ಆಪರೇಷನ್ ಕೆಲ್ಲಾರ್‌ನಲ್ಲಿ 14 ಉಗ್ರರ ಹಿಟ್ ಲಿಸ್ಟ್ ರೆಡಿ ಮಾಡಿಕೊಂಡ ಭಾರತೀಯ ಸೇನೆ ಕಳೆದ 48 ಗಂಟೆಗಳಲ್ಲೇ 6 ಉಗ್ರರನ್ನ ನರಕಕ್ಕೆ ಪಾರ್ಸೆಲ್ ಮಾಡಿದೆ. ಅಟ್ಟಾಡಿಸಿಕೊಂಡು ಹೋಗಿ ಉಗ್ರರನ್ನ ಹೊಡೀತಿರುವ ಭದ್ರತಾ ಪಡೆ, ಹುಡುಕಿ, ಹುಡುಕಿ ಭಯೋತ್ಪಾದಕರ ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದೆ.

ಇವತ್ತು ಪುಲ್ವಾಮಾದ ಟ್ರಾಲ್ನಲ್ಲಿ ಭಾರತೀಯ ಸೇನೆ ಜೈಶ್ ಏ ಮೊಹಮ್ಮದ್ನ ಮೂವರು ಉಗ್ರರನ್ನ ಹೊಡೆದುರುಳಿಸಿದೆ. ಸೇನೆ, ಉಗ್ರರ ನಡುವೆ ನಡೆದ ಎನ್ಕೌಂಟರ್ನಲ್ಲಿ ಮೂವರ ಹತ್ಯೆಯಾಗಿದೆ.



