2025ರ ಐಪಿಎಲ್ ಟೂರ್ನಿಯನ್ನ ಮುಂದಿನ ಒಂದು ವಾರಗಳ ಕಾಲ ಪಂದ್ಯಾಟ ಮುಂದೂಡಲು ಬಿಸಿಸಿಐ ನಿರ್ಧರಿಸಿದ್ದು ನಂತರದ ವೇಳಾಪಟ್ಟಿ, ಟೂರ್ನಿ ನಡೆಯುವ ಸ್ಥಳಗಳ ಮಾಹಿತಿಯನ್ನ ನಂತರದಲ್ಲಿ ನೀಡಲಾಗುವುದು ಎಂದು ಬಿಸಿಸಿಐ ತಿಳಿಸಿದೆ.
ಈ ಕಠಿಣ ಪರಿಸ್ಥಿತಿಯಲ್ಲಿ ಬಿಸಿಸಿಐ ದೇಶದ ಜೊತೆಗೆ ನಿಲ್ಲುತ್ತದೆ ಎಂದು ಭರವಸೆಯನ್ನು ಕೊಟ್ಟಿದೆ ಹಾಗೆಯೇ ಭಾರತ ಸರ್ಕಾರ, ಭಾರತೀಯ ಸೇನೆ, ಹಾಗೂ ಈ ದೇಶದ ಜನರೊಂದಿಗೆ ನಾವು ನಿಲ್ಲುತ್ತೇವೆ ಎಂದು ತಿಳಿಸಿದೆ . ಕ್ರಿಕೆಟ್ ಈ ದೇಶದ ಪ್ಯಾಷನ್. ಈ ದೇಶಕ್ಕಿಂತ ಯಾವುದು ದೊಡ್ಡದಿಲ್ಲ. ಸಶಸ್ತ್ರ ಪಡೆಗಳ ಧೈರ್ಯ, ಶೌರ್ಯ ಮತ್ತು ನಿಸ್ವಾರ್ಥ ಸೇವೆಯನ್ನ ಗೌರವಿಸುತ್ತೇವೆ. ಆಪರೇಷನ್ ಸಿಂಧೂರ ಅಡಿಯಲ್ಲಿ ರಾಷ್ಟ್ರವನ್ನ ರಕ್ಷಿಸುತ್ತಿರೋ ಸೇನೆಗೆ ಸೆಲ್ಯೂಟ್ ಎಂದು ಬಿಸಿಸಿಐ ಹೇಳಿಕೆ ನೀಡಿದೆ. ಒಂದು ವಾರದ ಬಳಿಕ ಪರಿಸ್ಥಿತಿ ಸುದಾರಿಸಿದ್ರೂ ರಿಸ್ಕ್ ತೆಗೆದುಕೊಳ್ಳಲು ಬಿಸಿಸಿಐ ರೆಡಿಯಿಲ್ಲ. ಹೀಗಾಗಿ ಗಡಿ ಭಾಗದ ಬದಲಾಗಿ ಸೌತ್ ಇಂಡಿಯಾದಲ್ಲಿ ಉಳಿದ ಪಂದ್ಯಗಳನ್ನ ಆಯೋಜಿಸೋ ಬಗ್ಗೆ ಚರ್ಚೆ ನಡೆಸಲಾಗತ್ತಿದೆ. ಬೆಂಗಳೂರು, ಹೈದ್ರಾಬಾದ್‌ನಲ್ಲಿ ಬಹುತೇಕ ಉಳಿದ ಪಂದ್ಯಗಳನ್ನ ನಡೆಸೋ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ.
ಒಂದು ವೇಳೆ ಸಾಧ್ಯವಾಗದಿದ್ದರೆ ಸಪ್ಟೆಂಬರ್ ಬಳಿಕವೇ ಐಪಿಎಲ್ ನಡೆಯೋ ಸಾಧ್ಯತೆಯಿದೆ. ಮುಂದಿನ ತಿಂಗಳು ಸೌತ್ ಆಫ್ರಿಕಾ-ಆಸ್ಟ್ರೇಲಿಯಾ ನಡುವೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ನಡೆಯಲಿದೆ. ಭಾರತ ತಂಡ ಇಂಗ್ಲೆ0ಡ್ ಪ್ರವಾಸಕ್ಕೆ ತೆರಳಲಿದೆ. ಅಗಸ್ಟ್ನಲ್ಲಿ ನಡೆಸೋದಾದ್ರೆ ಟೀಮ್ ಇಂಡಿಯಾದ ಬಾಂಗ್ಲಾದೇಶ ಟೂರ್ ಡಿಶೆಡ್ಯೂಲ್ ಮಾಡಬೇಕಾಗುತ್ತದೆ. ಜೊತೆಗೆ ಇಂಗ್ಲೆ0ಡ್ ಹಾಗೂ ಸೌತ್ ಆಫ್ರಿಕಾ ನಡುವೆ ಅಗಸ್ಟ್ನಲ್ಲಿ ವೈಟ್‌ಬಾಲ್ ಸರಣಿಯಿದೆ. ಸೆಪ್ಟೆಂಬರ್‌ನಲ್ಲಿ 2 ವಾರಗಳ ವಿಂಡೋ ಸಿಗಲಿದೆ. ಅದೇ ತಿಂಗಳು ನಡೆಯೋ ಏಷ್ಯಾಕಪ್ ಟೂರ್ನಿಯನ್ನೂ ಕ್ಯಾನ್ಸಲ್ ಮಾಡಿ ಐಪಿಎಲ್ ನಡೆಸೋ ಚರ್ಚೆಯೂ ನಡೀತಾ ಇದೆ ಎನ್ನುವ ಮಾಹಿತಿ ಹರಿದಾಡುತ್ತಿದೆ.
ಹೊಸದಿಲ್ಲಿ: ಪಟ್ಲ ಸತೀಶ್ ಶೆಟ್ಟಿ ಅವರಿಗೆ ಡಾ. ಶಿವರಾಮ ಕಾರಂತ ಪ್ರಶಸ್ತಿ..! ಪ್ರಖ್ಯಾತ ಭಾಗವತ, ಸಂಘಟಕ ಪಟ್ಲ ಸತೀಶ್ ಶೆಟ್ಟಿ…
ಮಣಿಪಾಲ: ಸರಳೆಬೆಟ್ಟು ನಗರಸಭಾ ಸದಸ್ಯೆಯ ಸಹೋದರ ಆತ್ಮಹತ್ಯೆ ವೈಯಕ್ತಿಕ ಕಾರಣದಿಂದ ಮನನೊಂದ ವ್ಯಕ್ತಿಯೊಬ್ಬರು ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ…
ಮಲೆಯಾಳ ಕಡ್ಡಾಯ ಮಸೂದೆ ವಿರೋಧಿ ಸಮಿತಿ ವತಿಯಿಂದ ಕೇರಳದ ವಿರೋಧ ಪಕ್ಷದ ನಾಯಕ ಸನ್ಮಾನ್ಯ ವಿ ಡಿ ಸತೀಶನ್ ಅವರನ್ನು…
ಉಡುಪಿ : ಜಿಲ್ಲೆಯ ಹಿರಿಯ ರಾಜಕಾರಣಿ, ಬೈಂದೂರಿನ ಮಾಜಿ ಶಾಸಕ ಬಸ್ರೂರು ಅಪ್ಪಣ್ಣ ಹೆಗ್ಡೆ ಅವರು ಅಲ್ಪಕಾಲದ ಅಸೌಖ್ಯದಿಂದ…
ಮೂಲತಃ ಪುತ್ತೂರು ಬೆಂದ್ರುತೀರ್ಥ ನಿವಾಸಿ, ಪ್ರಸಕ್ತ ರಾಯಿ ಸಮೀಪದ ಮಾಬೆಟ್ಟು ಎಂಬಲ್ಲಿ ವಾಸವಾಗಿದ್ದ ನಿವೃತ್ತ ಕೃಷಿ ಅಧಿಕಾರಿ ನಾರಾಯಣ ನಾಯ್ಕ್…
ದೆಹಲಿ ಕರ್ನಾಟಕ ಸಂಘದಿಂದ ಖ್ಯಾತ ಯಕ್ಷಗಾನ ಭಾಗವತರಾದ ಪಟ್ಲ ಸತೀಶ್ ಶೆಟ್ಟಿಯವರಿಗೆ ಅತ್ಯುನ್ನತ ಡಾ. ಶಿವರಾಮ ಕಾರಂತ ಪ್ರಶಸ್ತಿ ಘೋಷಣೆ…