ಪಹಲ್ಗಾಮ್ ನಲ್ಲಿ ನಡೆದಿರುವ ನರಮೇಧದ ಪ್ರತೀಕಾರಕ್ಕಾಗಿ ಆಪರೇಷನ್ ಸಿಂಧೂರ ಮೂಲಕ ಪಾಕಿಸ್ತಾನ ಉಗ್ರವಾದಿಗಳನ್ನು ಅವರದ್ದೇ ನೆಲದಲ್ಲಿ ಮಟ್ಟ ಹಾಕಿರುವ ಭಾರತದ ವೀರ ಸೈನಿಕರ ಮನೋಸ್ಥೈರ್ಯವನ್ನು ಹೆಚ್ಚಿಸಲು ಹಾಗೂ ನೆಚ್ಚಿನ ಪ್ರದಾನಮಂತ್ರಿಯವರಿಗೆ ಇನ್ನಷ್ಟು ಶಕ್ತಿ ತುಂಬಲು ಕುಪ್ಪೆಪದವು ಶ್ರೀ ದುರ್ಗೆಶ್ವರಿ ದೇವಿ ಸನ್ನಿಧಾನದಲ್ಲಿ ಬಿಜೆಪಿ ಎಡಪದವು ಮಹಾಶಕ್ತಿ ಕೇಂದ್ರದ ವತಿಯಿಂದ ಇಂದು ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.

ಈ ಸಂದರ್ಭ ದೇವಳದ ಪ್ರದಾನ ಅರ್ಚಕರಾದ ಶ್ರೀ ಗುರುಪ್ರಸಾದ್ ಕಾರಂತ್, ಬಿಜೆಪಿ ಮುಖಂಡರುಗಳಾದ ಶ್ರೀ ಮಹಾಬಲ ಸಾಲಿಯಾನ್, ಮುತ್ತೂರು ಪಂಚಾಯತ್ ಅಧ್ಯಕ್ಷರಾದ ಪ್ರವೀಣ್ ಆಳ್ವ.ಶ್ರೀ ಗಣೇಶ್ ಪಾಕಜೆ ಸತೀಶ್ ಬಲ್ಲಾಜೆ, ಜಗದೀಶ್ ದುರ್ಗಾಕೊಡಿ, ಅಜಯ್ ಅಮೀನ್, ತಾರಾನಾಥ್ ಉಗ್ರಾಯಿ, ಚಂದ್ರಶೇಖರ್ ತುಂಬೇಮಜಲು, ಹಾಗು ಪಕ್ಷದ ಪ್ರಮುಖ ಕಾರ್ಯಕರ್ತರು, ಹಾಜರಿದ್ದರು,



