ಭಾರತ ಪಾಕ್ ಯುದ್ಧದ ನಡುವೆ ಚಿನ್ನದ ಬೆಲೆ 1 ಲಕ್ಷ ದಾಟಿದೆ. ಬೆಂಗಳೂರು, ಮೈಸೂರು, ಮಂಗಳೂರು, ಬೆಳಗಾವಿ ಮತ್ತು ಕರ್ನಾಟಕದ ಇತರ ನಗರಗಳಲ್ಲಿ ಚಿನ್ನದ ದರ ಗಗನಕ್ಕೇರಿದೆ. ಚಿನ್ನದ ಬೆಲೆಯಲ್ಲಿ ನಿರಂತರ ಏರಿಕೆ ಕಾಣುತ್ತಿದೆ. ಭಾರತ ಪಾಕಿಸ್ತಾನದ ಉದ್ವಿಗ್ನತೆಗಳು ಮಾರುಕಟ್ಟೆಯಲ್ಲಿ ಸಾಕಷ್ಟು ಏರಿಳಿತ ಸೃಷ್ಟಿಸಿವೆ.

ಚಿನ್ನದ ದರ ಇಂದು ಏರಿಕೆಯಾಗಿ 1 ಲಕ್ಷ ರೂಪಾಯಿ ಗಡಿ ದಾಟಿದೆ. ಚಿನ್ನದ ಬೆಲೆ ಮತ್ತೆ ಏರಿಕೆಯಾಗಲು ಪ್ರಾರಂಭಿಸಿದೆ. ಬೆಂಗಳೂರಿನಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ ಮೇ 9 ರಂದು ಪ್ರತಿ ಗ್ರಾಂಗೆ 600 ರೂಪಾಯಿ ಏರಿಕೆಯಾಗಿದೆ. 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 1 ಲಕ್ಷ ರೂಪಾಯಿ ಗಡಿ ತಲುಪಿದೆ. 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 550 ರೂಪಾಯಿ ಏರಿಕೆಯಾಗಿ 91,300 ರೂಪಾಯಿಗಳಿಗೆ ತಲುಪಿದೆ. 18 ಕ್ಯಾರೆಟ್ ಚಿನ್ನದ ದರ 10 ಗ್ರಾಂಗೆ 74,700 ರೂಪಾಯಿ ತಲುಪಿದೆ. ನಿನ್ನೆ 100 ಗ್ರಾಂ ಬೆಳ್ಳಿಯ ಬೆಲೆ 11,100 ರೂ ವಹಿವಾಟು ನಡೆಸುತ್ತಿತ್ತು. ಪ್ರತಿ ಕೆಜಿ ಬೆಳ್ಳಿಯ ಬೆಲೆ 1,11,000 ಬಳಿ ವಹಿವಾಟು ನಡೆಸುತ್ತಿತ್ತು. ಇಂದು ಬೆಳ್ಳಿ ಬೆಲೆ 100 ಗ್ರಾಂಗೆ 10 ರೂ. ಮತ್ತು ಕಿಲೋಗ್ರಾಂಗೆ 100 ರೂ. ಕಡಿಮೆಯಾಗಿದೆ. ಇಂದು 100 ಗ್ರಾಂ ಬೆಳ್ಳಿಯ ಬೆಲೆ 11,090 ರ ಸಮೀಪ ವಹಿವಾಟು ನಡೆಸುತ್ತಿದೆ.



