ಡಿ.ಶೆಟ್ಟಿ ಪುನರಾಯ್ಕೆ….!

error: Content is protected !!