ಗುರುವಾರ ಮೇ. 9 ರಂದು ಭಾರತ ಮತ್ತು ಪಾಕಿಸ್ತಾನ ಸೇನೆ ಮಧ್ಯೆ ಬಹಳ ದೊಡ್ಡ ಮಟ್ಟದಲ್ಲಿ ಘರ್ಷಣೆ ಆಗಿದೆ.

ಭಾರತೀಯ ನಾಗರಿಕರ ಮತ್ತು ನಮ್ಮ ಸೇನಾ ನೆಲೆಯನ್ನು ಟಾರ್ಗೆಟ್ ಮಾಡುತ್ತಿದ್ದ ಪಾಕಿಸ್ತಾನಿ ಯುದ್ಧ ವಿಮಾನವನ್ನು ನಮ್ಮ ಸೇನೆಯು ಹೊಡೆದುರುಳಿಸಿದ್ದಾರೆ. ಪಾಕಿಸ್ತಾನಿ ಜೆಟ್ ಭಾರತದ ಪಠಾಣ್ಕೋಟ್ ಮೇಲೆ ದಾಳಿಗೆ ಯತ್ನಿಸಿ ಬರುತ್ತಿತ್ತು. ಇದನ್ನು ಗಮನಿಸಿದ ನಮ್ಮ ಏರ್ ಡಿಫೆನ್ಸ್ ಸಿಸ್ಟಮ್ ದಾಳಿ ಮಾಡಿ ಮಾಡಿದೆ. ಆಕಾಶದಲ್ಲಿ ನಡೆದ ಪಾಕಿಸ್ತಾನಿ ವಿಮಾನವನ್ನೂ ಶೂಟ್ ಮಾಡಿ ಸ್ಫೋಟಿಸಲಾಗಿದೆ. ಈ ದೃಶ್ಯವನ್ನು ನೋಡಲು ರೋಮಾಂಚನಕಾರಿಯಾಗಿದೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಅಗ್ತಾ ಇದ್ದು ಈ ಬಗ್ಗೆ ಸೇನೆಯಿಂದ ಹೆಚ್ಚಿನ ಮಾಹಿತಿಯನ್ನು ನಿರೀಕ್ಷೆ ಮಾಡಲಾಗಿದೆ. ಪಹಲ್ಗಾಮ್ ದಾಳಿಗೆ ಪ್ರತಿಯಾಗಿ ಭಾರತ, ಭಯೋತ್ಪಾದಕರಿಗೆ ಬುದ್ಧಿ ಕಲಿಸಲು ಆಪರೇಷನ್ ಸಿಂಧೂರ ನಡೆಸಿತು. ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಉಗ್ರರ ನೆಲೆಗಳನ್ನು ಗುರಿಯಾಗಿಸಿಕೊಂಡು ಭಾರತ ದಾಳಿ ಮಾಡಿ, 100ಕ್ಕೂ ಹೆಚ್ಚು ಭಯೋತ್ಪಾದಕರನ್ನು ಹೊಡೆದುರುಳಿಸಿತ್ತು. ಭಯೋತ್ಪಾದಕರನ್ನು ಹೊಡೆದ ಬೆನ್ನಲ್ಲೇ ಉಗ್ರ ಪಾಕಿಸ್ತಾನ ಭಾರತ ಮೇಲೆ ದಾಳಿ ಮಾಡಿತು. ಗಡಿ ಭಾಗದಲ್ಲಿ ಭಾರತದ ಮೇಲೆ ದಾಳಿ ಮಾಡಿ ನಾಗರಿಕರ ಮೇಲೆ ಅಟ್ಯಾಕ್ ಮಾಡಿತು. ಆ ಮೂಲಕ ಪಾಕಿಸ್ತಾನ ಭಾರತವನ್ನು ಕೆರಳಿಸಿ, ಯುದ್ಧಕ್ಕೆ ರಣವಿಳ್ಯವನ್ನು ನೀಡಿತು. ಭಾರತ ತನ್ನ ರಕ್ಷಣೆಗಾಗಿ ಪಾಕಿಸ್ತಾನದ ಯಾವೆಲ್ಲ ಪ್ರದೇಶಗಳಿಂದ ದಾಳಿ ಆಗುತ್ತಿತ್ತೋ ಅಲ್ಲಿಗೆ ನುಗ್ಗಿ ಹೊಡೆದಿದೆ. ಅದರ ಜೊತೆಗೆ ಭಾರತದ ಮೇಲಿ ದಾಳಿಗೆ ಯತ್ನಿಸಿದ್ದನ್ನೂ ವಿಫಲಗೊಳಿಸಿದೆ ನಮ್ಮ ಸೇನೆ.



