ಶ್ರೀಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷನಾಗಿ ಮಾಜಿ ರೌಡಿಶೀಟರ್ ಹರೀಶ್ ಇಂಜಾಡಿ ನೇಮಕಗೊಂಡಿರುವ ಬಗ್ಗೆ ಬಿಜೆಪಿ ನಾಯಕ ಸಿಟಿ ರವಿ ಪ್ರತಿಕ್ರಿಯೆ ನೀಡಿದ್ದು, ರೌಡಿಶೀಟರ್ ಅಂದ ಮಾತ್ರಕ್ಕೆ ಎಲ್ಲರು ರೌಡಿಗಳಾಗಿರುತ್ತಾರೆ ಅಂತ ಭಾವಿಸಬಾರದು, ಕೆಲವರು ರೌಡಿ ಅಲ್ಲದಿದ್ದರೂ ಅವರ ವಿರುದ್ಧ ರೌಡಿಶೀಟರ್ ಹಾಕಿರಲಾಗಿರುತ್ತೆ, ಕೆಲವರು ರೌಡಿಗಳಾಗಿದ್ದರೂ ಅವರ ವಿರುದ್ಧ ರೌಡಿಶೀಟರ್ ಇರೋದಿಲ್ಲ, ತನ್ನ ವಿರುದ್ಧವೂ ರೌಡಿಶೀಟರ್ ಅಂತ ದಾಖಲಿಸಲಾಗಿದೆ, ಆದರೆ ತಾನು ರೌಡಿಯಲ್ಲ, ಪಕ್ಷದ ಸಿದ್ಧಾಂತಗಳನ್ನು ಅನುಸರಿಸುವ ಕಾರಣಕ್ಕೆ ರೌಡಿಶೀಟರ್ ಹಾಕಲಾಗಿದೆ, ಯಾರ ವಿರುದ್ಧವೂ ವಿನಾಕಾರಣ ಕೈ ಮಾಡಿದವನಲ್ಲ ಎಂದು ಹೇಳಿದ್ದಾರೆ.




