ಶ್ರೀ ಗೋವಿಂದ ಗುರುಸ್ವಾಮಿ ತೌಡುಗೋಳಿ ಮತ್ತು ಶ್ರೀಮತಿ ಗೋಪಿ ಹಾಗೂ ಟಿ.ಪಿ ಉತ್ತಮನ್ ಬಡ್ಡಿಗೆರಿ ಕ್ರಾಸ್ ಶ್ರೀಮತಿ ಸೋಮ ವಲ್ಲಿ ಇವರ ಮೊಮ್ಮಗಳಾಗಿದ್ದು, ಅನಿಲ್ ಕುಮಾರ್ ಉತ್ತಮನ್ ಶೈಲಜಾ ಇವರ ಮುದ್ದಿನ ಮಗಳಾಗಿರುವ ಪ್ರತೀಕ್ಷಾ ಅನಿಲ್ ಬ್ಲೂಮಿಂಗ್ ಬರ್ಡ್ಸ್ ಇಂಗ್ಲೀಷ್ ಮೀಡಿಯಂ ಸ್ಕೂಲ್ ಮುಂಡುಗೋಡ ಇಲ್ಲಿ 6ನೇ ತರಗತಿಯಲ್ಲಿ ಓದುತ್ತಿದ್ದಾರೆ. ಭರತನಾಟ್ಯ, ವೆಸ್ಟರ್ನ್ ಡಾನ್ಸ್, ಕರಾಟೆ, ಯೋಗ, ಸಂಗೀತ, ಚಿತ್ರ ಬಿಡಿಸುವುದು, ಭಜನೆ, ಕ್ರೀಡೆ ವಿವಿಧ ಕ್ಷೇತ್ರದಲ್ಲಿ ಅಪಾರ ಭರವಸೆ ಮೂಡಿಸಿರುವ ಪ್ರತಿಭೆಯಾಗಿದ್ದಾರೆ. ತನ್ನ ಎಂಟನೇ ವಯಸ್ಸಿನಲ್ಲಿ ಭರತನಾಟ್ಯ ಕೂಚುಪುಡಿ ಮತ್ತು ಮೋಹಿನಿ ಆಟಂ ಅಭ್ಯಾಸವನ್ನು ಶ್ರೀಮತಿ ಶಶಿರೇಖಾ ಭೈಜು ಇವರ ಮಾರ್ಗದರ್ಶನದಲ್ಲಿ ಮಾಡುತ್ತಿದ್ದಾರೆ.

ದೀಪೋತ್ಸವ, ನೃತ್ಯಸಂಜೆ, ಪ್ರತಿ ವರ್ಷ ನವರಾತ್ರಿ ಉತ್ಸವ, ಗಣಪತಿ ಉತ್ಸವ, ರಾಮೋತ್ಸವ, ಅನ್ವಲ್ ಡೇ, ಕೇರಳ ಶ್ರೀ ದುರ್ಗಾಪರಮೇಶ್ವರಿ ಟೆಂಪಲ್ ಮತ್ತು ಮೋರ್ಲಾ ಭಜನಾ ಕಾರ್ಯಕ್ರಮದಲ್ಲಿ, ವಾಟ್ಸಾಪ್ ಆರಾಧನಾ ತಂಡದಲ್ಲಿ ನಡೆದಿರುವ ಅಗರಿ, ಸುರತ್ಕಲ್ ರಾಘವೇಂದ್ರ ಮಠ, ವಾಯ್ಸ್ ಆಫ್ ಆರಾಧನಾ ತಂಡ, ನೆಲ್ಲಿ ತೀರ್ಥ ದೇವಸ್ಥಾನದಲ್ಲಿ ಭರತನಾಟ್ಯದಲ್ಲಿ ಭಾಗವಹಿಸಿ ಸಾಧನ ರತ್ನ ಪ್ರಶಸ್ತಿ ಬಂದಿದೆ, ದುರ್ಗಾ ಫ್ರೆಂಡ್ಸ್ ಕ್ಲಬ್ ನಂದಳಿಕೆ, ಮಂಗಳೂರು ಮಂಗಳದೇವಿ ದೇವಸ್ಥಾನ, ಮುಂಡುಗೋಡ ನಡೆದಿರುವ ಪತ್ರಕರ್ತರ ಸಂಘದಲ್ಲಿ ವಿಮೆನ್ಸ್ ಡೇ ವಿನ್ನರ್ ವೇಲ್ ಕ್ಲಬ್ಬ, ಹಲವಾರು ಕಡೆ ಭರತನಾಟ್ಯವನ್ನು ಮಾಡಿದ್ದಾರೆ. ವೆಸ್ಟರ್ನ್ ಡ್ಯಾನ್ಸ್ ಸಂದೀಪ್ ಕೋರಿ ಇವರ ತರಭೇತಿಯಲ್ಲಿ ಪಡೆದಿದ್ದಾರೆ. ಸುರೇಂದ್ರನ್ಯಾಸರ್ಗಿ ಇವರ ಬಳಿ ಕರಾಟೆ ಅಭ್ಯಾಸ ಮಾಡುತ್ತಿದ್ದಾರೆ. ಕರ್ನಾಟಕ ಸಂಗೀತ ರೇಖಾ ಮರಾಠೆ ಇವರಲ್ಲಿ ಕಲಿಯುತ್ತಿದ್ದಾರೆ. ಯೋಗ ಅಭ್ಯಾಸವನ್ನು ಶರತ್ ಮಾರ್ಗಿಲಡ್ಕ ಸುಳ್ಯದಲ್ಲಿ ಆನ್ಲೈನ್ ಮೂಲಕ ಅಭ್ಯಾಸ ಮಾಡುತ್ತಿದ್ದಾರೆ.
ರಾಜ್ಯ ಮಟ್ಟದ ಯೋಗದಲ್ಲಿ ಇವರಿಗೆ ಮಹಾತ್ಮ ಗಾಂಧಿ ಟ್ಯಾಲೆಂಟ್ ಯೋಗರತ್ನ ಅವಾರ್ಡ್, ಬೆಂಗಳೂರು ಇಂಟರ್ನ್ಯಾಷನಲ್ ಟ್ಯಾಲೆಂಟ್ ಅವಾರ್ಡ್, ಸೂರ್ಯ ನಮಸ್ಕಾರ ಸಂಗಮ ೨೦೨೦, ಸೂರ್ಯ ನಮಸ್ಕಾರ ಸಿರಿ ಅವಾರ್ಡ್ ಲಭಿಸಿದೆ. ಬಿ.ಕೆ. ಐಯ್ಯಂಗಾರ್ ಸ್ಮರಣಾರ್ಥ 7ನೇ ವರ್ಷದ ರಾಷ್ಟ್ರಮಟ್ಟದ ಮುಕ್ತ ಯೋಗಾಸನ ಚಾಂಪಿಯಶಿಪ್ ೨೦೨೩ ಮೆರಿಟ್ ಸರ್ಟಿಫಿಕೇಟ್ ನಲ್ಲಿ ಶರತ್ ಮಾರ್ಗಿಲಡ್ಕ ಇವರ ಮಾರ್ಗದರ್ಶನದಲ್ಲಿ 4ನೇ ಸ್ಥಾನ ಪಡೆದಿದ್ದಾರೆ. ಶ್ರೀ ದುರ್ಗಾ ಬಾಲಗೋಕುಲ ತೌಡುಗೋಳಿ ವಾರ್ಷಿಕೋತ್ಸವದಲ್ಲಿ ಭಜನೆ ತಂಡದಲ್ಲಿ ಮತ್ತು ಕ್ರೀಡೆಯಲ್ಲಿ ಭಾಗವಹಿಸಿ ಅಭಿನಂದನ ಪತ್ರ ಪಡೆದುಕೊಂಡಿದ್ದಾರೆ.
ಆಲ್ ಇಂಡಿಯಾ ಮುಕ್ತ ಕರಾಟೆ ಚಾಂಪಿಯನ್ ಶಿಪ್ ೨೦೨೧ ಕಾಟದಲ್ಲಿ ಮೂರನೇ ಸ್ಥಾನ ಪಡೆದಿದ್ದಾರೆ. ಎರಡನೇ ಮುಕ್ತ ರಾಜಮಟ್ಟದ ಕರಾಟೆ ಚಾಂಪಿಯನ್ ಶಿಪ್2022 ಕಾಟ ಮತ್ತು ಕುಮಿಟಿಯಲ್ಲಿ ಮೂರನೇ ಸ್ಥಾನ ಅಲಂಕರಿಸಿದ್ದಾರೆ. ರಾಜಮಟ್ಟದ ಮುಕ್ತ ಕರಾಟೆ ಚಾಂಪಿಯನ್ ಶಿಪ್ 2023 ಭಾಗವಹಿಸಿ ಪ್ರಶಸ್ತಿ ತಂದಿದ್ದಾರೆ. ವೇದಂ ಮತ್ತು ಸೋತ್ರಂ ಆನ್ಲೈನ್ ಭಜನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅಭಿನಂದನ ಪತ್ರ ಪಡೆದಿದ್ದಾರೆ. ಮೇ ಚಿತ್ರ ಯಾನ ಮಕ್ಕಳ ಜೋಳಿಗೆ ಭಾಗವಹಿಸಿ ಅಭಿನಂದನೆ ಪತ್ರ, ಕಲಾತ್ಮಕ ಜಗತ್ತು 2023 ಯೋಗದಲ್ಲಿ ಭಾಗವಹಿಸಿ ಅಭಿನಂದನ ಪತ್ರ,, ಪಾಸಿಟಿವ್ ಪ್ರೊಡಕ್ಷನ್ ಮುದ್ದುಕೃಷ್ಣ ಮದ್ದುರಾದ ಆನ್ಲೈನ್ ಭಾಗವಹಿಸಿ ಪ್ರಶಸ್ತಿ ಪತ್ರ, ವಿಜಯ ಪಥ ಪ್ರಸ್ತುತಿ ಯೋಗ ಆಯೋಜಿಸಿದ್ದ ರಾಜ್ಯಮಟ್ಟದ ಅಭಿನಂದನಪತ್ರ, ಕುಡುವಸ್ ಫೆಸ್ಟಿವಲ್ 2023 ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಶಸ್ತಿ ಪತ್ರ ಹೀಗೆ ಹತ್ತು ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ.

2023_24 ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಛದ್ಮಾ ವೇಷದಲ್ಲಿ ಭಾಗವಹಿಸಿ ಮೂರನೇ ಸ್ಥಾನ ಮುಡಿಗೇರಿಸಿಕೊoಡಿದ್ದಾರೆ. ನೆಲ್ಲಿ ತೀರ್ಥದಲ್ಲಿ ವಾಯ್ಸ್ ಆಫ್ ಆರಾಧನಾ ತಂಡದವರು ನಡೆಸಿದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಸೇವ ರತ್ನ ಪ್ರಶಸ್ತಿಯನ್ನೂ ಜೊತೆಗೆ ವಾಯ್ಸ್ ಆಫ್ ಆರಾಧನಾ ತಂಡದಲ್ಲಿ ನಿರಂತರವಾಗಿ ಭಾಗವಹಿಸಿ ಏಪ್ರಿಲ್ you ತಿಂಗಳ ವಿಜೇತರಾಗಿದ್ದಾರೆ. ಕರಾಟೆ ಕಪ್ಪು ಬೆಲ್ಟನ್ನು ಐದನೇ ತರಗತಿಯಲ್ಲಿಯೇ ಪಡೆದುಕೊಂಡಿದ್ದಾರೆ. ಡಾ. ಗಂಗೂಬಾಯಿ ಹಾನಗಲ್ ವಿಶ್ವವಿದ್ಯಾಲಯ ಮೈಸೂರು ಇಲ್ಲಿಯ ರಾಜ್ಯಮಟ್ಟದ ಜೂನಿಯರ್ ಗ್ರೇಡ್ ಪರೀಕ್ಷೆಯಲ್ಲಿ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ಪ್ರಸ್ತುತ ಸೀನಿಯರ್ ಗ್ರೇಡ್ ಭರತನಾಟ್ಯ ಪರೀಕ್ಷೆಗೆ ಮತ್ತು ಕರಾಟೆಯಲ್ಲಿ ಎರಡನೇ ಕಪ್ಪು ಬೆಲ್ಟ್ ಗೆ ತಯಾರಿ ನಡೆಸುತ್ತಿದ್ದಾರೆ. ಸಮಾಜ ಕಲ್ಯಾಣ ಸಂಸ್ಥೆ ಬೆಂಗಳೂರು ಹಾಗೂ ವಿಶ್ವ ಕನ್ನಡ ಜನಪದ ಪರಿಷತ್ ಬೆಂಗಳೂರು ಇವರು ರಾಷ್ಟ್ರೀಯ ನಾಟ್ಯ ರಾಣಿ ಶಾಂತಲೆ ಬಾಲ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ಕಲಾ ಕ್ಷೇತ್ರದ ಸಾಧನೆಯನ್ನು ಗುರುತಿಸಿ ಮ್ಯಾಕ್ಸ್ ಇನ್ಸೂರೆನ್ಸ್ ಕಂಪನಿ ಕಲಾ ರತ್ನ ಅವಾರ್ಡ್ ನೀಡಿ ಗೌರವಿಸಿದ್ದಾರೆ. ಬೇಸಿಗೆ ಶಿಬಿರದಲ್ಲಿ ಶ್ರೀ ದುರ್ಗಾ ಬಾಲಗೋಕುಲ ತೌಡುಗೋಳಿ ಮೂರು ದಿನದ ಶಿಬಿರದಲ್ಲಿ ಭಾಗವಹಿಸಿ ಭರತನಾಟ್ಯವನ್ನು ಮಾಡಿರುತ್ತಾರೆ.
ಆನ್ಲೈನ್ ಭರತನಾಟ್ಯ ಕಾಂಪಿಟಿಷನ್ ನಲ್ಲಿ ಎರಡನೇ ಸ್ಥಾನ ಪಡೆದು ಸಂತಸರಾಗಿದ್ದಾರೆ. ನಮಗೆ ಇಲ್ಲಿ ಪ್ರೋತ್ಸಾಹ ಅವಕಾಶ ನೀಡುವ ಪದ್ಮಶ್ರೀ ಮೇಡಂ ಮತ್ತು ವಾಯ್ಸ್ ಆಫ್ ಆರಾಧನ ತಂಡ ಎಲ್ಲಾ ಕಲಾ ಪೋಷಕರು ತಂಡದ ಎಲ್ಲರಿಗೂ ಅನಂತ ಧನ್ಯವಾದಗಳನ್ನು ತಿಳಿಸಿದ್ದಾರೆ.



