ಬಿ.ಜೆ.ಪಿ ಒ.ಬಿ.ಸಿ.ಮೋರ್ಚಾ ಬಂಟ್ವಾಳ ಮಂಡಲದ ವತಿಯಿಂದ, ಭಾರತ ಮತ್ತು ಪಾಕಿಸ್ತಾನ ಯುದ್ಧದ ವಿಚಾರವಾಗಿ ನಮ್ಮ ನೆಚ್ಚಿನ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಅವಹೇಳನಕಾರಿ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ಮಾಡಿದ ಕಾಂಗ್ರೆಸ್ಸಿನ ಅಮಲ್ ರಾಮಚಂದ್ರನ್ ನ ವಿರುದ್ದ ದೂರನ್ನು ದಾಖಲಿಸಲಾಯಿತು.
ಈ ಸಂಧರ್ಭ ಬಿ.ಜೆ.ಪಿ ಪ್ರಮುಖರಾದ ಶ್ರೀ. ತುಂಗಪ್ಪ ಬಂಗೇರ ಮತ್ತು ರಮಾನಾಥ ರಾಯಿ , ಮಂಡಲ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷರಾದ ಯಶೋದರ ಕರ್ಬೆಟ್ಟು, ಹಾಗೂ ಜಿಲ್ಲಾ ಹಿಂದುಳಿದ ವರ್ಗ ಪ್ರದನ ಕಾರ್ಯದರ್ಶಿ ಮೋನಪ್ಪ ದೇವಸ್ಯ ಹಾಗೂ ಬಿ.ಜೆ.ಪಿ ಯುವ ಮೋರ್ಚಾ ಬಂಟ್ವಾಳ ಮಂಡಲಾಧ್ಯಕ್ಷರಾದ ದಿನೇಶ್ ಶೆಟ್ಟಿ ದಂಬೆದಾರ್, ಯುವಮೋರ್ಚಾ ಜಿಲ್ಲಾ ಕಾರ್ಯದರ್ಶಿ ಸುರೇಶ್ ಕೋಟ್ಯಾನ್, ಹಿಂದುಳಿದ ವರ್ಗ ಮೋರ್ಚ ಬಂಟ್ವಾಳ ಮಂಡಲ ದ ಕೋಶಾಧಿಕಾರಿ ಪುನೀತ್ ಕಲ್ಲಡ್ಕ, ಪ್ರಧಾನ ಕಾರ್ಯದರ್ಶಿಗಳಾದ ಮೋಹನ್ ದಾಸ್ ಮತ್ತು ಉಮೇಶ್ ಅರಳ ಹಾಗೂ ಉಪಾಧ್ಯಕ್ಷರಾದ ಅಶೋಕ್, ಮರ್ದೋಳಿ ಪ್ರಮುಖರಾದ ವೀರೇಂದ್ರ ಉಪಸ್ಥಿತರಿದ್ದರು.



