ಪೆಹಾಲ್ಗಮ್ ದಾಳಿಗೆ ಪ್ರತ್ಯುತ್ತರ ನೀಡುವ ಕಾರ್ಯ ಈಗಾಗಲೇ ಭಾರತ ಶುರುಮಾಡಿದ್ದು, ಪಾಕಿಸ್ಥಾನದ ಹಲವೆಡೆ ಉಗ್ರರ ಅಡಗು ತಾಣಗಳನ್ನು ದ್ವಂಸ ಮಾಡಿದೆ. ಇದಕ್ಕೆ ಪ್ರತಿಯಾಗಿ ಪಾಕಿಸ್ಥಾನವೂ ದಾಳಿಗೆ ಯತ್ನಿಸುತ್ತಿದ್ದು, ಭಾರತ ಪಾಕ್ ನ ಎಲ್ಲಾ ಯತ್ನಗಳನ್ನು ವಿಫಲಗೊಳಿಸಿದೆ. ಹೀಗೆ ವಿಫಲಗೊಂಡ ಶಾಸ್ತ್ರಸ್ತ್ರಗಳಲ್ಲಿ ಒಂದು ಜೀವಂತ ಬಾಂಬ್ ರಾಜಸ್ಥಾನದ ಜೆಸಲ್ಮೆರ್ ನ ಭೂ ಪ್ರದೇಶಕ್ಕೆ ಬಿದ್ದಿದ್ದು, ಬಾಂಬ್ ನಿಷ್ಕ್ರಿಯ ದಳ ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆಯಲ್ಲಿ ತೊಡಗಿದೆ.

ಸಧ್ಯ ಬಾಂಬ್ ಸಿಕ್ಕಿರುವ ಪ್ರದೇಶದಲ್ಲಿ ಜನವಸತಿ ಕಡಿಮೆಯಾದರೂ ಮುಂಜಾಗ್ರತಾ ಕ್ರಮವಾಗಿ ಆ ಪ್ರದೇಶವನ್ನು ಸೀಲ್ ಡೌನ್ ಮಾಡಲಾಗಿದೆ. ಬಾಂಬ್ ಬಿದ್ದ ಸ್ಥಳಕ್ಕೆ ಸ್ಥಳೀಯ ಪೊಲೀಸರು ಮತ್ತು ವಾಯು ಸೇನಾ ಸಿಬ್ಬಂದಿ ಭೇಟಿ ನೀಡಿದ್ದು, ತೀವ್ರ ತಪಾಸಣೆ ನಡೆಸುತ್ತಿರುವುದಾಗಿ ಮೂಲಗಳು ತಿಳಿಸಿವೆ.



