ಕರಾವಳಿ

ಯುವ ಬಂಟರ ಸಂಘ ಪುತ್ತೂರು ತಾಲೂಕು ಸಮಿತಿ ಆಶ್ರಯದಲ್ಲಿ ಬಂಟರ ದಿನಾಚರಣೆ ಪ್ರಯುಕ್ತ ಜುಲೈ 23 ರಂದು ತುಳುನಾಡ ಬಂಟೆರೆ ಪರ್ಬ 2023

ಯುವ ಬಂಟರ ಸಂಘ ಪುತ್ತೂರು ತಾಲೂಕು ಸಮಿತಿದ ಆಶ್ರಯದಲ್ಲಿ ಬಂಟ ದಿನಾಚರಣೆ ಪ್ರಯುಕ್ತ ಜುಲೈ 23 ರಂದು ತುಳುನಾಡ ಬಂಟೆರೆ ಪರ್ಬ 2023 ಎನ್ನುವ ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮ ನಡೆಯಲಿದೆ. ಇದರಲ್ಲಿ ದಕ್ಷಿಣ ಕನ್ನಡ, ಕಾಸರಗೋಡು ಮತ್ತು ಉಡುಪಿ ಜಿಲ್ಲೆಯ ಆಯ್ದ 8 ತಂಡಗಳು ಭಾಗವಹಿಸುತ್ತದೆ. ಇದರಲ್ಲಿ ತುಳುನಾಡು ಮತ್ತು ಬಂಟ ಸಂಸ್ಕೃತಿಯ ಪ್ರದರ್ಶನಕ್ಕೆ ಮಾತ್ರ ಅವಕಾಶ ಮಾಡಿಕೊಡಲಾಗಿದೆ.

ಕಳೆದ ವರ್ಷ ನನ್ನ ಅವಧಿಯಲ್ಲಿ ಒಂದು ಹೊಸ ಕಾರ್ಯಕ್ರಮ ಪ್ರಾರಂಭಿಸಿದ್ದೇವೆ. ಹಿರಿಯ ಬಂಟ ಚೇತನಗಳ ಸ್ಮರಣೆ ಮಾಡುವ ಬಂಟ ಸ್ಮೃತಿ ಕಾರ್ಯಕ್ರಮ . ಕಳೆದ ವರ್ಷ 5 ಜನರ ಸ್ಮೃತಿ ಮಾಡಿದ್ದೇವೆ. ಈ ಬಾರಿ 3 ಕ್ಕೆ ಸೀಮಿತಗೊಳಿಸಿದ್ದೇವೆ. ಒಂದು ಗಾಂಧೀವಾದಿಯಾಗಿ ಪುತ್ತೂರಿನ ಅಭಿವೃದ್ಧಿಗೆ ಬಹಳಷ್ಟು ಕೊಡುಗೆ ನೀಡಿರುವ ನಿವೃತ್ತ ತಹಶಿಲ್ದಾರ್ ಚಿಲ್ಮೆತ್ತಾರ್ ಕೋಚಣ್ಣ ರೈ, ಎರಡನೆಯದ್ದು ಪುತ್ತೂರು ಮಹಾಲಿಂಗೇಶ್ವರ ದೇವರಿಗೆ ಬ್ರಹ್ಮ ರಥವನ್ನು ಸಮರ್ಪಿಸಿದ ಜಯಕರ್ನಾಟಕ ಸಂಸ್ಥಾಪಕ ಮುತ್ತಪ್ಪ ರೈ. ಮೂರನೆಯದ್ದು ಬೆಂಗಳೂರು ಬಂಟರ ಸಂಘದ ಅಧ್ಯಕ್ಷರಾಗಿ ಹಲವಾರು ಬಂಟರ ಅಭಿವೃದ್ಧಿ ಗೆ ಸಹಕಾರಿಯಾಗಿದ್ದ ಡಾ ಮುಂಡಾಳಗುತ್ತು ತಿಮ್ಮಪ್ಪ ರೈ ಇವರ ಕುಟುಂಬಸ್ಥರ ಘನ ಉಪಸ್ಥಿತಿಯಲ್ಲಿ ಸ್ಮೃತಿ ನಡೆಯಲಿದೆ.

ಈ ಕಾರ್ಯಕ್ರಮದಲ್ಲಿ ನಮ್ಮೂರಿನ ಹೆಮ್ಮೆಯ ಕರ್ನಾಟಕ ರಾಜ್ಯದ ಹೈಕೋರ್ಟ್ ನ್ಯಾಯಾಧೀಶರು ಸವಣೂರು ವಿಶ್ವಜೀತ್ ಶೆಟ್ಟಿಯವರು ಬಂದು ಸಮಾಜದ ಪರವಾಗಿ ಗೌರವ ಸ್ವೀಕರಿಸಲಿದ್ದಾರೆ.

ಕಾರ್ಯಕ್ರಮನ್ನು ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷರು ಅಜಿತ್ ರೈ ಮಾಲಾಡಿ ಉದ್ಘಾಟಿಸಲಿದ್ದಾರೆ. ಪುತ್ತೂರಿನ ಜನಪ್ರಿಯ ಶಾಸಕರು ಅಶೋಕ್ ಕುಮಾರ್ ರೈ, ಮುಂಬಯಿ ಹೇರಂಭಾ ಗ್ರೂಪ್ ನ ಆಡಳಿತ ನಿರ್ದೇಶಕ ಕನ್ಯಾನ ಸದಾಶಿವ ಶೆಟ್ಟಿ, ಇಂಟರ್ ನ್ಯಾಶನಲ್ ಸಿವಿಲ್ ಸರ್ವೆಂಟ್ ನಿತ್ಯಾನಂದ ಶೆಟ್ಟಿ, ಮುಂಬಯಿ ನಿವೃತ್ತ ಡೆಪ್ಯುಟಿ ಕಮೀಷನರ್ ಶಾರ್ಪ್ ಶೂಟರ್ ಖ್ಯಾತಿಯ ಪ್ರಕಾಶ್ ಭಂಡಾರಿ, ಕ್ಯಾಪ್ಟನ್ ಬ್ರಿಜೇಶ್ ಚೌಟ, ಮಂಗಳೂರು ಮಹಾನಗರ ಪಾಲಿಕೆಯ ಜಂಟೀ ಆಯುಕ್ತರು ವಾಣಿ ಎಸ್ ಆಳ್ವ, ಗುಣರಂಜನ್ ಶೆಟ್ಟಿ, ಪ್ರಕಾಶ್ ರೈ ದೇರ್ಲ, ಮಾಜಿ ಶಾಸಕಿ ಶಕುಂತಲಾ ಶೆಟ್ಟಿ, ಮಲ್ಲಿಕಾ ಪ್ರಸಾದ್ ಸಮಾರೋಪ ಸಮಾರಂಭದಲ್ಲಿ ಬಂಟರ ಯಾನೆ ನಾಡವರ ಮಾತೃ ಸಂಘದ ಉಪಾಧ್ಯಕ್ಷರು ಕಾವು ಹೇಮನಾಥ್ ಶೆಟ್ಟಿಯವರು ಮತ್ತು ಹೀಗೆ ಗಣ್ಯಾತಿ ಗಣ್ಯರು ನಮ್ಮೊಂದಿಗೆ ಕಾರ್ಯಕ್ರಮದಲ್ಲಿ ಜೊತೆಯಾಗಲಿದ್ದಾರೆ.

ಈ ಕಾರ್ಯಕ್ರಮವು ಒಂದು ಈವೆಂಟ್ ರೀತಿಯಲ್ಲಿ ನಡೆಯಲಿದೆ. ಸಭಾ ಕಾರ್ಯಕ್ರಮವು ಚಿಕ್ಕದಾಗಿ, ಚೊಕ್ಕದಾಗಿ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ.

ಖ್ಯಾತ ನಿರೂಪಕ ನಿತೇಶ್ ಶೆಟ್ಡಿ ಎಕ್ಕಾರ್ ಈ ಕಾರ್ಯಕ್ರಮದ ಮುಖ್ಯ ನಿರೂಪಕರಾಗಿ ಭಾಗವಹಿಸಲಿದ್ದಾರೆ.

ಈ ಕಾರ್ಯಕ್ರಮಗಳ ಮಧ್ಯೆ ನಮ್ಮನ್ನು ರಂಜಿಸಲು ನಮ್ಮೂರಿನ ಬಂಟ ತಾರೆಯರಾದ ವಿಜಯಕುಮಾರ್ ಕೋಡಿಯಾಲ್ ಬೈಲ್, ಸರ್ಕಸ್ ಚಿತ್ರದ ಹೀರೋ ರೂಪೇಶ್ ಶೆಟ್ಟಿ, ಹೀರೋಯಿನ್ ರಚನಾ ಶೆಟ್ಟಿ, ವಿಲನ್ ಯಶ್ ಶೆಟ್ಟಿ, ದೀಪಕ್ ರೈ ಪಾಣಾಜೆ, ಸುಂದರ್ ರೈ ಪಾಣಾಜೆ. ಚಲನ ಚಿತ್ರ ಹಾಡುಗಾರ ಸಂಗೀತ ನಿರ್ಧೇಶಕ ಅರ್ಜುನ್ ಜನ್ಯನ ಶಿಷ್ಯ ನಿಶಾನ್ ರೈ ಮಠಂತಬೆಟ್ಟು, ಸಂಗೀತ ನಿರ್ದೇಶಕ ಪ್ರಸಾದ್, ಕಬಡ್ಡಿ ಆಟಗಾರ ಪ್ರಶಾಂತ್ ರೈ ಸೇರಿದಂತೆ ಹಲವಾರು ಮಂದಿ ಸಾಧಕರು ನಮ್ಮೊಂದಿಗೆ ಸೇರಿಕೊಳ್ತಾರೆ.

ಕಳೆದ 10 ವರ್ಷಗಳಿಂದ ಬಂಟ ದಿನಾಚರಣೆ ಕಾರ್ಯಕ್ರಮ ನಡೆಸುತ್ತಾ ಬಂದಿದ್ದೇವೆ. ಬೆಳಿಗ್ಗೆ ಗಣಹೋಮ ಸತ್ಯನಾರಾಯಣ ಪೂಜೆ, ನಂತರ ಸಾಂಸ್ಕೃತಿಕ ಕಾರ್ಯಕ್ರಮ, ಸಭೆ. ಮಧ್ಯಾಹ್ನ ಮುಗೀತಿತ್ತು. ಈ ಬಾರಿ ಸ್ವಲ್ಪ ಬದಲಾವಣೆ ಮಾಡಿದ್ದೇವೆ ಜುಲೈ 22 ಶನಿವಾರ ಬೆಳಿಗ್ಗೆ ಗಣಹೋಮ ಮತ್ತು ಸತ್ಯನಾರಾಯಣ ಪೂಜೆ ನಡೀತದೆ. ಜುಲೈ 23 ರಂದು ಬೆಳಿಗ್ಗೆ 9 ರಿಂದ ಸಂಜೆ 5 ರವರೆಗೆ ಸಂಪೂರ್ಣ ಮನರಂಜನಾ ಕಾರ್ಯಕ್ರಮ‌ ನಡೀತದೆ.

ಕಾರ್ಯಕ್ರಮದ ಸ್ಥಳದಲ್ಲಿ…

ಜನ್ಮ ಫೌಂಡೇಶನ್ ನ ಆನೆ ಬಾಗಿಲು ದ್ವಾರ ನಮ್ಮನ್ನು ಸ್ವಾಗಿಸುತ್ತದೆ. ಮುಂದೆ ಬಂದಾಗ ಅಶೋಕ್ ಕುಮಾರ್ ರೈ ಯವರ ತೀರ್ಥರೂಪರಾದ ಪಿಜಿನಡ್ಕ ಸಂಜೀವ ರೈ ಯವರ ಹೆಸರಿನ ದ್ವಾರ ಸ್ವಾಗಿಸುತ್ತದೆ. ಮಿತ್ರಂಪಾಡಿ ಜಯರಾಮ ರೈ ಅಬುದಾಬಿಯವರ ತೀರ್ಥರೂಪರು ಡಿಂಬ್ರಿಗುತ್ತು ಸರಸ್ವತೀ ರೈ ಮತ್ತು ಮಿತ್ರಂಪಾಡಿ ಚೆನ್ನಪ್ಪ ರೈ ಹೆಸರಿನ ವೇದಿಕೆಯಲ್ಲಿ ಈ‌ ಕಾರ್ಯಕ್ರಮ ನಡೆಯಲಿದೆ.

ಮಧ್ಯೆ ಸ್ಥಳೀಯ ಪ್ರತಿಭೆಗಳ ಪ್ರದರ್ಶನವೂ ನಡೆಯಲಿದೆ.

ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು (ರಿ) ಪುತ್ತೂರು ತಾಲೂಕು ಸಮಿತಿ ಮಾರ್ಗದರ್ಶನದಲ್ಲಿ, ಪುತ್ತೂರು ತಾಲೂಕು ಬಂಟರ ಸಂಘ, ಮಹಿಳಾ ಬಂಟರ ಸಂಘ ಮತ್ತು ವಿದ್ಯಾರ್ಥಿ ಬಂಟರ ಸಂಘದ ಸಹಕರದೊಂದಿಗೆ ಈ ಕಾರ್ಯಕ್ರಮ ನಡೀತದೆ.

ಮುಂಡಾಳ ಗುತ್ತು ಶಶಿರಾಜ್ ರೈ
ಅಧ್ಯಕ್ಷರು

ರಂಜಿನಿ ಶೆಟ್ಟಿ
ಪ್ರಧಾನ ಕಾರ್ಯದರ್ಶಿ

ಕೆ ಸಿ ಅಶೋಕ್ ಶೆಟ್ಟಿ
ಕೋಶಾಧಿಕಾರಿ

ಹರ್ಷಕುಮಾರ್ ರೈ ಮಾಡಾವು
ಕಾರ್ಯಕ್ರಮದ ಸಂಚಾಲಕರು

ಭಾಗ್ಯೇಶ್ ರೈ ಕೆಯ್ಯೂರು
ಕಾರ್ಯಕ್ರಮದ ಸಂಚಾಲಕರು

ಅಭಿಮತ ಟಿವಿ

Abhimatha TV is a trusted channel renowned for its dedication to honest journalism and its unwavering commitment to showcasing the rich culture, heritage, and traditions of Tulunadu. With a focus on delivering unbiased news and promoting the region's vibrant art forms, rituals, and cultural events, Abhimatha TV has become a beacon of authenticity and pride for the community. Established in 2018, the channel was founded by Mamatha P. Shetty (Managing Partner) and Kanyana Sadhashiva Shetty (Chief Promoter) with a mission to provide truthful reporting and celebrate the essence of our heritage.

Recent Posts

ಮಂಗಳೂರು: ಮಂತ್ರಾಲಯದ ಬಳಿ ಭೀಕರ ಅಪಘಾತ; ಯಕ್ಷಧ್ರುವ ಪಟ್ಲ ಫೌಂಡೇಷನ್ ಕಾರ್ಯದರ್ಶಿ ರವಿ ಶೆಟ್ಟಿ ನಿಧನ…!

ಯಕ್ಷಧ್ರುವ ಪಟ್ಲ ಫೌಂಡೇಷನ್ ಮಂಗಳೂರು ಇದರ ಜೊತೆ ಕಾರ್ಯದರ್ಶಿ ರವಿ ಶೆಟ್ಟಿ ಅಶೋಕ್ ನಗರ ಅಪಘಾತದಿಂದ ಮಂಗಳವಾರ (ಜು.21) ಮುಂಜಾನೆ…

1 day ago

ಬಂಟ್ವಾಳ: ಬಂಟ್ವಾಳ ತಾಲೂಕಿನ ಕುರಿಯಾಳ ಗ್ರಾಮದಲ್ಲಿ ಅಗ್ನಿ ಅವಘಡ…..!

ಬಂಟ್ವಾಳ ತಾಲೂಕಿನ ಕುರಿಯಾಳ ಗ್ರಾಮದ ದಾಸೋಟ್ಟು-ಕುಕ್ಕಾಜೆ ನಿವಾಸಿ ರಮೇಶ್ ಪೂಜಾರಿ ಅವರ ಮನೆಯ ಹಿಂಭಾಗಕ್ಕೆ ಹೊಂದಿಕೊಂಡಿದ್ದ ಬಚ್ಚಲು ಮನೆ ಹಾಗೂ…

2 days ago

ಬಂಟ್ವಾಳ: ಸೂರಿಕುಮೇರ್ ಪೆಟ್ರೋಲ್ ಬಂಕ್ ಸಮೀಪ ಅಪ*ಘಾತ; ಮಾನವೀಯತೆ ಮೆರೆದ ಎಸ್‌ಐ ರಾಮಕೃಷ್ಣ..!

ಪೊಲೀಸ್ ಇಲಾಖೆಯ ನಿಜವಾದ ಕರ್ತವ್ಯನಿಷ್ಠೆ, ಸಮಯಪ್ರಜ್ಞೆ ಮತ್ತು ಮಾನವೀಯತೆಯ ಅಪರೂಪದ ಉದಾಹರಣೆಯೊಂದು ಸೂರಿಕುಮೇರ್ ಪೆಟ್ರೋಲ್ ಬಂಕ್ ಸಮೀಪದಲ್ಲಿ ನಡೆದ ಅಪಘಾತದ…

2 days ago

ಮಂಗಳೂರು: ವಿವಾಹಿತ ಮಹಿಳೆಯೊಬ್ಬರು ಮನೆಯಲ್ಲಿಯೇ ನೇಣು ಬಿಗಿದು ಆತ್ಮಹ*ತ್ಯೆ..!

ವಿವಾಹಿತ ಮಹಿಳೆಯೊಬ್ಬರು ಮನೆಯಲ್ಲಿಯೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೂಡಬಿದರೆಯ ಮಿಜಾರು ಕೊಪ್ಪದಕುಮೇರಿಯಲ್ಲಿ ಸಂಜೆ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ…

4 days ago

ವಿಟ್ಲ: ರಸ್ತೆ ಬದಿಯ ಮರಕ್ಕೆ ಡಿಕ್ಕಿಹೊಡೆದ ಟಿಪ್ಪರ್ ಲಾರಿ – ಇಬ್ಬರಿಗೆ ಗಾಯ..!

ನಿಯಂತ್ರಣ ತಪ್ಪಿದ ಟಿಪ್ಪರ್ ಲಾರಿಯೊಂದು ರಸ್ತೆ ಬದಿಯ ಮರವೊಂದಕ್ಕೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಗಂಭೀರ ಗಾಯಗೊಂಡ ಘಟನೆ ವಿಟ್ಲ…

4 days ago

ಮಾಣಿ: ಮರ ಬಿದ್ದು ಟ್ರಾನ್ಸ್ ಫಾರ್ಮರ್‌ಗೆ ಹಾನಿ; ರಸ್ತೆ ಮೇಲೆ ಮರ ಸಹಿತ ಮುರಿದುಬಿದ್ದು ಸಂಚಾರ ಬಂದ್…!

ಶುಕ್ರವಾರ ಸಂಜೆ ಬೀಸಿದ ಬಿರುಗಾಳಿ ಮಳೆಗೆ ರಾಷ್ಟ್ರೀಯ ಹೆದ್ದಾರಿ ಮಾಣಿ ಬೊಳ್ಳುಕಲ್ಲಿನಿಂದ ಪೆರಾಜೆ ಶ್ರೀ ರಾಮಚಂದ್ರಾಪುರ ಮಠಕ್ಕೆ ಹೋಗುವ ಕಮಲ…

4 days ago