ಇಡೀ ದೇಶವೇ ಆಪರೇಷನ್ ಸಿಂಧೂರ್ ಕಾರ್ಯಾಚರಣೆ ಬಗ್ಗೆ ಶ್ಲಾಘನೆ ವ್ಯಕ್ತಪಡಿಸುತ್ತಿದ್ದರೆ ಇಲ್ಲೊಂದು ಹಳ್ಳಿಯಲ್ಲಿ ಭಾರತದ ಸಾಧನೆಯನ್ನು ಸಂಭ್ರಮಿಸಿದ್ದಕ್ಕೆ ಬಾಲಕನಿಗೆ ಚೂರಿ ಇರಿಯಲಾಗಿದೆ. ಪಹಲ್ಗಾಮ್‌ನಲ್ಲಿ ನಡೆದ ಪ್ರವಾಸಿಗರ ಮೇಲಿನ ಪಾಕ್ ಉಗ್ರರ ಭಯೋತ್ಪಾದಕ ದಾಳಿಗೆ ಪ್ರತಿಕಾರವಾಗಿ ಭಾರತವು ಆಪರೇಷನ್ ಸಿಂಧೂರ್ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ.

ಇದೇ ಸಂಭ್ರಮದಲ್ಲಿ ಉತ್ತರ ಪ್ರದೇಶದ ಶಹಜಹಾನ್ ಪುರದ ಧರ್ಮಘಡದಲ್ಲಿ ಸಾರ್ವಜನಿಕರು ಘೋಷಣೆಗಳನ್ನು ಕೂಗುತ್ತಿದ್ದಾಗ 14 ವರ್ಷದ ಸುರ್ಜಿತ್ ಎಂಬ ಬಾಲಕ ಹಿಂದುಸ್ತಾನ್ ಜಿಂದಾಬಾದ್ ಪಾಕಿಸ್ತಾನ್ ಮುರ್ದಾಬಾದ್ ಇಂದು ಘೋಷಣೆ ಕೂಗಲಾರಂಭಿಸಿದ್ದಾನೆ.
ಹೀಗೆ ಕೂಗುತ್ತಿದ್ದ ಬಾಲಕನ ಮೇಲೆ ಏಕಾಏಕಿ ಮೋಹಿದ್ ಖಾನ್ ಮತ್ತು ಆತನ ಸಹಚರ ವಾಸಿಮ್ ಎಂಬಾತ ಚಾಕುವಿನಿಂದ ಇರಿದು ಹಲ್ಲೆ ಮಾಡಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಘಟನೆಯ ನಂತರ ಆರೋಪಿಗಳನ್ನು ಸ್ಥಳೀಯರೇ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಬಾಲಕನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.



