ದಕ್ಷಿಣಕನ್ನಡ: ಉಗ್ರರ ನೆಲೆಗೆ ನುಗ್ಗಿ ಉಗ್ರರ ಹುಟ್ಟಡಗಿಸಿದ ಭಾರತೀಯ ಸೇನೆಗೆ ಮತ್ತಷ್ಟು ಸ್ತೈರ್ಯ ತುಂಬಲು ಪುತ್ತೂರಿನ ಜನ ಮಹಾಲಿಂಗೇಶ್ವರ ದೇವರ ಮೊರೆ ಹೋಗಿದ್ದಾರೆ.

ಭಾರತೀಯ ಸೇನೆ ನಿನ್ನೆ ತಡರಾತ್ರಿ ಈ ಕಾರ್ಯಾಚರಣೆ ನಡೆಸಿ ಹಲವಾರು ಉಗ್ರ ತಾಣಗಳನ್ನು ದ್ವಂಸ ಮಾಡಿದೆ. ಈ ದಾಳಿಯನ್ನು ಸಮರ್ಥಿಸಿ ಪುತ್ತೂರಿನ ಮಹತೋಭಾರ ಮಹಾಲಿಂಗೇಶ್ವರ ದೇವಸ್ಥಾನ ಸಂರಕ್ಷಣಾ ಸಮಿತಿ ವತಿಯಿಂದ ಹತ್ತೂರ ಒಡೆಯನ ಮುಂದೆ ಪ್ರಾರ್ಥನೆ ಸಲ್ಲಿಸಿ ಕೇಂದ್ರ ಸರಕಾರ ಮತ್ತು ಭಾರತೀಯ ಸೇನೆಗೆ ಶಕ್ತಿ ತುಂಬುವಂತೆ ಪ್ರಾರ್ಥಿಸಲಾಗಿದೆ. ಕಾಶ್ಮೀರದ ಪೆಹಲ್ಗಾಮ್ ನಲ್ಲಿ ಉಗ್ರರು ನಡೆಸಿದ್ದ ನರಮೇಧಕ್ಕೆ ಭಾರತೀಯ ಸೇನೆ ಸೂಕ್ತ ಉತ್ತರವನ್ನು ನೀಡಿದೆ. ಮಹಿಳೆಯರ ಮುಂದೆಯೇ ಅವರ ಮನೆಯವರನ್ನು ತಲೆಗೆ ಗುಂಡು ಹೊಡೆದು ಅಮಾನುಷವಾಗಿ ಕೊಂದಿದ್ದ ಉಗ್ರರಿಗೆ ಸೂಕ್ತ ಉತ್ತರವನ್ನು ನೀಡಲಾಗಿದ್ದು, ಇಂಥಹ ಕಾರ್ಯಾಚರಣೆಗಳು ಇನ್ನಷ್ಟು ನಡೆಯಬೇಕೆಂದು ದೇವರಲ್ಲಿ ಪ್ರಾರ್ಥಿಸಲಾಗಿದೆ.
ಇದೇ ಸಂದರ್ಭದಲ್ಲಿ ಮಹಾಲಿಂಗೇಶ್ವರ ದೇವಸ್ಥಾನದ ಭಕ್ತರು ಕೇಂದ್ರ ಸರಕಾರ, ಪ್ರಧಾನಿ ನರೇಂದ್ರ ಮೋದಿ ಹಾಗು ಭಾರತೀಯ ಸೇನೆಯನ್ನೂ ಅಭಿನಂಧಿಸಿದ್ದು, ಮಹಿಳೆಯರ ಸಿಂಧೂರ ಅಳಿಸಿದ ಜಿಹಾದಿ ಉಗ್ರರಿಗೆ ಉತ್ತರ ನೀಡಲಾಗಿದೆ. ಸೇನೆಯ ಪರವಾಗಿ ದೇಶದ ಎಲ್ಲಾ ಮಸೀದಿ, ಚರ್ಚ್, ಮಠ-ಮಂದಿರ, ಗುರದ್ವಾರಗಳನ್ನು ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಬೇಕೆನ್ನುವ ಒತ್ತಾಯವೂ ಪುತ್ತೂರಿನಿಂದ ಆರಂಭಗೊಂಡಿದೆ. ಪುತ್ತೂರಿನ ಮಹತೋಭಾರ ಮಹಾಲಿಂಗೇಶ್ವರ ದೇವರು ಅತ್ಯಂತ ಪ್ರಭಾವಿಶಾಲಿ ದೇವರ ಜೊತೆಗೆ ಅತ್ಯಂತ ಪುರಾತನ ದೇವಾಲಯವೂ ಆಗಿದ್ದು, ಇಲ್ಲಿ ಪ್ರಾರ್ಥಿಸಿದ ವಿಚಾರಗಳಲ್ಲಿ ಜಯ ಸಿಗುತ್ತದೆ ಎನ್ನುವ ನಂಬಿಕೆಯೂ ಈ ಭಾಗದಲ್ಲಿದೆ.



