ವಿಶ್ವದ ಅತ್ಯಂತ ದುಬಾರಿ ಮಾವಿನ ಹಣ್ಣು ಪ್ರದರ್ಶನ ಧಾರವಾಡದಲ್ಲಿ ನಡೆಯುತ್ತಿದೆ. ಧಾರವಾಡ ತೋಟಗಾರಿಕೆ ಇಲಾಖೆಯ ಮಾವು ಮೇಳದಲ್ಲಿ ಪ್ರದರ್ಶನದಲ್ಲಿ ಜಪಾನಿನ ಮಿಯಾ ಜಾಕಿ ಎಂಬ ಒಂದು ಮಾವು ಕೂಡ ಇದೆ.
ಈ ಒಂದು ಮಿಯಾ ಜಾಕಿ ಮಾವಿನ ಹಣ್ಣಿಗೆ 10 ಸಾವಿರ ರೂಪಾಯಿ ಬೆಲೆ ಆಗಿದೆ. ಕೇಜಿಗೆ 2.7 ಲಕ್ಷ ರೂಪಾಯಿ ಬೆಲೆಯಾಗಿದೆ. ಧಾರವಾಡ ಕಲಕೇರಿ ಗ್ರಾಮದಲ್ಲಿ ಪ್ರಮೋದ ಗಾಂವಕರ್ ಎಂಬ ರೈತ ಮಿಯಾ ಜಾಕಿ ಹಣ್ಣನ್ನು ಬೆಳೆದಿದ್ದಾರೆ. ಕಳೆದ ನಾಲ್ಕು ವರ್ಷದಿಂದ ಕೇವಲ 4 ರಿಂದ 5 ಮಾವು ಬಿಡುತಿದ್ದ ಮಿಯಾ ಜಾಕಿ ಮರ, ಈ ವರ್ಷ ಬಂಪರ್ ಬೆಳೆ ನೀಡಿದೆ. 25 ಮಿಯಾ ಜಾಕಿ ಮಾವು ಬಿಟ್ಟಿದೆ. ಆ ಮೂಲಕ ಒಂದೇ ಮಾವಿನ ಮರದಿಂದ ಮಾಲೀಕ ಭರ್ಜರಿ ಲಾಭ ಮಾಡಿದ್ದಾರೆ. ಸದ್ಯ ಧಾರವಾಡ ಮಾವು ಮೇಳದಲ್ಲಿ ಇದರ ಬಗ್ಗೆ ಚರ್ಚೆ ಆಗ್ತಿದೆ. ಕಣ್ಣು, ಲಿವರ್‌ಗೆ ಇದು ಒಳ್ಳೆಯದು ಎನ್ನುತ್ತಾರೆ.
ಇನ್ನು, ಮಿಯಾ ಜಾಕಿಯ ಎಲ್ಲಾ ಹಣ್ಣುಗಳು ಈಗಾಗಲೇ ಆನ್‌ಲೈನ್‌ನಲ್ಲಿ ಮಾರಾಟವಾಗಿವೆ ಎಂದು ತಿಳಿದುಬಂದಿದೆ. ಪ್ರಮೋದ ಗಾಂವಕರ್ ಅವರು ಸುಮಾರು 7 ಸಾವಿರ ಮಾವಿನ ಮರಗಳನ್ನು ಹೊಂದಿದ್ದಾರೆ. ಅವುಗಳಲ್ಲಿ 25 ಬೇರೆ ಬೇರೆ ತಳಿಯ ಮಾವಿನ ಮರ ಇವೆ. ಮಾವಿನ ಹಣ್ಣನ್ನು ಕೊಪ್ಪಳದ ಗ್ರಾಹಕರೊಬ್ಬರಿಗೆ ಪ್ರತಿ ಹಣ್ಣಿಗೆ 10 ಸಾವಿರ ರೂಪಾಯಿಯಂತೆ ಮಾರಾಟ ಮಾಡಿದ್ದೇನೆ. ರಾಜ್ಯದಲ್ಲಿ ಕೆಲವೇ ಖರೀದಿದಾರರು ಲಭ್ಯವಿದ್ದಾರೆ. ಇದು ಪೌಷ್ಠಿಕಾಂಶದಿAದ ಸಮೃದ್ಧವಾಗಿದೆ. ವಿಟಮಿನ್ ಎ, ಬಿ ಮತ್ತು ಸಿ ಹೊಂದಿದೆ. ಹಣ್ಣಿನ ಸೇವನೆ ಚರ್ಮದ ಆರೋಗ್ಯಕ್ಕೂ ಒಳ್ಳೆಯದು. ಭದ್ರತೆ ಮತ್ತು ಸುರಕ್ಷತೆಯ ದೃಷ್ಟಿಯಿಂದ ಇತರ ಬೆಳೆಗಾರರಿಗೆ ಅರಿವು ಮೂಡಿಸುವುದಕ್ಕಾಗಿ ಇಲ್ಲಿ ಒಂದು ಹಣ್ಣನ್ನು ಪ್ರದರ್ಶಿಸಿದ್ದೇನಷ್ಟೆ ಎಂದು ಪ್ರಮೋದ ಗಾಂವಕರ್ ತಿಳಿಸಿದ್ದಾರೆ.
ತಾಲೂಕಿನ ವಿವಿಧೆಡೆ ಚಿರತೆ ಓಡಾಟ ಕಂಡುಬಂದಿರುವ ಬಗ್ಗೆ ಸ್ಥಳೀಯರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಎರಡು ಕಡೆ ಬೋನು…
ಮಂಗಳೂರು ಜಿಲ್ಲಾ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಯಾಗಿದ್ದ ಮಾಡೂರು ಯೂಸುಫ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳಿಗೆ ಮಂಗಳೂರಿನ ಎರಡನೇ ಹೆಚ್ಚುವರಿ…
ಪತಿಯ ಸ್ನೇಹಿತೆಯ ಮೇಲೆ ಅತ್ಯಾಚಾರ ನಡೆಸಲು ಸುಪಾರಿ ನೀಡಿದ ಆರೋಪದಲ್ಲಿ ಮಹಿಳೆಯೊಬ್ಬಳನ್ನು ಸೇರಿ ಐವರನ್ನು ಪೊಲೀಸರು ಬಂಧಿಸಿರುವ ಘಟನೆ ಕೇರಳದ…
ಕೊಲ್ಲೂರು ಠಾಣಾ ವ್ಯಾಪ್ತಿಯಲ್ಲಿ ರಸ್ತೆ ಬದಿಯಲ್ಲಿದ್ದ ಬೀಡಾಡಿ ದನವನ್ನು ಬಿಳಿ ಬಣ್ಣದ ಸ್ವೀಫ್ಟ್ ಡಿಸೈರ್ ಕಾರಿನಲ್ಲಿ ಹಿಂಸಾತ್ಮಕವಾಗಿ ಎಳೆದುಕೊಂಡು ಹೋದ…
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿ.ಸಿ. ಟ್ರಸ್ಟ್ ಹಾಗೂ ಜನಜಾಗೃತಿ ವೇದಿಕೆ ಟ್ರಸ್ಟ್ ದಕ್ಷಿಣ ಕನ್ನಡ ಜಿಲ್ಲೆ ಇದರ…
ದಕ್ಷಿಣ ಕನ್ನಡ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ವತಿಯಿಂದ ಮಹಾತ್ಮ ಗಾಂಧೀಜಿಯವರ 157ನೇ ಜನ್ಮದಿನದ ಅಂಗವಾಗಿ ಶುಕ್ರವಾರ ನಗರದ ರಾಜಾಜಿ…