ಕೂಡಿ ಆಟವಾಡುತ್ತಿದ್ದ ಗೆಳೆಯರ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. 9ನೇ ತರಗತಿ ಓದುತ್ತಿದ್ದ ಬಾಲಕನನನ್ನು 6ನೇ ಕ್ಲಾಸ್ ಬಾಲಕ ಕೊಂದಿದ್ದಾನೆ. ಹದಿಮೂರು ವರ್ಷದ ಅಪ್ರಾಪ್ತ ಬಾಲಕ ತನ್ನ ಮನೆ ಮುಂದೆಯೇ ಇರೋ ತನ್ನ ಸ್ನೇಹಿತನಾಗಿದ್ದ ಹದಿನೈದು ವರ್ಷದ ಬಾಲಕನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಈ ಘಟನೆ ಹುಬ್ಬಳ್ಳಿ ನಗರದ ಗುರುಸಿದ್ದೇಶ್ವರ ನಗರದಲ್ಲಿ ನಡೆದಿದ್ದು, ಗುರುಸಿದ್ದೇಶ್ವರ ನಗರದ ನಿವಾಸಿಯಾಗಿರೋ ಹದಿನೈದು ವರ್ಷದ ಚೇತನ್ ರಕ್ಕಸಗಿ ಕೊಲೆಯಾದ ಬಾಲಕ.
ಸೋಮವಾರ ಸಂಜೆ ಏಳು ಗಂಟೆ ಸಮಯದಲ್ಲಿ ಮನೆಯಿಂದ ಚಾಕುತಂದು, ಚೇತನ್ ನ ಹೊಟ್ಟೆಯ ಎಡಬಾಗದಲ್ಲಿ ಇರದಿದ್ದಾನೆ. ಚಾಕು ಇರಿಯುತ್ತಿದ್ದಂತೆ ಚೇತನ್ ಕುಸಿದು ಬಿದ್ದಿದ್ದಾನೆ. ಮಕ್ಕಳೆಲ್ಲರೂ ಚೀರುತ್ತಿದ್ದಂತೆ, ಕೊಲೆ ಮಾಡಿದ ಬಾಲಕನ ತಾಯಿ ಓಡಿ ಬಂದು, ಚೇತನ ನೆರವಿಗೆ ಬಂದಿದ್ದಾರೆ. ಕೂಡಲೇ ಚೇತನ್ ನನ್ನು, ಕೊಲೆ ಮಾಡಿದ ಬಾಲಕನ ತಾಯಿಯೇ ಕರೆದುಕೊಂಡು ಕಿಮ್ಸ್ ಆಸ್ಪತ್ರೆಗೆ ಬಂದಿದ್ದಾರೆ. ಆದ್ರೆ ಆಸ್ಪತ್ರೆ ಸೇರುವ ಮುನ್ನವೇ ಚೇತನ್ ಬಾರದ ಲೋಕಕ್ಕೆ ಹೋಗಿದ್ದಾನೆ.
ಇನ್ನು ಕೊಲೆಯಾದ ಚೇತನ್ ಈಗಷ್ಟೇ ಒಂಬತ್ತನೇ ತರಗತಿ ಪಾಸ್ ಆಗಿದ್ದ. ಕೊಲೆ ಮಾಡಿದ ಬಾಲಕ ಆರನೇ ತರಗತಿ ಉತ್ತೀರ್ಣನಾಗಿದ್ದು, ಇಬ್ಬರು ಎದುರು ಬಿದುರು ಮನೆಯ ಸ್ನೇಹಿತರು. ಸದ್ಯ ರಜೆ ಇದ್ದಿದ್ದರಿಂದ, ಎಲ್ಲಾ ಬಾಲಕರು ಸೇರಿದಕೊಂಡು ರಜಾ ದಿನಗಳನ್ನು ಮಜಾ ಮಾಡುತ್ತಿದ್ದರು.
ಅದರಂತೆ ಸೋಮವಾರ ಸಹ ಚೇತನ್ ಮತ್ತು ಕೊಲೆ ಮಾಡಿದ ಬಾಲಕ ಸೇರಿದಂತೆ ಐದಾರು ಸ್ನೇಹಿತರು ಸೇರಿಕೊಂಡು ಆಟವಾಡುತ್ತಿದ್ದರು. ಅಂಗಡಿ ರೀತಿಯ ಸೆಟ್ ಆಪ್ ಮಾಡಿಕೊಂಡು, ಅನೇಕ ವಸ್ತುಗಳನ್ನು ಮಾರಾಟ ಮಾಡುವ ಆಡವಾಡುತ್ತಿದ್ದರು. ಆಟವಾಡುತ್ತಿದ್ದಾಗಲೇ ಚೇತನ್ ಮತ್ತು ಕೊಲೆ ಮಾಡಿರೋ ಬಾಲಕನ ನಡುವೆ ಕಿರಿಕ್ ಆಗಿದೆ. ಅಷ್ಟಕ್ಕೆ ಬಾಲಕ ಮನೆಗೆ ಹೋಗಿ ಚಾಕುತಂದು ಚೇತನ್ಗೆ ಇರಿದಿದ್ದಾನೆ.
ಇನ್ನು ಕೊಲೆ ಮಾಡಿದ ಬಾಲಕ ಮತ್ತು ಕೊಲೆಯಾದ ಬಾಲಕ ಇಬ್ಬರು ಪರಮಾಪ್ತ ಸ್ನೇಹಿತರು. ಒಂದೇ ತಟ್ಟೆಯಲ್ಲಿ ಊಟ ಮಾಡುತ್ತಿದ್ದರು. ಪ್ರತಿನಿತ್ಯ ಇಬ್ಬರು ಮನೆ ಬಳಿಯೇ ಆಟವಾಡುತ್ತಿದ್ದರು. ಚೇತನ್, ಬಹಳ ಒಳ್ಳೆಯ ಹುಡುಗ ಇದ್ದ ಅಂತ ಸ್ವತ ಕೊಲೆ ಮಾಡಿದ ಬಾಲಕನ ತಾಯಿ ಕೂಡಾ ಕಣ್ಣೀರು ಹಾಕಿ, ಮಗ ಮಾಡಿದ ಕೃತ್ಯಕ್ಕೆ ಕಂಗಾಲಾಗಿದ್ದಾಳೆ. ಇನ್ನು ಹುಬ್ಬಳ್ಳಿಯಲ್ಲಿ ನಡೆದ ಘಟನೆ ಕೇಳಿ ಸ್ವತ ಪೊಲೀಸ್ ಅಧಿಕಾರಿಗಳು ಶಾಕ್ ಆಗಿದ್ದಾರೆ. ಮಾಹಿತಿ ತಿಳಿಯುತ್ತಿದ್ದಂತೆ ಕಿಮ್ಸ್ ಗೆ ಆಗಮಿಸಿದ ನಗರ ಪೊಲೀಸ್ ಆಯುಕ್ತ ಎನ್ ಶಶಿಕುಮಾರ್, ಪರಿಶೀಲನೆ ನಡೆಸಿದ್ದು, ಕೊಲೆಯಾದ ಬಾಲಕನ ಕುಟುಂಬದವರನ್ನು ಸಮಾಧಾನ ಮಾಡಿದರು.
ಪುಟ್ಟ ಪುಟ್ಟ ಮಕ್ಕಳು ಗಲಾಟೆ ಮಾಡಿಕೊಂಡು ಕೊಲೆ ಮಾಡಿದ್ದು, ನಮ್ಮ ಸರ್ವಿಸ್ ನಲ್ಲಿಯೇ ಇದೇ ಮೊದಲು. ಪಾಲಕರು ಮಕ್ಕಳ ಬಗ್ಗೆ ಜಾಗೃತಿ ವಹಿಸಿಬೇಕು ಎಂದು ನಗರ ಪೊಲೀಸ್ ಆಯುಕ್ತ ಎನ್ ಶಶಿಕುಮಾರ್, ಪಾಲಕರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಸದ್ಯ ಚೇತನ್ ಕೊಲೆಗೆ ಸಂಬಂಧಿದಂತೆ ಕಮರಿಪೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಕೊಲೆ ಮಾಡಿದ ಬಾಲಕನನ್ನು ಬಾಲ ಮಂದಿರಕ್ಕೆ ಕಳುಹಿಸಿದ್ದಾರೆ.
ತುಳುನಾಡಿನ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಬೆಳವಣಿಗೆಗೆ ಕಯ್ಯಾರ ಕಿಞ್ಞಣ್ಣ ರೈ ಅವರ ಕೊಡುಗೆ ಅಪಾರವಾಗಿದ್ದು, ಅವರನ್ನು ಈ ನಾಡಿನ…
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಕಾರಣಗಿರಿ ಗ್ರಾಮ ಭಾರತಿ ಟ್ರಸ್ಟ್ ಹಾಗೂ ಕಲಾದರ್ಶನ ಮಾಸಪತ್ರಿಕೆ ಆಶ್ರಯದಲ್ಲಿ ಪ್ರಥಮ ಸುದ್ದಿ ವಾಹಕ…
72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಅತ್ಯುತ್ತಮ ಪೋಷಕ ನಟಿ ರಾಷ್ಟ್ರೀಯ ಪ್ರಶಸ್ತಿ ಪಡೆದ ಕಾಸರಗೋಡು ವರ್ಕಾಡಿ ಮೂಲದ ರೂಪಶ್ರೀ ವರ್ಕಾಡಿ…
ಬಿಜೆಪಿಯ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನಾವಾಲಾ ಅವರು ತಮ್ಮ ಹುದ್ದೆ ಹಾಗೂ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ ಎನ್ನುವ…
ದೇಶದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಏರಿಳಿತ ಮುಂದುವರಿದಿದೆ. ಶುಕ್ರವಾರ ಚಿನ್ನದ ಬೆಲೆ ಪ್ರತಿ ಗ್ರಾಂಗೆ 25 ರೂಪಾಯಿ ಏರಿಕೆಯಾದರೂ,…
ತುಮಕೂರಿನಲ್ಲಿ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದೆ. ಮಾದಕ ವಸ್ತುಗಳ ವಿರುದ್ಧ ಜಾಗೃತಿ ಮೂಡಿಸುತ್ತಿದ್ದ ಪೊಲೀಸ್ ಸಿಬ್ಬಂದಿಯ ಪುತ್ರನೇ ಹೈಡ್ರೋ ಗಾಂಜಾ…