ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ನ ಬೃಹತ್ ಯೋಜನೆ ಪಟ್ಲ ಯಕ್ಷಾಶ್ರಯದ 38ನೇ ಮನೆಯನ್ನು ಪ್ರಸಂಗಕರ್ತರಾದ ರಾಘವೇಂದ್ರ ಅವರಿಗೆ ಹಸ್ತಾಂತರಿಸಲಾಯಿತು.

ನೂತನವಾಗಿ ನಿರ್ಮಾಣಗೊಂಡ ಮನೆಯನ್ನು ಹೇರಂಬ ಇಂಡಸ್ಟ್ರೀಸ್ ಲಿಮಿಟೆಡ್ ಗ್ರೂಪ್ ಎಂಡಿ ರಘುರಾಮ ಶೆಟ್ಟಿ ಕನ್ಯಾನ ಅವರು ಕೊಡುಗೆಯಾಗಿ ಕಲಾವಿದನ ಕುಟುಂಬಕ್ಕೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಅನೇಕ ಗಣ್ಯರು ಉಪಸ್ಥಿತರಿದ್ರು. ಇನ್ನು ಹಲವು ವರ್ಷಗಳಿಂದ ಮನೆಯನ್ನು ಕಟ್ಟುವ ಕನಸ್ಸನ್ನ ಪಟ್ಲ ಸತೀಶ್ ಶೆಟ್ಟಿಯವರು ನನಸು ಮಾಡಿದ್ದಾರೆ. ಯಕ್ಷಗಾನದಲ್ಲಿ ಗುರುತಿಸಿಕೊಂಡಿರುವ ಎಲ್ಲ ಕಲಾವಿದರಿಗೆ ಪಟ್ಲ ಫೌಂಡೇಶನ್ ನೆರವನ್ನ ನೀಡಿದೆ. ನಾನು ಅವರಿಗೆ ಸದಾ ಋಣಿಯಾಗಿರುತ್ತೇನೆ ಎಂದು ಪ್ರಸಂಗಕರ್ತ ರಾಘವೇಂದ್ರ ಖುಷಿ ಹಂಚಿಕೊAಡಿದ್ದಾರೆ.



