ಏ. 23ರಂದು ಪಂಜಾಬ್ ಬಳಿ ಆಕಸ್ಮಿಕವಾಗಿ ಗಡಿ ದಾಟಿ ಪಾಕಿಸ್ತಾನದ ರೇಂಜರ್ ಸೆರೆ ಹಿಡಿದಿದ್ದ ಭಾರತದ ಗಡಿ ಭದ್ರತಾ ಪಡೆಯ ಯೋಧ ಪೂರ್ಣಮ್ ಕುಮಾರ್ ಶಾ ಅವರನ್ನು ಬುಧವಾರ ಅಟ್ಟಾರಿಯ ಚೆಕ್ ಪೋಸ್ಟ್‌ನಲ್ಲಿ ಭಾರತೀಯ ಅಧಿಕಾರಿಗಳಿಗೆ ಹಸ್ತಾಂತರಿಸಲಾಯಿತು.

ಸುಮಾರು 21 ದಿನಗಳ ಬಳಿಕ ಪೂರ್ಣಮ್ ಕುಮಾರ್ ಮನೆಗೆ ಮರಳಿದ್ದು, ಅವರ ಪತ್ನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.ಪೂರ್ಣಮ್ ಕುಮಾರ್ ಪಶ್ಚಿಮ ಬಂಗಾಳ ಮೂಲದವರಾಗಿದ್ದು, ಅವರ ಪತ್ನಿ ರಜನಿ ಶಾ ಇದೀಗ ಮೋದಿ ಮತ್ತು ಕೇಂದ್ರ ಸರ್ಕಾರಕ್ಕೆ ಧನ್ಯವಾದ ತಿಳಿಸಿದ್ದಾರೆ.



