ದೀಕ್ಷಾ ಪ್ರಿಯಾರವರು ವೈಶಾಲಿ ಕರ್ಕೇರ ಅವರ ಸುಪುತ್ರಿ. ಇವರು ಶ್ರೀ ಗುರುದೇವ ವಿಧ್ಯಾಪೀಠ ಒಡಿಯೂರಿನ ಆರನೇ ತರಗತಿ ಕಲಿಯುತ್ತಿದ್ದಾರೆ. ಇವರು ವಾಹಿನಿಗಳಲ್ಲಿ ಹಲವು ನೃತ್ಯ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಲ್ಲದೇ ಬೆಂಗಳೂರು,ಅಥನಿ, ಶಿವಮೊಗ್ಗ,ಶೃಂಗೇರಿ, ಚಿತ್ರದುರ್ಗ, ಉಡುಪಿ, ಬೆಳಗಾವಿ ಹೀಗೆ ಕರ್ನಾಟಕದ ಹಲವು ದೊಡ್ಡ ದೊಡ್ಡ ವೇದಿಕೆಯಲ್ಲಿ ಹಲವಾರು ಬಾರಿ ನೃತ್ಯ ಕಾರ್ಯಕ್ರಮಗಳನ್ನು ಮಾಡಿ ಸೈ ಎನಿಸಿಕೊಂಡ್ಡಿದ್ದಾರೆ. ತನ್ನ 5ನೇ ವರ್ಷ ವಯಸ್ಸಿನಲ್ಲಿ ವೆಸ್ಟೆರ್ನ್ ಡಾನ್ಸ್ ನ್ನು ಸಿಟಿಗಾಯ್ಸ್ ಕುಡ್ಲಾಕ್ವೀನ್ಸ್ ಡಾನ್ಸ್ ಕ್ರ್ಯು ಮಂಗಳೂರು ಇಲ್ಲಿ ಶ್ರೀ ಸುಧೀರ್ ಉಳ್ಳಾಲ್ ಅವರಶಿಷ್ಯೆಯಾಗಿ 4 ವರ್ಷ ತರಭೇತಿಯನ್ನು ಪಡೆದಿದ್ದಾರೆ.

ಇದೀಗ ಸತತ ಮೂರು ವರ್ಷಗಳಿಂದ ಮುಡಿಪಿನ ಭಾರತೀ ನೃತ್ಯಾಲಯದಲ್ಲಿ ವಿಧುಷಿ ಉಮಾ ಹೆಬ್ಬಾರ್ ಅವರ ಬಳಿ ಭರತನಾಟ್ಯ ಅಭ್ಯಾಸ ಮಾಡುತ್ತಿದ್ದಾರೆ. ತರಬೇತಿ ಪಡೆಯುವುದು ಮಾತ್ರವಲ್ಲದೇ ಹಲವು ವೇದಿಕೆಗಳಲ್ಲಿ ಭರತನಾಟ್ಯವನ್ನು ಮಾಡಿ ಜನರ ಕಣ್ಮನ ಸೆಳೆದಿದ್ದಾರೆ. ಈ ವರ್ಷ ಜ್ಯೂನಿಯರ್ ಪರೀಕ್ಷೆ ಬರೆಯುವ ತಯಾರಿಯಲ್ಲಿದ್ದಾರೆ. ಪಡ್ಪುವಿನ ಶ್ರೀ ಜಲದುರ್ಗಪರಮೇಶ್ವರಿ ದೇವಸ್ಥಾನದಲ್ಲಿ ಕುಣಿತಭಜನೆ ಹಾಗೂ ಶ್ರೀ ಸತೀಶ್ ಸುವರ್ಣ ಅವರ ಬಳಿ ಯಕ್ಷಗಾನ ತರಬೇತಿಯನ್ನು ಪಡೆಯುತ್ತಿದ್ದು, ರಂಗಪ್ರವೇಶವನ್ನೂ ಮಾಡಿದ್ದಾರೆ. ಶ್ರೀ ಸಂತಾನಗೋಪಾಲಕೃಷ್ಣ ದೇವಸ್ಥಾನದ ಕಲಾ ಸಂಘದಲ್ಲಿ ಭಜನೆ ಹಾಗೂ ಕುಣಿತಭಜನೆಯನ್ನು ಕಲಿಯುತ್ತಿದ್ದಾರೆ. ಯೋಗಾಸನ ಹಾಗೂ ಚಿತ್ರಕಲೆಯಲ್ಲೂ ಪ್ರವೀಣೆಯೆನಿಸಿದ್ದಾರೆ.




