55 ಕೋಟಿ ವೆಚ್ಚದ ದಕ್ಷಿಣ ಕನ್ನಡ ಜಿಲ್ಲೆಯ ನೂತನ ಡಿಸಿ ಕಚೇರಿಯನ್ನು ಮೇ 16ರಂದು ಸಿಎಂ ಸಿದ್ದರಾಮಯ್ಯ ಉದ್ಘಾಟನೆ ಮಾಡಲಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಇವರು ಜಿಲ್ಲಾ ಪಂಚಾಯತ್ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಸಿಎಂ ಸಿದ್ದರಾಮಯ್ಯ ಅವರು ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸುವುದರ ಕುರಿತಾದ ಪೂರ್ವಭಾವಿ ಸಭೆ ನಡೆಸಲಾಯಿತು. ಜಿಲ್ಲಾದಿಕಾರಿಯವರ ಜೊತೆ ಈ ಬಗ್ಗೆ ಸಮಗ್ರ ಅವಲೋಕನ ಮಾಡಲಾಗಿದೆ. ಹಲವು ಕಾರಣದಿಂದ ಕಟ್ಟಡ ಉದ್ಘಾಟನೆ ಕಾರ್ಯವು ವಿಳಂಬವಾಗಿತ್ತು. ಆದರೆ ಮೇ16 ರಂದು ಕಟ್ಟಡವು ಲೋಕಾರ್ಪಣೆಯಾಗಲಿದ್ದು, ನಾಗರಿಕರಿಗೆ ಉತ್ತಮವಾದ ಸೇವೆಯನ್ನು ನೀಡುವ ಭರವಸೆ ಮತ್ತು ಸಹಕಾರಿಯಾಗಲಿದೆ ಎನ್ನುವ ವಿಶ್ವಾಸವನ್ನು ಹೆಚ್ಚಿಸಿದೆ. ಹಳೆಯ ಜಿಲ್ಲಾಧಿಕಾರಿ ಕಚೇರಿಯ 23 ಇಲಾಖೆಗಳು ಸ್ಥಳಾಂತರ ಆಗಲಿದೆ. ಕೆಲವೊಂದು ಇಲಾಖೆಗಳು ಉದ್ಘಾಟನೆಯ ದಿನವೇ ಕಾರ್ಯಾರಂಭ ನಡೆಸಿದರೆ. ಉಳಿದವು ನಿಧಾನವಾಗಿ ಸ್ಥಳಾಂತರಗೊಳ್ಳಲಿದೆ ಎಂದು ಮಾಹಿತಿಯನ್ನು ನೀಡಿದ್ದಾರೆ. ಇನ್ನು ಈ ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯರಾದ ಐವನ್ ಡಿ’ಸೋಜ, ಭೋಜೆ ಗೌಡ್ರು ಉಪಸ್ಥಿತರಿದ್ರು.



