ಅಗ್ನಿ ಶಾಮಕ ಠಾಣೆ ಇದ್ದರು ನೀರಿಲ್ಲದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.ಎಲ್ಲಿ ಬೆಂಕಿ ಅವಘಡ ಸಂಬAಧಿಸಿದರೆ ತುರ್ತಾಗಿ ಅಲ್ಲಿಗೆ ಅಗ್ನಿಶಾಮಕ ವಾಹನಗಳು ಹಾಜರಿ ಇರುತ್ತವೆ.

ಆದರೆ ಇಲ್ಲಿ ಸಿಬ್ಬಂದಿಗಳಿಗೆ ಸಂಕಷ್ಟ ಅನುಭವಿಸುತ್ತಿರುವ ಸ್ಥಿತಿ ಒದಗಿ ಬಂದಿದೆ. ತಾಲೂಕಿಗೆ ಅತಿ ತುರ್ತಾಗಿ ಅಗ್ನಿಶಾಮಕ ಠಾಣೆ ಬೇಕೆಂದು ಹಲವಾರು ಬಾರಿ ರೈತ ಸಂಘ ಹಾಗು ಸಂಘಟನೆಗಳ ಹೋರಾಟದ ಪಲವಾಗಿ 2009ರಲ್ಲಿ ಶಾಸಕ ರುದ್ರೇಶಗೌಡರ ನೇತೃತ್ವದಲ್ಲಿ ಅಗ್ನಿಶಾಮಕ ಠಾಣೆ ನಿರ್ಮಾಣಮಾಡಲಾಗಿತ್ತು ಹಾಗು ಸಿಬ್ಬಂದಿಗಳಿಗೆ ವಸತಿ ನಿಲಯವನ್ನು ನಿರ್ಮಾಣ ಮಾಡಿ ಸುಮಾರು 21 ಕುಟುಂಬಗಳಿಗೆ ವ್ಯವಸ್ಥೆ ಮೂಲಭೂತ ಸೌಕರ್ಯಗಳನ್ನು ನೀಡಲಾಗಿತ್ತು. ಕುಡಿಯುವ ನೀರಿಗೆ ಬೋರವೆಲ್ ಹಾಗು ತೊಳಲು ಗ್ರಾಪಂ ನಿಂದ ಕುಡಿಯೊ ನೀರಿನ ವ್ಯವಸ್ಥೆಯನ್ನು ಒದಗಿಸಲಾಗಿತ್ತು.ಆದರೆ ದಿನ ಕಳೆದಂತೆ ಬೋರ್ ವೆಲ್ ಕಾರ್ಯನಿರತವಹಿಸದೆ ಸಂಪೂರ್ಣ ಜೀವಜಲ ನಿಂತು ಹೋಗಿದ್ದು ಅಲ್ಲಿಯ ನಿವಾಸಿಗಳಿಗೆ ಕುಡಿಯಲು ನೀರಿಲ್ಲದೆ ಪರಿತಪಿಸುವಂತಾಗಿದೆ.ಇನ್ನು 2 ಅಗ್ನಿ ಶಾಮಕ ವಾಹನ ನೀಡಿದ್ದರೂ 15 ವರ್ಷ ಹಳೆಯದಾದ ಒಂದು ಅಗ್ನಿ ಶಾಮಕ ವಾಹನ ನೀಡಿದ್ದು ಅದರಿಂದ ಯಾವುದೇ ಪ್ರಯೋಜನ ಆಗುತ್ತಿಲ್ಲ ಯಾವುದೇ ರೀತಿಯಲ್ಲಿ ಅಗ್ನಿ ಅವಘಡ ಸಂಬವಿಸಿದರೆ ಪಕ್ಕದ ತಾಲೂಕಿನಿಂದ ವಾಹನಗಳನ್ನು ತರುವ ಸ್ಥಿತಿ ಕೇವಲ ಒಂದೇ ವಾಹನದಲ್ಲಿ ಬೆಂಕಿ ನಲ್ಲಿಸುವ ಕಾರ್ಯವನ್ನು ಮಾಡುವ ಸ್ಥಿತಿ ಇದ್ದು ನಿಮಾಣವಾಗಿದೆ.ಇನ್ನು ಬೋರ್ ವೆಲ್ ನಿಂತಿರುವುದರಿAದ ನೀರನ್ನು ಭರ್ತಿ ಮಾಡಲು ಯಗಚಿ ಜಲಾಶಯ ಹಾಗು ವಿಷ್ಣು ಸಮುದ್ರ ಕೆರೆ ಅಲ್ಲಿ ವಾಹನವನ್ನು ಭರ್ತಿ ಮಾಡುವ ಸನ್ನಿವೇಶ ನಿರ್ಮಾಣ ವಾಗಿದೆ.ಕೂಡಲೆ ಇವುಗಳಿಗೆ ಪರಿಹಾರ ನೀಡುವಂತೆ ಸ್ಥಳೀಯರು ಹಾಗೂ ಸಂಘಟನೆಯ ಮುಖಂಡರು ಮನವಿ ಮಾಡಿದ್ರು. ಸುದ್ದಿಗಾರರೊಂದಿಗೆ ಮಾತನಾಡಿದ ಅಗ್ನಿಶಾಮಕ ದಳದ ಪ್ರಭಾರ ಠಾಣಾಧಿಕಾರಿ ಧರ್ಮಯ್ಯ, ನಮಗೆ ಇಲಾಖೆಯಿಂದ ಕುಡಿಯುವ ನೀರಿನ ಸೌಲಭ್ಯಕ್ಕಾಗಿ ಎರಡು ಬೋರ್ ವೆಲ್ ನೀಡಿದ್ದರೂ ಎರಡು ಸಹ ನೀರಿಲ್ಲದೆ ಸಂಪೂರ್ಣ ಬತ್ತಿ ಹೋಗಿದೆ.ಎರಡು ದಿನಗಳಿಗೊಮ್ಮೆ ಗ್ರಾಪಂಯಿAದ ನೀರನ್ನು ಒದಗಿಸುತ್ತಾರೆ.ಅದು ಸಹ ಸಾಲದಂತ ಪರಿಸ್ಥಿತಿ ನಿಮಾಣವಾಗಿದೆ.ನಮ್ಮ ಮೇಲಾಧಿಕಾರಿ ಹಾಗು ಶಾಸಕರಲ್ಲಿ ಈಗಾಗಲೆ ಕುಡಿಯುವ ನೀರಿಗೆ ವ್ಯವಸ್ಥೆ ಮಾಡಿಕೊಡಿ ಎಂದು ಮನೆಗೆ ಮಾಡಲಾಗಿದೆ ಎಂದ್ರು.



